ಕೊನೆಗೂ ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್ ಅಸಲಿ ಕತೆ ಬಿಚ್ಚಿಟ್ಟ ತಮನ್ನಾ ಭಾಟಿಯಾ
ತಮನ್ನ ಭಾಟಿಯಾ ಡೇಟಿಂಗ್ ವಿಚಾರದಲ್ಲಿ ಪ್ರಮುಖವಾಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರು ಕೇಳಿಬಂದಿತ್ತು. ಈ ಕುರಿತು ತಮನ್ನ ಭಾಟಿಯಾ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ನಿಜಕ್ಕೂ ಕೊಹ್ಲಿ ಜೊತೆ ಡೇಟಿಂಗ್ ಮಾಡಿದ್ರಾ ತಮನ್ನಾ?

ಬಾಲಿವುಡ್ ನಟಿ ತಮನ್ನ ಭಾಟಿಯಾ ಸೌತ್ ಇಂಡಿಯಾ ಸಿನಿಮಾಗಳಲ್ಲೂ ಅತ್ಯಂತ ಜನಪ್ರಿಯರಾಗಿದ್ದಾರೆ. ಮಿಲ್ಕಿ ಬ್ಯೂಟಿ ಎಂದೇ ಜನಪ್ರಿಯವಾಗಿರುವ ತಮನ್ನಾ ಭಾಟಿಯಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ತಮನ್ನಾ ಭಾಟಿಯಾ ಇತ್ತೀಚೆಗಷ್ಟೇ ಬಾಯ್‌ಫ್ರೆಂಡ್ ಜೊತೆ ಬ್ರೇಕ್ ಆಫ್ ಕುರಿತು ಸುದ್ದಿಗಳು ಹರಿದಾಡಿತ್ತು. ಆದರೆ ಇದಕ್ಕೂ ಮೊದಲು ತಮನ್ನಾ ಭಾಟಿಯಾ ಕೆಲ ಸೆಲೆಬ್ರೆಟಿಗಳ ಜೊತೆ ಡೇಟಿಂಗ್ ಮಾಡುತ್ತಿದ್ದರು ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಪೈಕಿ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಅಬ್ದುಲ್ ರಜಾಕ್ ಹೆಸರು ಮುಂಚೂಣಿಯಲ್ಲಿತ್ತು.
ತಮನ್ನಾ ಭಾಟಿಯಾ ಇದೇ ಮೊದಲ ಬಾರಿಗೆ ಸೆಲೆಬ್ರೆಟಿಗಳ ಜೊತೆಗಿನ ಡೇಟಿಂಗ್ ಕುರಿತು ಮೌನ ಮುರಿದಿದ್ದಾರೆ. ಲಲ್ಲನ್‌ಟಾಪ್ ಮಾತುಕತೆಯಲ್ಲಿ ನಟಿ ತಮನ್ನಾ ಭಾಟಿಯಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಪೈಕಿ ಇಬ್ಬರ ಜೊತೆಗಿನ ಡೇಟಿಂಗ್ ಕೂಡ ಪ್ರಮುಖವಾಗಿದೆ. ತಮನ್ನಾ ಹಾಗೂ ಕೊಹ್ಲಿ ಜೊತೆಗಿರುವ ಫೋಟೋಗಳು ವೈರಲ್ ಆಗಿತ್ತು. ಈ ಎಲ್ಲಾ ಬೆಳವಣಿಗೆ ಕುರಿತು ತಮನ್ನಾ ಮೊದಲ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತುಗಳು ಫೋಟೋಗಳು ಹರಿದಾಡಿತ್ತು. ಇದು ನನಗೆ ತೀವ್ರ ಬೇಸರ ತಂದಿತ್ತು. ಕಮರ್ಷಿಯಲ್ ಶೂಟ್‌ಗಾಗಿ ಒಂದು ದಿನ ವಿರಾಟ್ ಕೊಹ್ಲಿ ಭೇಟಿಯಾಗಿದ್ದೆ. ಒಂದು ದಿನ ಜಾಹೀರಾತು, ಬ್ರ್ಯಾಂಡ್ ಪ್ರಮೋಶನ್ ಶೂಟ್ ಮಾಡಲಾಗಿತ್ತು. ಬಳಿಕ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿಲ್ಲ. ಒಂದೇ ಒಂದು ದಿನ ಫೋನ್ ಮಾಡಿಲ್ಲ. ಬಳಿಕ ಯಾವತ್ತೂ ವಿರಾಟ್ ಕೊಹ್ಲಿ ಜೊತೆ ಮಾತನಾಡಿಲ್ಲ ಎಂದು ತಮನ್ನಾ ಹೇಳಿದ್ದಾರೆ.
ಕೊಹ್ಲಿ ಜೊತೆ ರಿಲೇಶನ್‌ಶಿಪ್, ಡೇಟಿಂಗ್ ಮಾತುಗಳು ಸತ್ಯಕ್ಕೆ ದೂರ. 2010ರಲ್ಲಿ ಕೆಲ ಫೋಟೋಗಳು ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಆದರೆ ಜಾಹೀರಾತು ಶೂಟ್‌ನ ಒಂದು ದಿನ ಬಿಟ್ಟರೆ ಯಾವತ್ತೂ ಕೊಹ್ಲಿ ಭೇಟಿಯಾಗಿಲ್ಲ, ಮಾತನಾಡಿಲ್ಲ ಎಂದು ತಮನ್ನಾ ಹೇಳಿದ್ದಾರೆ. ಇದು ಮಾನಸಿಕವಾಗಿ ನನ್ನ ಮೇಲೆ ತೀವ್ರ ಒತ್ತಡ ಹೇರಿತ್ತು ಎಂದು ತಮನ್ನಾ ಹೇಳಿದ್ದಾರೆ.
ಜ್ಯೂವೆಲ್ಲರಿ ಶಾಪ್ ಉದ್ಘಾಟನೆಗೆ ಆಯೋಜಕರು ನನ್ನ ಆಹ್ವಾನಿಸಿದ್ದರು. ನಾನು ತೆರಳಿದ್ದೆ. ಅಲ್ಲಿಗೆ ಪಾಕಿಸ್ತಾನ ಕ್ರಿಕೆಟಿಗ ಅಬ್ದುಲ್ ರಜಾಕ್‌ಗೂ ಆಹ್ವಾನ ನೀಡಲಾಗಿತ್ತು. ಆದರೆ ಇದನ್ನೇ ಮುಂದಿಟ್ಟುಕೊಂಡು ಸುಳ್ಳು ಸುದ್ದಿ ಹರಡಿದರು ಎಂದು ತಮನ್ನಾ ಭಾಟಿಯಾ ಸ್ಪಷ್ಟನೆ ನೀಡಿದ್ದಾರೆ.
ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ಇಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಮಾತು ಗಾಢವಾಗಿತ್ತು. ಎಲ್ಲಾ ಕಾರ್ಯಕ್ರಮಗಳಲ್ಲೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರು ದೂರವಾಗಿದ್ದಾರೆ. ಈ ಕುರಿತು ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.