- Home
- Entertainment
- Cine World
- ಮಕ್ಕಳು ದೊಡ್ಡವರಾದ ಮೇಲೆ ಸನ್ಯಾಸಿಯಾಗುತ್ತೇನೆ: ಶಾಕಿಂಗ್ ಹೇಳಿಕೆ ಕೊಟ್ಟ ಪವನ್ ಮಾಜಿ ಪತ್ನಿ ರೇಣು ದೇಸಾಯಿ!
ಮಕ್ಕಳು ದೊಡ್ಡವರಾದ ಮೇಲೆ ಸನ್ಯಾಸಿಯಾಗುತ್ತೇನೆ: ಶಾಕಿಂಗ್ ಹೇಳಿಕೆ ಕೊಟ್ಟ ಪವನ್ ಮಾಜಿ ಪತ್ನಿ ರೇಣು ದೇಸಾಯಿ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ರೇಣು ದೇಸಾಯಿ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಸನ್ಯಾಸಿಯಾಗುವುದಾಗಿ ಹೇಳಿ ಶಾಕ್ ನೀಡಿದ್ದಾರೆ.

ಒಂದು ಕಾಲದ ಹೀರೋಯಿನ್
ರೇಣು ದೇಸಾಯಿ ಒಂದು ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದ್ರು. 'ಬದ್ರಿ', 'ಜಾನಿ' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಮಯದಲ್ಲಿ ಪವನ್ ಕಲ್ಯಾಣ್ ಜೊತೆ ಪ್ರೀತಿಯಲ್ಲಿ ಬಿದ್ದರು. ಕೆಲವು ಕಾಲ ಲಿವ್-ಇನ್‌ನಲ್ಲಿದ್ದು, ನಂತರ ಮದುವೆಯಾದರು. ಇವರಿಗೆ ಅಕೀರಾ ನಂದನ್ ಎಂಬ ಮಗ ಮತ್ತು ಆಧ್ಯ ಎಂಬ ಮಗಳಿದ್ದಾಳೆ. ನಂತರ ಪವನ್, ರೇಣು ಬೇರೆಯಾದರು. ಪವನ್ ಕಲ್ಯಾಣ್ ನಟಿ ಅನ್ನಾ ಲೆಜ್ನೆವಾ ಅವರನ್ನು ಮದುವೆಯಾದರು. ಆದರೆ ರೇಣು ದೇಸಾಯಿ ಮರುಮದುವೆಯಾಗದೆ ಒಂಟಿಯಾಗಿಯೇ ಉಳಿದರು.
ಮತ್ತೊಂದು ಟ್ವಿಸ್ಟ್ ನೀಡಿದ ರೇಣು
ಕೆಲ ಕಾಲದ ನಂತರ ರೇಣು ದೇಸಾಯಿ ಎರಡನೇ ಮದುವೆಗೆ ಸಿದ್ಧರಾಗಿದ್ದರು. ಆದರೆ ನಂತರ ಅದನ್ನು ಕ್ಯಾನ್ಸಲ್ ಮಾಡಿಕೊಂಡರು. ಮಗ ಅಕೀರಾ ನಂದನ್ ಮತ್ತು ಮಗಳು ಆಧ್ಯ ಚಿಕ್ಕವರಾಗಿದ್ದರಿಂದ, ತಾನು ಮದುವೆಯಾದರೆ ಮಕ್ಕಳ ಪಾಲನೆಗೆ ತೊಂದರೆಯಾಗುತ್ತದೆ ಎಂದು ಭಾವಿಸಿದ್ದರು. ಅವರು ಬೆಳೆದು ದೊಡ್ಡವರಾದ ಮೇಲೆ ಮದುವೆಯಾಗುವುದಾಗಿ ಹೇಳಿದ್ದರು. ಆದರೆ ಈಗ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಅವರ ಇತ್ತೀಚಿನ ಹೇಳಿಕೆ ಆಶ್ಚರ್ಯ ಮೂಡಿಸಿದೆ.
ಕೇಸರಿ ಬಣ್ಣ ಇಷ್ಟ
ಎರಡನೇ ಮದುವೆಯಾಗುತ್ತೇನೆ ಎಂದಿದ್ದ ರೇಣು, ಈಗ ಸನ್ಯಾಸಿಯಾಗುವುದಾಗಿ ಹೇಳಿ ಶಾಕ್ ನೀಡಿದ್ದಾರೆ. ಮುಂದೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ. ಮಕ್ಕಳು ದೊಡ್ಡವರಾದ ಮೇಲೆ ತಾನು ಸನ್ಯಾಸತ್ವ ಸ್ವೀಕರಿಸುವುದಾಗಿ ಹೇಳಿದ್ದಾರೆ. ಚಿಕ್ಕಂದಿನಿಂದಲೂ ನನಗೆ ಕೇಸರಿ ಬಣ್ಣ ಇಷ್ಟ. ಆ ಬಣ್ಣದ ಸೀರೆ ಹೆಚ್ಚು ಉಟ್ಟರೆ, ಮುಂದೆ ಸನ್ಯಾಸಿನಿ ಆಗ್ತೀಯಾ ಎಂದು ಅಮ್ಮ ಹೇಳುತ್ತಿದ್ದರು, ಈಗ ಅದೇ ನಿಜವಾಗುತ್ತಿದೆ ಎಂದು ನಗುತ್ತಾ ಹೇಳಿದರು.
ಅಭಿಮಾನಿಗಳಿಗೆ ಶಾಕ್
ಮತ್ತೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಪ್ರತಿಕ್ರಿಯಿಸಿ, ಅದು ತುಂಬಾ ಕಷ್ಟ ಎಂದಿದ್ದಾರೆ. ಪ್ರಾಣಿಗಳ ಎನ್‌ಜಿಒ ನಡೆಸುತ್ತಿದ್ದು, ಅದಕ್ಕಾಗಿಯೇ ಇಲ್ಲಿದ್ದೇನೆ. ಇಲ್ಲದಿದ್ದರೆ ಎಲ್ಲೋ ಆಶ್ರಮದಲ್ಲಿ ಇರುತ್ತಿದ್ದೆ ಎಂದಿದ್ದಾರೆ. ಆಂಕರ್ ಸ್ವಪ್ನಾ (ಸುಮನ್ ಟಿವಿ) ಜೊತೆಗಿನ ಸಂದರ್ಶನದಲ್ಲಿ ರೇಣು ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಮಾತುಗಳು ಅಭಿಮಾನಿಗಳಿಗೆ ಶಾಕ್ ನೀಡಿವೆ. ರೇಣು ಅವರ ಇತ್ತೀಚಿನ ಮಾತುಗಳನ್ನು ನೋಡಿದರೆ, ಅವರಿಗೆ ಮರುಮದುವೆಯಾಗುವ ಉದ್ದೇಶವಿಲ್ಲ ಎಂಬುದು ಸ್ಪಷ್ಟವಾಗಿದೆ.
ಅಕೀರಾನನ್ನು ಹೀರೋ ಆಗಿ ನೋಡುವ ಆಸೆ
ಅಕೀರಾ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ ಅವರು, ಅದು ನಡೆದರೆ ಎಲ್ಲರಿಗಿಂತ ಹೆಚ್ಚು ಖುಷಿಪಡುವವಳು ನಾನೇ ಎಂದರು. ಅಕೀರಾನನ್ನು ಹೀರೋ ಆಗಿ ನೋಡುವ ಆಸೆಯಿದೆ. ಆದರೆ ಸದ್ಯಕ್ಕೆ ಅಂತಹ ಯಾವುದೇ ಆಲೋಚನೆ ಇಲ್ಲ. ಅವನು ತನ್ನ ಕೆರಿಯರ್ ಮೇಲೆ ಗಮನ ಹರಿಸಿದ್ದಾನೆ, ಅವನು ಉತ್ತಮ ಪಿಯಾನೋ ವಾದಕ. ಮಗಳು ಆಧ್ಯಾಗೆ ಸಮಾಜ ಸೇವೆ ಇಷ್ಟ ಎಂದು ರೇಣು ದೇಸಾಯಿ ಹೇಳಿದರು. ಯಾರು ಏನಾಗುತ್ತಾರೋ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

