- Home
- Entertainment
- Cine World
- ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ, ಮೈಸಾ ಆ್ಯಕ್ಷನ್ ಸಿನಿಮಾ ರಿಲೀಸ್ ಅಪ್‌ಡೇಟ್ ಕೊಟ್ಟ ನಟಿ
ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ, ಮೈಸಾ ಆ್ಯಕ್ಷನ್ ಸಿನಿಮಾ ರಿಲೀಸ್ ಅಪ್‌ಡೇಟ್ ಕೊಟ್ಟ ನಟಿ
ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ, ಮೈಸಾ ಆ್ಯಕ್ಷನ್ ಸಿನಿಮಾ ರಿಲೀಸ್ ಅಪ್‌ಡೇಟ್ ಕೊಟ್ಟ ನಟಿ, ಇದುವರೆಗೆ ತೆರೆ ಮೇಲೆ ನೋಡಿದ ರಶ್ಮಿಕಾ ಮಂದಣ್ಣಗಿಂತ ಮೈಸಾ ಸಿನಿಮಾದಲ್ಲಿನ ರಶ್ಮಿಕಾ ಭಾರಿ ಭಿನ್ನ. ಬುಡುಕಟ್ಟು ಸಮುದಾಯದ ಮಹಿಳೆಯ ಕತೆಯೊಂದಿಗೆ ರಶ್ಮಿಕಾ ಬರುತ್ತಿದ್ದಾರೆ.

ಮೈಸಾ ಸಿನಿಮಾ
ರಶ್ಮಿಕಾ ಮಂದಣ್ಣ ಹೊಸ ಹೊಸ ಪಾತ್ರಗಳು, ಭಿನ್ನ ಕತೆಗಳ ಮೂಲಕ ತೆರೆ ಮೇಲೆ ಮಿಂಚಿದ್ದಾರೆ. ಕಾಲೇಜು ಹುಡುಗಿಯಿಂದ, ಪ್ರೇಮ ಕತೆ ಸೇರಿದಂತೆ ಛಾವಾ ಸಿನಿಮಾದಲ್ಲಿ ಸಂಭಾಜಿ ಮಹಾರಾಜಾರ ಪತ್ನಿ ಎಸುಬಾಯಿ ಬೋನ್ಸಾಲೆ ಸೇರಿದಂತೆ ಹಲವು ಭಿನ್ನ ಪಾತ್ರಗಳಲ್ಲಿ ರಶ್ಮಿಕಾ ಅಭಿಮಾನಿಗಳ ಮನಗೆದ್ದಿದ್ದಾರೆ. ಆದರೆ ಇದೆಲ್ಲದಕ್ಕಿಂತ ಭಿನ್ನತೆ, ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಇದೀಗ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದುವೆ ಮೈಸಾ ಸಿನಿಮಾ.
ಉಗ್ರ ರೂಪದಲ್ಲಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದ ಮೈಸಾ ಸಿನಿಮಾದ ಕೆಲ ಪೋಸ್ಟರ್‌ಗಳು ಭಾರಿ ಸದ್ದು ಮಾಡುತ್ತಿದೆ. ರಕ್ತಸಿಕ್ತ ಅಧ್ಯಾಯದ ಸೂಚನೆಗಳು ನೀಡುತ್ತಿದೆ. ಕೈಯಲ್ಲಿ ಆಯುಧ, ಮತ್ತೊಂದು ಕೈಗೆ ಕೋಳ ಹೀಗೆ ಒಂದೊಂದು ಪೋಸ್ಟರ್ ಕರಾಳ ಅಧ್ಯಾಯದ ಸೂಚನೆ ನೀಡುತ್ತಿದೆ. ಇದೀಗ ರಶ್ಮಿಕಾ ಮಂದಣ್ಣ ಸಿನಿಮಾದ ಪೋಸ್ಟರ್ ಪೋಸ್ಟ್ ಮಾಡಿ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಡಿಸೆಂಬರ್ 24, ಜಗತ್ತು ಆಕೆ ಹೆಸರು ನೆನಪಿನಲ್ಲಿಟ್ಟುಕೊಳ್ಳುತ್ತೆ
ಮೈಸಾ ಸಿನಿಮಾ ಕುರಿತು ಪೋಸ್ಟ್ ಮಾಡಿರುವ ರಶ್ಮಿಕಾ ಮಂದಣ್ಣ ಈ ಜಗತ್ತು ಆಕೆಯ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುತ್ತೆ ಎಂದಿದ್ದಾರೆ. ಡಿಸೆಂಬರ್ 24ರಂದು ಮೈಸಾ ಸಿನಿಮಾದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಲಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.ಇದೀಗ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಗೊಂಡ ಬುಡಕಟ್ಟು ಸಮುದಾಯದ ಕತೆ
ಗೊಂಡ ಬುಡಕಟ್ಟು ಸಮುದಾಯದ ಮಹಿಳೆಯ ಹೋರಾಟದ ಕತೆಯೊಂದಿಗೆ ರಶ್ಮಿಕಾ ಮಂದಣ್ಣ ಬರುತ್ತಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಾಣದ ಈ ಮೈಸಾ ಸಿನಿಮಾವನ್ನು ರವೀಂದ್ರ ಪುಲ್ಲೆ ನಿರ್ದೇಶನ ಮಾಡುತ್ತಿದ್ದಾರೆ. ಈ ಕುರಿತು ನಿರ್ದೇಶಕರು ಕೆಲ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಕತ್ತಿ ಹಿಡಿದಿರುವ ರಶ್ಮಿಕಾ ಮಂದಣ್ಣ ಪೋಸ್ಟರ್ ಬಹುತೇಕರನ್ನು ಅಚ್ಚರಿಗೊಳಿಸಿತ್ತು.
ಬಡುಕಟ್ಟು ಸಂಸ್ಕೃತಿ, ಸಂಪ್ರದಾಯಗಳ ಅನಾವರಣ
ಗೊಂಡಾ ಸಮುದಾಯದ ಕತೆಯೊಂದಿಗೆ ನಿರ್ದೇಶಕ ರವೀಂದ್ರ ಬಂದಿದ್ದಾರೆ. ಹೋರಾಟದ ಹಾದಿ, ಸಂಕಷ್ಟ, ಕತ್ತಿ, ಬಂದೂಕು ಹಿಡಿದು ತನ್ನವರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತ ಮೈಸಾ ಹೆಸರು ಜಗತ್ತೇ ನೆನನಪಿಲ್ಲಿಡಲಿದೆ ಎಂದು ಖುದ್ದು ರಶ್ಮಿಕಾ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾ ಭಾರತೀಯ ಸಿನಿಮಾದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸುವ ಸಾಧ್ಯತೆ ಇದೆ.
ಬಡುಕಟ್ಟು ಸಂಸ್ಕೃತಿ, ಸಂಪ್ರದಾಯಗಳ ಅನಾವರಣ
ಜೂನ್‌ನಲ್ಲಿ ಘೋಷಣೆ ಮಾಡಿದ್ದ ರಶ್ಮಿಕಾ ಮಂದಣ್ಣ
2025ರ ಜೂನ್ ತಿಂಗಳಲ್ಲಿ ರಶ್ಮಿಕಾ ಮಂದಣ್ಣ ಮೈಸಾ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಪ್ರತಿ ಬಾರಿ ನಾನು ಏನಾದರು ಹೊಸದು , ಎಲ್ಲಕ್ಕಿಂತ ಭಿನ್ನ, ಅಷ್ಟೇ ರೋಮಾಂಚನ ನೀಡಲು ಬಯಸುತ್ತೇನೆ. ಈ ಇದಕ್ಕೆ ಮೈಸಾ ಕೂಡ ಒಂದು ಪ್ರಮುಖ ಪಾಜೆಕ್ಟ್ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದರು.
ಜೂನ್‌ನಲ್ಲಿ ಘೋಷಣೆ ಮಾಡಿದ್ದ ರಶ್ಮಿಕಾ ಮಂದಣ್ಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

