- Home
- Entertainment
- Cine World
- Trending ಆದ ನೀಲಿ ಸೀರೆ ಸುಂದರಿ ಮರಾಠಿ ನಟಿ ಗಿರಿಜಾ ಓಕ್: ಸಿಡ್ನಿ ಸ್ವೀನಿ, ಮೋನಿಕಾ ಬೆಲ್ಲೂಚಿ ಜೊತೆ ಹೋಲಿಕೆ!
Trending ಆದ ನೀಲಿ ಸೀರೆ ಸುಂದರಿ ಮರಾಠಿ ನಟಿ ಗಿರಿಜಾ ಓಕ್: ಸಿಡ್ನಿ ಸ್ವೀನಿ, ಮೋನಿಕಾ ಬೆಲ್ಲೂಚಿ ಜೊತೆ ಹೋಲಿಕೆ!
ಮೂಲತಃ ಮರಾಠಿ ಸಿನಿಮಾ ರಂಗದ ಪ್ರಮುಖ ನಟಿ ಗಿರಿಜಾ ಓಕ್. ಮಹಾರಾಷ್ಟ್ರ ಮೂಲದ ಚೆಲುವೆ ಮರಾಠಿ ಹಾಗೂ ಹಿಂದಿ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಚಿತ್ರವಾದ 'ಶೋರ್ ಇನ್ ದಿ ಸಿಟಿ'ಯಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು.

ಸೋಷಿಯಲ್ ಮೀಡಿಯಾ ಸೆನ್ಸೇಶನ್
ಮರಾಠಿ ನಟಿ ಗಿರಿಜಾ ಓಕ್ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದಾರೆ. ಎಕ್ಸ್‌ನಲ್ಲಿ ನೀಲಿ ಸೀರೆಯಲ್ಲಿನ ಅವರ ಫೋಟೋ, ವೀಡಿಯೋ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ. ಇವರನ್ನು ಖ್ಯಾತ ಇಟಾಲಿಯನ್ ನಟಿ ಮೋನಿಕಾ ಬೆಲ್ಲೂಚಿ, ಹಾಲಿವುಡ್‌ನ ಸಿಡ್ನಿ ಸ್ವೀನಿ ಜೊತೆ ಹೋಲಿಕೆ ಮಾಡಲಾಗುತ್ತಿದೆ.
ಶಾಕ್ ಆಯ್ತು
ನನ್ನ ಗೆಳತಿಯೊಬ್ಬಳು ಫೋನ್ ಮಾಡಿ ಇದನ್ನು ತಿಳಿಸಿದಾಗ ಶಾಕ್ ಆಯ್ತು. ಇದು ಖುಷಿಯೇ. ಆದರೆ ಬಾಬಿ ಲವರ್ ಎಂಬ ಟ್ಯಾಗ್‌ಲೈನ್‌ನಡಿ ಕೀಳು ವಿಚಾರಕ್ಕೂ ನನ್ನ ವೀಡಿಯೋ ಬಳಕೆಯಾಗಿದೆ ಎಂದು ತಿಳಿಯಿತು.
ನಮ್ಮದು ಕಲಾವಿದರ ಕುಟುಂಬ
ಇಂಥದ್ದರ ಮೇಲೆ ನಮಗೂ ನಿಯಂತ್ರಣ ಇರೋದಿಲ್ಲ. ನಮ್ಮದು ಕಲಾವಿದರ ಕುಟುಂಬ. ಹೀಗಾಗಿ ಇದರಿಂದ ಮನೆಯಲ್ಲೇನೂ ಸಮಸ್ಯೆ ಆಗಿಲ್ಲ ಎಂದು ನಟಿ ಗಿರಿಜಾ ಓಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಮರಾಠಿ ನಟಿ ಗಿರಿಜಾ ಓಕ್
ಮೂಲತಃ ಮರಾಠಿ ಸಿನಿಮಾ ರಂಗದ ಪ್ರಮುಖ ನಟಿ ಗಿರಿಜಾ ಓಕ್. ಮಹಾರಾಷ್ಟ್ರ ಮೂಲದ ಚೆಲುವೆ ಮರಾಠಿ ಹಾಗೂ ಹಿಂದಿ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಚಿತ್ರವಾದ 'ಶೋರ್ ಇನ್ ದಿ ಸಿಟಿ'ಯಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು.
ರಂಗಭೂಮಿಯಿಂದ ವೃತ್ತಿಜೀವನ
ಅವರು ರಂಗಭೂಮಿಯಲ್ಲೂ ಸಕ್ರಿಯರಾಗಿದ್ದು, ರಂಗಭೂಮಿಯಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ. ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಈ ಟ್ರೆಂಡಿಂಗ್ ಅವರಿಗೆ ಒಂದು ದೊಡ್ಡ ವೇದಿಕೆಯನ್ನು ಒದಗಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

