- Home
- Entertainment
- Cine World
- ಪುಷ್ಪ ಜೋಡಿ ಮತ್ತೆ ಕಮ್‌ಬ್ಯಾಕ್: ಅಟ್ಲಿ ನಿರ್ದೇಶನದಲ್ಲಿ ಬಾಲಿವುಡ್ ಹೀರೋಯಿನ್ಸ್ ಜೊತೆ ರಶ್ಮಿಕಾ ಮಂದಣ್ಣ
ಪುಷ್ಪ ಜೋಡಿ ಮತ್ತೆ ಕಮ್‌ಬ್ಯಾಕ್: ಅಟ್ಲಿ ನಿರ್ದೇಶನದಲ್ಲಿ ಬಾಲಿವುಡ್ ಹೀರೋಯಿನ್ಸ್ ಜೊತೆ ರಶ್ಮಿಕಾ ಮಂದಣ್ಣ
ಈ ಚಿತ್ರದಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಹಾಗೂ ಮೃಣಾಲ್ ಠಾಕೂರ್ ಕೂಡ ನಟಿಸುತ್ತಿದ್ದು, ಈಗ ಇವರ ಜತೆಗೆ ಸೌತ್ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಗೊಂಡಿದ್ದಾರೆ.

ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮತ್ತೆ ಜೊತೆಯಾಗುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಸರಣಿಯ ನಂತರ ಈ ಜೋಡಿ ಕಾಣಿಸಿಕೊಳ್ಳುತ್ತಿರುವುದು ಅಟ್ಲಿ ನಿರ್ದೇಶನದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ.
ವಿಶೇಷ ಎಂದರೆ ಈ ಚಿತ್ರದಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಹಾಗೂ ಮೃಣಾಲ್ ಠಾಕೂರ್ ಕೂಡ ನಟಿಸುತ್ತಿದ್ದು, ಈಗ ಇವರ ಜತೆಗೆ ಸೌತ್ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಗೊಂಡಿದ್ದಾರೆ.
ಒಂದೇ ಚಿತ್ರದಲ್ಲಿ ನಾಲ್ಕು ಮಂದಿ ಕಾಣಿಸಿಕೊಳ್ಳುತ್ತಿದ್ದು, ಯಾರ ಪಾತ್ರ ಹೇಗಿರುತ್ತದೆ, ಯಾರ ಪಾತ್ರದ ಅವಧಿ ಎಷ್ಟು ಎನ್ನುವ ಲೆಕ್ಕಾಚಾರಗಳು ಆಗಲೇ ಶುರುವಾಗಿವೆ.
ಶ್ರೀವಲ್ಲಿಯಾಗಿ ಪುಷ್ಪ ಮತ್ತು ಪುಷ್ಪ 2 ಚಿತ್ರಗಳೊಂದಿಗೆ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಜೋಡಿ ಈಗಾಗಲೇ ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಕಾಂಬೊ ಎಂದು ಬ್ರಾಂಡ್ ಆಗಿದೆ.
ಇನ್ನು ಲಾಸ್ ಏಂಜಲೀಸ್‌ನಲ್ಲಿ ಈ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಲುಕ್ ಟೆಸ್ಟ್ ಮತ್ತು ಬಾಡಿ ಸ್ಕ್ಯಾನ್ ಮಾಡಿದ್ದಾರೆ. ಜೊತೆಗೆ ಅಟ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಸಹ ಪ್ರಾರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

