- Home
- Entertainment
- Cine World
- 'ಬಾಹುಬಲಿ'ಯನ್ನ ಕಟ್ಟಪ್ಪ ಕೊಂದಿದ್ದಕ್ಕೆ 10 ವರ್ಷ: 'ದಿ ಎಪಿಕ್' ರೂಪದಲ್ಲಿ ಮತ್ತೆ ತೆರೆ ಮೇಲೆ ಎಂದ ಜಕ್ಕಣ್ಣ
'ಬಾಹುಬಲಿ'ಯನ್ನ ಕಟ್ಟಪ್ಪ ಕೊಂದಿದ್ದಕ್ಕೆ 10 ವರ್ಷ: 'ದಿ ಎಪಿಕ್' ರೂಪದಲ್ಲಿ ಮತ್ತೆ ತೆರೆ ಮೇಲೆ ಎಂದ ಜಕ್ಕಣ್ಣ
ಬಾಹುಬಲಿ ಚಿತ್ರ ಬಿಡುಗಡೆ ಆಗಿ 10 ವರ್ಷ ಆದ ಸಂಭ್ರಮದಲ್ಲಿ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನೂ ಸೇರಿಸಿ ‘ಬಾಹುಬಲಿ : ದಿ ಎಪಿಕ್’ ಸಿನಿಮಾ ಹೊರಬರಲಿದೆ.

ಭಾರತೀಯ ಚಿತ್ರರಂಗದ ಅತಿ ಮಹತ್ವದ ಸಿನಿಮಾಗಳಲ್ಲಿ ಒಂದಾದ ‘ಬಾಹುಬಲಿ’ ಸಿನಿಮಾ ಬಿಡುಗಡೆಯಾಗಿ 10 ವರ್ಷ ಸಂದಿದೆ. 2015ರ ಜುಲೈ 10ರಂದು ಮೊದಲ ಭಾಗ ಬಿಡುಗಡೆಯಾಗಿತ್ತು.
ಈ ಚಿತ್ರ ಬಿಡುಗಡೆ ಆಗಿ 10 ವರ್ಷ ಆದ ಸಂಭ್ರಮದಲ್ಲಿ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನೂ ಸೇರಿಸಿ ‘ಬಾಹುಬಲಿ : ದಿ ಎಪಿಕ್’ ಸಿನಿಮಾ ಹೊರಬರಲಿದೆ.
ಈ ಬಗ್ಗೆ ವಿವರ ನೀಡಿದ ನಿರ್ದೇಶಕ ಎಸ್ ಎಸ್ ರಾಜಮೌಳಿ, ‘ಬಾಹುಬಲಿ: ದಿ ಬಿಗಿನಿಂಗ್’ ಹಾಗೂ ‘ಬಾಹುಬಲಿ - ದಿ ಕನ್‌ಕ್ಲೂಷನ್’ ಭಾಗಗಳನ್ನು ಅ.31ಕ್ಕೆ ಒಟ್ಟಿಗೆ ನೋಡಬಹುದು.
ಈ ಸಿನಿಮಾ ತೆರೆಕಂಡು 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಬರಲಿದೆ. ಬಾಹುಬಲಿ ಅನೇಕ ಹೊಸ ಪಯಣಗಳಿಗೆ ಆರಂಭ ಬಿಂದುವಾಗಿತ್ತು. ಲೆಕ್ಕವಿಲ್ಲದಷ್ಟು ನೆನಪು, ಸ್ಫೂರ್ತಿಗಳನ್ನು ಈ ಸಿನಿಮಾ ನೀಡಿದೆ’ ಎಂದು ಹೇಳಿದ್ದಾರೆ.
ಬಾಹುಬಲಿ ಸಿನಿಮಾ ಭಾಗ-1ರ ಕೊನೆಯಲ್ಲಿ ಕಟ್ಟಪ್ಪ, ಬಾಹುಬಲಿಯನ್ನ ಸಾಯಿಸುವುದು ಏಕೆ ಎನ್ನುವುದೇ ಇಡೀ ವಿಶ್ವಕ್ಕೆ ಕುತೂಹಲ ಮೂಡಿಸಿತ್ತು. ಅಲ್ಲದೇ ಈ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು.
ಇನ್ನು ನಿರ್ದೇಶಕ ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಸತ್ಯರಾಜ್, ನಾಸರ್ ಸೇರಿದಂತೆ ಸಿನಿಮಾದಲ್ಲಿ ನಟಿಸಿದ ಪ್ರಮುಖ ಕಲಾವಿದರು ಒಟ್ಟಿಗೆ ಸೇರಿ ಇತ್ತೀಚೆಗೆ ಸಂಭ್ರಮಾಚರಣೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

