ತಾನಾ ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾ; ಸೀರೆಯಲ್ಲಿ ಕಣ್ಣೀರೊರೆಸಿದ ನಿರೂಪಕಿ!
ತಾನಾ ವೇದಿಕೆಯಲ್ಲಿ ಸಮಂತಾ ಮಾತನಾಡುತ್ತಾ ಕಣ್ಣೀರು ಹಾಕಿದರು. ಅಲ್ಲಿನ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದರು.

ಅಮೆರಿಕದಲ್ಲಿ ನಡೆದ ತಾನಾ 2025 ಕಾರ್ಯಕ್ರಮದಲ್ಲಿ ನಟಿ ಸಮಂತಾ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟರು. ಅಭಿಮಾನಿಗಳನ್ನು ಭಾವುಕರನ್ನಾಗಿಸಿದರು. ತಮ್ಮ ಮೇಲಿನ ಪ್ರೀತಿಗೆ ಅಮೆರಿಕದಲ್ಲಿರುವ ತೆಲುಗು ಜನರಿಗೆ ಧನ್ಯವಾದ ತಿಳಿಸಿದರು.
‘ಇಲ್ಲಿ ನಿಂತು ಧನ್ಯವಾದ ಹೇಳೋಕೆ 15 ವರ್ಷ ಬೇಕಾಯ್ತು’ ಎಂದ ಸಮಂತಾ, ತಮ್ಮ ಮೊದಲ ಸಿನಿಮಾ 'ಯೇ ಮಾಯ ಚೇಸಾವೆ'ಯಿಂದಲೂ ತೆಲುಗು ಪ್ರೇಕ್ಷಕರು ಪ್ರೀತಿ ತೋರಿಸಿದ್ದಾರೆ ಎಂದರು. ‘ನೀವು ನನ್ನನ್ನು ಮನೆಯ ಹುಡುಗಿಯಂತೆ ನೋಡಿಕೊಂಡಿದ್ದೀರಿ’ ಎಂದು ಭಾವುಕರಾದರು.
ನಿರ್ಮಾಪಕಿಯಾಗಿ 'ಶುಭಂ' ಚಿತ್ರ ನಿರ್ಮಿಸಿರುವ ಸಮಂತಾ, ಅಮೆರಿಕದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ‘ನನ್ನ ವೃತ್ತಿಜೀವನದ ಪ್ರತಿ ಹೆಜ್ಜೆಯಲ್ಲೂ ತೆಲುಗು ಪ್ರೇಕ್ಷಕರನ್ನು ಮೊದಲು ನೆನಪಿಸಿಕೊಳ್ಳುತ್ತೇನೆ’ ಎಂದರು.
'ಓ ಬೇಬಿ' ಚಿತ್ರ ಅಮೆರಿಕದಲ್ಲಿ ಮಿಲಿಯನ್ ಡಾಲರ್ ಸಂಗ್ರಹಿಸಿರುವುದು ಅಚ್ಚರಿ ಮೂಡಿಸಿದೆ ಎಂದ ಸಮಂತಾ, ‘ನೀವು ಎಷ್ಟೇ ದೂರದಲ್ಲಿದ್ದರೂ ನನ್ನ ಹೃದಯಕ್ಕೆ ಹತ್ತಿರವಾಗಿದ್ದೀರಿ’ ಎಂದು ಭಾವುಕರಾದರು.
ಈ ಮಾತನ್ನು ಹೇಳುತ್ತಲೇ ನಟಿ ಸಮಂತಾ ವೇದಿಕೆಯಲ್ಲೇ ಕಣ್ಣೀರಿಟ್ಟರು. ಅಮೆರಿಕದ ತೆಲುಗರಿಂದ ಸಿಗುತ್ತಿರುವ ಪ್ರೀತಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮ ನಿರೂಪಕಿ ಸುಮಾ ಅವರು ತಮ್ಮ ಸೀರೆ ಸೆರಗಿನಿಂದಲೇ ಸಮಂತಾಳ ಕಣ್ಣೀರು ಒರೆಸಿದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

