- Home
- Entertainment
- Cine World
- ಧುರಂಧರ್ ಬಗ್ಗೆ Shraddha Kapoor ಪೋಸ್ಟ್ ವೈರಲ್- ನನಗೆ ಇವತ್ತು ಬೆಳಿಗ್ಗೆ ಶೂಟಿಂಗ್ ಇಲ್ಲ ಅಂದಿದ್ರೆ...
ಧುರಂಧರ್ ಬಗ್ಗೆ Shraddha Kapoor ಪೋಸ್ಟ್ ವೈರಲ್- ನನಗೆ ಇವತ್ತು ಬೆಳಿಗ್ಗೆ ಶೂಟಿಂಗ್ ಇಲ್ಲ ಅಂದಿದ್ರೆ...
ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಮಂದಿ ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವನ್ನು ಹೊಗಳುತ್ತಿದ್ದಾರೆ. ವಿದೇಶಗಳಲ್ಲಿರುವ ಭಾರತೀಯರೂ ಸೇರಿದಂತೆ ಹಲವರು ಈ ಚಿತ್ರವನ್ನು ಮೆಚ್ಚಿ ಸೋಷಿಯಲ್ ಮೀಡಿಯಾಗಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. ಸರಿ, ಶ್ರದ್ಧಾ ಕಪೂರ್ ಏನಂದ್ರು? ನೋಡಿ…

ಬಾಲಿವುಡ್ ನಟ ರಣವೀರ್ ಸಿಂಗ್ ಅವರ 'ಧುರಂಧರ್' ಪ್ರಸ್ತುತ ಭಾರೀ ಸುದ್ದಿಯಲ್ಲಿದೆ. ಈ (Dhurandher) ಚಿತ್ರದ ಕ್ರೇಜ್ ದೇಶ ಹಾಗೂ ವಿದೇಶಗಳಲ್ಲಿಯೂ ಅದ್ಭುತವಾಗಿದೆ. ಈ ಸಿನಿಮಾ ನಿನ್ನೆಗೆ, ಅಂದರೆ 16 ಡಿಸೆಂಬರ್ 2025ರ ಸಂಜೆ ಹೊತ್ತಿಗೆ 410 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.
ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಮಂದಿ ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವನ್ನು ಹೊಗಳುತ್ತಿದ್ದಾರೆ. ವಿದೇಶಗಳಲ್ಲಿರುವ ಭಾರತೀಯರೂ ಸೇರಿದಂತೆ ಹಲವರು ಈ ಚಿತ್ರವನ್ನು ಮೆಚ್ಚಿ ಸೋಷಿಯಲ್ ಮೀಡಿಯಾಗಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ.
ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಲಾಭ ಗಳಿಸಿದೆ. ಇತ್ತೀಚೆಗೆ, ನಟಿ ಶ್ರದ್ಧಾ ಕಪೂರ್ ಕೂಡ ಚಿತ್ರಮಂದಿರಕ್ಕೆ ಹೋಗಿ 'ಧುರಂಧರ್' ಚಿತ್ರವನ್ನು ವೀಕ್ಷಿಸಿದರು.
ಅದರ ನಂತರ ಅವರು ಪೋಸ್ಟ್ ಮಾಡಿರುವ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ. ಹಾಗಿದ್ರೆ ಶ್ರದ್ಧಾ ಕಪೂರ್ ಅಂಥದ್ದೇನು ಹೇಳಿದ್ದಾರೆ ನೋಡಿ..
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಧುರಂಧರ್ ಚಿತ್ರವನ್ನು ಹೊಗಳಿದ್ದಾರೆ. ಮುಂದಿನ ಭಾಗವನ್ನು ನೋಡಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಶ್ರದ್ಧಾ ಕಪೂರ್ ತಮ್ಮ ಇನ್ಸಾಗ್ರಾಮ್ ಸ್ಟೋರಿಯಲ್ಲಿ 'ಧುರಂಧರ್' ಚಿತ್ರದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಒಂದಲ್ಲ ಬರೋಬ್ಬರಿ ಮೂರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ಈ ಸದಭಿರುಚಿಯ ಸಿನಿಮಾ ಮತ್ತು ಅದರ ನಿರ್ಮಾಪಕರನ್ನು, ನಿರ್ದೇಶಕರನ್ನು ಟೀಕಿಸಿದವರಿಗೆ ಅವರು ಅತ್ಯಂತ ಸರಿ ಎನ್ನಬಹುದಾದ ಉತ್ತರವನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ತಾವು ಮತ್ತೊಮ್ಮ ಈ ಚಿತ್ರವನ್ನು ನೋಡುವುದಾಗಿ ಸಹ ಅವರು ಹೇಳಿದ್ದಾರೆ. 'ಧುರಂಧರ್ ಚಿತ್ರವು ತುಂಬಾ ಅದ್ಭುತವಾಗಿದೆ' ಎಂದು ಶ್ರದ್ಧಾ ಮೊದಲ ಸ್ಟೋರಿಯಲ್ಲಿ ಹೇಳಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, 'ಭಾಗ ಎರಡಕ್ಕಾಗಿ ನಾವು ಇನ್ನೂ 3 ತಿಂಗಳು ಕಾಯುವಂತೆ ಮಾಡುತ್ತಿದ್ದಾರೆ. ನೀವು ನಮ್ಮ ಭಾವನೆಗಳೊಂದಿಗೆ ಆಟವಾಡಬೇಡಿ, ದಯವಿಟ್ಟು ಅದನ್ನು ಸ್ವಲ್ಪ ಮುಂಚಿತವಾಗಿ ಬಿಡುಗಡೆ ಮಾಡಿ.
ಎಂತಹ ಅದ್ಭುತ ಅನುಭವ. ನಾನು ಬೆಳಿಗ್ಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಅಗತ್ಯ ಇಲ್ಲದಿದ್ದರೆ ನಾನು ಈಗ ಅದನ್ನು ಎರಡನೇ ಬಾರಿಗೆ ನೋಡಲು ಹೋಗುತ್ತಿದ್ದೆ. ಛಾವಾ, ಸೈಯಾರಾ, ಧುರಂಧರ್ ಎಲ್ಲವೂ 2025ರ ಒಳ್ಳೆಯ ಸಿನಿಮಾಗಳು' ಎಂದಿರುವ ಅವರು, 'ಹಿಂದಿ ಸಿನಿಮಾ' ರಾಕೆಟ್ ರೀತಿ ಹೋಗುತ್ತಿದೆ' ಎಂದು ಬರೆದಿದ್ದಾರೆ.
ಧುರಂಧರ್ ಚಿತ್ರದ ಬಗ್ಗೆ ಅನಿಸಿಕೆ:-
ಇನ್ನು 'ಧುರಂಧರ್' ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ನಂತರ, ಈ ಚಿತ್ರವು 411 ಕೋಟಿ ರೂಪಾಯಿಗಳನ್ನು ಕಮಾಯಿ ಮಾಡಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ರಣವೀರ್ ಸಿಂಗ್ ಮುಖ್ಯ ಭೂಮಿಕೆಯ 'ಧುರಂಧರ್' ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮೊದಲಾದವರು ಬಹುಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಎರಡನೇ ಭಾಗ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಮುಂಬರುವ ಭಾಗ 2ಕ್ಕೆ ಬಹಳಷ್ಟು ಜನರು ತುದಿಗಾಲಲ್ಲಿ ಕಾಯುವಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

