MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ಯಾರು ಮಮ್ಮಾ? ನಾನು ನಿನ್ನ ಮಮ್ಮಾ ನಾ? ಏನ್ ಬೊಗಳ್ತಾ ಇದ್ದೀಯಾ ನೀನು?.. ಶೃತಿ ಹಾಸನ್ ಕೆಂಡಾಮಂಡಲ!

'ಯಾರು ಮಮ್ಮಾ? ನಾನು ನಿನ್ನ ಮಮ್ಮಾ ನಾ? ಏನ್ ಬೊಗಳ್ತಾ ಇದ್ದೀಯಾ ನೀನು?.. ಶೃತಿ ಹಾಸನ್ ಕೆಂಡಾಮಂಡಲ!

ಇದೀಗ ಬಹುಭಾಷಾ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಅವರು ಸಾರ್ವಜನಿಕ ಸ್ಥಳದಲ್ಲಿ ಪಾಪರಾಜಿ ಒಬ್ಬನ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

2 Min read
Author : Shriram Bhat
Published : Apr 20 2026, 06:10 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಸಿನಿಮಾ ತಾರೆಯರು ಎಲ್ಲಿಗೆ ಹೋದರೂ ಅವರ ಹಿಂದೆ ಕ್ಯಾಮೆರಾ ಹಿಡಿದು ಓಡುವ ಪಾಪರಾಜಿಗಳ (Paparazzi) ಕಾಟ ಹೊಸದೇನಲ್ಲ. ಕೆಲವು ತಾರೆಯರು ಇದನ್ನು ನಗುನಗುತ್ತಲೇ ಸ್ವೀಕರಿಸಿದರೆ, ಇನ್ನು ಕೆಲವರು ಅತಿಯಾದಾಗ ಗರಂ ಆಗುವುದುಂಟು.

28
Image Credit : Instagram

ಇದೀಗ ಬಹುಭಾಷಾ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಅವರು ಸಾರ್ವಜನಿಕ ಸ್ಥಳದಲ್ಲಿ ಪಾಪರಾಜಿ ಒಬ್ಬನ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Related Articles

Related image1
'ನಾನು ಸೆಕೆಂಡ್ ಮದರ್' ಎಂದ ರಶ್ಮಿಕಾ ಮಂದಣ್ಣ; ಅವರಿಬ್ಬರ ಲವ್‌-ಕೇರಿಂಗ್‌ ನೋಡಿ ಹಲವರು ಶಾಕ್!
Related image2
ಲವ್ ಸ್ಟೋರಿ ವೈರಲ್ ಆದ ಬೆನ್ನಲ್ಲೇ, ನಿಮ್ಗೆ 'ಅದು' ಬೇಕಂದ್ರೆ-'ಈ ನಾಲ್ಕನ್ನು ಮನೆಯಿಂದ ಹೊರಹಾಕಿ' ಎಂದ ಮಾಧವನ್!
38
Image Credit : Instagram

ಅಸಲಿಗೆ ಅಲ್ಲಿ ನಡೆದಿದ್ದೇನು?

ಇತ್ತೀಚೆಗೆ ಶ್ರುತಿ ಹಾಸನ್ ಅವರು ಮುಂಬೈನ ಹೋಟೆಲ್‌ ಒಂದರಿಂದ ಹೊರಬರುತ್ತಿದ್ದಾಗ, ಎಂದಿನಂತೆ ಫೋಟೋಗ್ರಾಫರ್‌ಗಳು ಅವರನ್ನು ಮುತ್ತಿಕೊಂಡರು. ಶ್ರುತಿ ಅವರು ಕ್ಯಾಮೆರಾಗೆ ಪೋಸ್ ನೀಡುತ್ತಾ ತಮ್ಮ ಕಾರಿನತ್ತ ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಪಾಪರಾಜಿ ಒಬ್ಬ ಶ್ರುತಿ ಅವರನ್ನು ಉದ್ದೇಶಿಸಿ "ಮಮ್ಮಾ... ಮಮ್ಮಾ..." ಎಂದು ಕರೆದಿದ್ದಾನೆ. ಇದನ್ನು ಕೇಳುತ್ತಿದ್ದಂತೆಯೇ ಶ್ರುತಿ ಹಾಸನ್ ಅವರ ಮುಖಭಾವ ಸಂಪೂರ್ಣ ಬದಲಾಯಿತು.

48
Image Credit : Instagram

ತಕ್ಷಣವೇ ಅಲ್ಲಿಯೇ ನಿಂತ ಶ್ರುತಿ, 'ಯಾರು ಮಮ್ಮಾ? ನಿನ್ನ ಮಮ್ಮಾ ನಾ ನಾನು? ಏನ್ ಬೊಗಳ್ತಾ ಇದ್ದೀಯಾ ನೀನು? (Kaun hai mumma? Aapki mumma hai? Kya bak rahe ho tum?)" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಶ್ರುತಿ ಅವರ ಈ ಕೋಪ ಕಂಡ ಫೋಟೋಗ್ರಾಫರ್‌ಗಳು ಒಂದು ಕ್ಷಣ ದಂಗಾಗಿದ್ದಾರೆ. ಸಾಮಾನ್ಯವಾಗಿ ಶಾಂತವಾಗಿರುವ ಶ್ರುತಿ, ಈ ಬಾರಿ ಪಾಪರಾಜಿಗಳ ವರ್ತನೆ ಮಿತಿ ಮೀರಿದೆ ಎಂದು ಭಾವಿಸಿ ಅಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

58
Image Credit : Instagram

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಇನ್‌ಸ್ಟಂಟ್ ಬಾಲಿವುಡ್ ಹಂಚಿಕೊಂಡಿರುವ ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಜನರು ಶ್ರುತಿ ಹಾಸನ್ ಪರವಾಗಿ ಬ್ಯಾಟ್ ಬೀಸಿದ್ದಾರೆ. "ಯಾವುದೇ ಸಂಬಂಧವಿಲ್ಲದ ನಟಿಯರನ್ನು ಹೀಗೆ ವಿಚಿತ್ರವಾಗಿ ಕರೆಯುವುದು ತಪ್ಪು. ಅವರಿಗೆ ಗೌರವ ನೀಡಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. 

68
Image Credit : Instagram

ಮತ್ತೊಬ್ಬ ಬಳಕೆದಾರ "ಅವಳೇನು ನಿನ್ನ ತಾಯಿನಾ? ಯಾಕೆ ಹಾಗೆ ಕರೆಯುತ್ತೀಯಾ?" ಎಂದು ಪಾಪರಾಜಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಕೆಲವು ನೆಟ್ಟಿಗರು "ಇದಕ್ಕೇಕೆ ಇಷ್ಟೊಂದು ಕೋಪ? ಅವರು ಪ್ರೀತಿಯಿಂದ ಕರೆದಿರಬಹುದು" ಎಂದು ಶ್ರುತಿ ಅವರ ರಿಯಾಕ್ಷನ್ ಸ್ವಲ್ಪ ಜಾಸ್ತಿಯಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

78
Image Credit : Instagram

ಶ್ರುತಿ ಹಾಸನ್ ಕೈಯಲ್ಲಿವೆ ಸಾಲು ಸಾಲು ಚಿತ್ರಗಳು!

ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಶ್ರುತಿ ಹಾಸನ್ ಅವರು ಸದ್ಯ ಭಾರಿ ಬ್ಯುಸಿಯಾಗಿದ್ದಾರೆ. ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೂಲಿ' (Coolie) ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ದುಲ್ಕರ್ ಸಲ್ಮಾನ್ ಜೊತೆ 'ಆಕಾಶಂಲೋ ಒಕ ತಾರಾ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ 'ಸಲಾರ್: ಪಾರ್ಟ್ 2' (Salaar: Part 2) ನಲ್ಲೂ ಶ್ರುತಿ ಹಾಸನ್ ನಾಯಕಿಯಾಗಿ ಅಬ್ಬರಿಸಲಿದ್ದಾರೆ.

88
Image Credit : Instagram

ಒಟ್ಟಿನಲ್ಲಿ, ಶ್ರುತಿ ಹಾಸನ್ ಅವರ ಈ 'ಮಮ್ಮಾ' ವಿವಾದ ಈಗ ಸಿನಿಮಾ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಸೆಲೆಬ್ರಿಟಿಗಳ ಖಾಸಗಿತನ ಮತ್ತು ಗೌರವದ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಕಮಲ್ ಹಾಸನ್
ಮನರಂಜನಾ ಸುದ್ದಿ
ಕಾಲಿವುಡ್

Latest Videos
Recommended Stories
Recommended image1
ಕೊನೆಗೂ ಮಾತಾಡಿದ ನಟಿ ಶ್ರೀದೇವಿ ಆತ್ಮ; ಸತ್ತ ಜಾಗದಲ್ಲೇ ಸಾವಿನ ರಹಸ್ಯ ಬಯಲು ಮಾಡಿದ ತನಿಖಾಧಿಕಾರಿ!
Recommended image2
'ಜವಾನ್' ಡೈರೆಕ್ಟರ್ ಅಟ್ಲಿ ಮನೆಯಲ್ಲಿ ಸಂಭ್ರಮ: ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ ಪ್ರಿಯಾ
Recommended image3
ಲವ್ ಸ್ಟೋರಿ ವೈರಲ್ ಆದ ಬೆನ್ನಲ್ಲೇ, ನಿಮ್ಗೆ 'ಅದು' ಬೇಕಂದ್ರೆ-'ಈ ನಾಲ್ಕನ್ನು ಮನೆಯಿಂದ ಹೊರಹಾಕಿ' ಎಂದ ಮಾಧವನ್!
Related Stories
Recommended image1
'ನಾನು ಸೆಕೆಂಡ್ ಮದರ್' ಎಂದ ರಶ್ಮಿಕಾ ಮಂದಣ್ಣ; ಅವರಿಬ್ಬರ ಲವ್‌-ಕೇರಿಂಗ್‌ ನೋಡಿ ಹಲವರು ಶಾಕ್!
Recommended image2
ಲವ್ ಸ್ಟೋರಿ ವೈರಲ್ ಆದ ಬೆನ್ನಲ್ಲೇ, ನಿಮ್ಗೆ 'ಅದು' ಬೇಕಂದ್ರೆ-'ಈ ನಾಲ್ಕನ್ನು ಮನೆಯಿಂದ ಹೊರಹಾಕಿ' ಎಂದ ಮಾಧವನ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved