- Home
- Entertainment
- Cine World
- ಜನ್ಮಕೊಟ್ಟ ತಂದೆ-ತಾಯಿಗೆ ಸುಳ್ಳು ಹೇಳಿ IT Job ಬಿಟ್ರು, ಸಿನಿಮಾದಲ್ಲಿ 100 ಕೋಟಿ ರೂ ಗಳಿಸಿದ್ರು; ಆ ನಟ ಯಾರು?
ಜನ್ಮಕೊಟ್ಟ ತಂದೆ-ತಾಯಿಗೆ ಸುಳ್ಳು ಹೇಳಿ IT Job ಬಿಟ್ರು, ಸಿನಿಮಾದಲ್ಲಿ 100 ಕೋಟಿ ರೂ ಗಳಿಸಿದ್ರು; ಆ ನಟ ಯಾರು?
Actor Pradeep Ranganathan: ಮಕ್ಕಳಿಗೆ ಉದ್ಯೋಗ ಇಲ್ಲ ಅಂದರೆ ಕುಟುಂಬಸ್ಥರು ದಂಗಾಗುತ್ತಾರೆ. ಆದರೆ ಇಲ್ಲೋರ್ವ ನಟ ಐಟಿ ಜಾಬ್ ಬಿಟ್ಟರೂ ಕೂಡ, ನೈಟ್ ಶಿಫ್ಟ್, WFH ಎಂದು ಸುಳ್ಳು ಹೇಳಿದ್ದರು. ಆದರೆ ಅವರ ಸಿನಿಮಾವು ನೂರು ಕೋಟಿ ರೂಪಾಯಿ ಕಮಾಯಿ ಮಾಡಿತು.

ಕೆಲಸಕ್ಕೆ ರಾಜೀನಾಮೆ ಕೊಟ್ರು
ಹೌದು, ನಟ ಪ್ರದೀಪ್ ರಂಗನಾಥನ್ ಅವರು ಚಿತ್ರರಂಗಕ್ಕೆ ಬರುವ ಮೊದಲು ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ನಟನೆ ಮೇಲೆ ಭಾರೀ ಒಲವಿತ್ತು. ಸಿನಿಮಾದಲ್ಲಿ ಏನಾದರೂ ಸಾಧಿಸಬೇಕು ಎಂದು ಅವರು ಕೆಲಸಕ್ಕೆ ರಾಜೀನಾಮೆ ನೀಡಿದರು.
ಪಾಲಕರನ್ನು ಮೂರ್ಖರನ್ನಾಗಿ ಮಾಡಿದ್ರು
ಸಿನಿಮಾ ಮಾಡೋದು ಸುಲಭ ಇಲ್ಲ, ಎಲ್ಲವೂ ಅಂದುಕೊಂಡ ಹಾಗೆ ಆಗೋದಿಲ್ಲ. ಸಿನಿಮಾ ಕೆಲಸ ಶುರುವಾಗಿ, ರಿಲೀಸ್ ಆಗೋವರೆಗೂ ಏನೂ ಹೇಳಲು ಆಗೋದಿಲ್ಲ. ಹೀಗಾಗಿ ಪ್ರದೀಪ್ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ, ನೈಟ್ ಶಿಫ್ಟ್ ಇದೆ ಎಂದು ಸುಳ್ಳು ಹೇಳಿದರು. ಮಗನಿಗೆ ಕೆಲಸ ಇದೆ ಎಂದು ಅವರ ಪಾಲಕರು ನಂಬಿದರು. ಆದರೆ ಈ ವಿಷಯ ಅವರ ತಾಯಿಗೆ ಮಾತ್ರ ತಿಳಿದಿತ್ತು. ತಂದೆಗೆ ಮಾತ್ರ ಗೊತ್ತಾಗಿರಲಿಲ್ಲ. ಹಗಲಿನಲ್ಲಿ ನಿದ್ದೆ ಮಾಡುತ್ತಿದ್ದ ಪ್ರದೀಪ್ ಅವರು, ರಾತ್ರಿ ಜಾಹೀರಾತು ಮತ್ತು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದರು.
ಬ್ಯಾಕ್ ಟು ಬ್ಯಾಕ್ ಸಿನಿಮಾ ಹಿಟ್ ಆಯ್ತು!
ಇಂದು ಪ್ರದೀಪ್ ಭಾರತೀಯ ಚಿತ್ರರಂಗದ ಯಶಸ್ವಿ ನಟ, ನಿರ್ದೇಶಕರ. ಮೊದಲ ಮೂರು ಸಿನಿಮಾಗಳಲ್ಲಿ ಸತತವಾಗಿ ₹100 ಕೋಟಿ ಗಳಿಕೆ ಕಂಡ (ಹ್ಯಾಟ್ರಿಕ್) ಮೊದಲ ಭಾರತೀಯ ನಟ ಕೂಡ ಹೌದು.
ಯಶಸ್ವಿ ಸಿನಿಮಾಗಳು
'ಲವ್ ಟುಡೇ' (Love Today), 'ಡ್ರ್ಯಾಗನ್' (Dragon) ಮತ್ತು 'ಡ್ಯೂಡ್' (Dude) ಸಿನಿಮಾಗಳಿಗೆ ಯಶಸ್ಸು ಸಿಕ್ಕಿವೆ. ಇತ್ತೀಚೆಗೆ ಅವರ 'ಲವ್ ಇನ್ಶೂರೆನ್ಸ್ ಕಂಪನಿ' (Love Insurance Kompany) ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನಸು ಕಂಡು ಅದಕ್ಕಾಗಿ ದೊಡ್ಡ ರಿಸ್ಕ್ ತಗೊಂಡು ಯಶಸ್ಸು ಕಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

