- Home
- Entertainment
- Cine World
- 2025ನೇ ಸಾಲಿನ ಬಾಕ್ಸಾಫೀಸ್‌ನಲ್ಲಿ 500 ಕೋಟಿ ಕ್ಲಬ್‌ಗೆ 5 ಸಿನಿಮಾಗಳು: ಕನ್ನಡದ ಚಿತ್ರಕ್ಕಿದ್ಯಾ ಸ್ಥಾನ?
2025ನೇ ಸಾಲಿನ ಬಾಕ್ಸಾಫೀಸ್‌ನಲ್ಲಿ 500 ಕೋಟಿ ಕ್ಲಬ್‌ಗೆ 5 ಸಿನಿಮಾಗಳು: ಕನ್ನಡದ ಚಿತ್ರಕ್ಕಿದ್ಯಾ ಸ್ಥಾನ?
2025ರಲ್ಲಿ ತೆರೆಗೆ ಕಂಡ ಚಿತ್ರಗಳಲ್ಲಿ 5 ಸಿನಿಮಾಗಳು 500 ಕೋಟಿ ಕ್ಲಬ್ ಸೇರಿವೆ. ಅದರಲ್ಲಿ ಹಿಂದಿಯಲ್ಲಿ ಮೂರು, ಕನ್ನಡದಲ್ಲಿ ಒಂದು, ತಮಿಳಿನಲ್ಲಿ ಒಂದು ಸೇರಿ ಒಟ್ಟು ಐದು ಚಿತ್ರಗಳಿಂದಲೇ 3,135 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಲಾಗಿದೆ.

1. ಕಾಂತಾರ ಚಾಪ್ಟರ್ 1
‘ಕಾಂತಾರ ಚಾಪ್ಟರ್ 1’ ಚಿತ್ರ ವಿಶ್ವದಾದ್ಯಂತ 850 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆ ಗಳಿಸಿದೆ.
2. ಛಾವಾ
‘ಛಾವಾ’ ಚಿತ್ರ ಬಿಡುಗಡೆ ಆದ 40 ದಿನಕ್ಕೆ ಪ್ರಪಂಚದಾದ್ಯಂತ 787 ಕೋಟಿ ಕಲೆಕ್ಷನ್ ಮಾಡಿದೆ.
3. ಕೂಲಿ
ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದ ಭಾರತದ ಗ್ರಾಸ್ ಕಲೆಕ್ಷನ್ 338 ಕೋಟಿ ಹಾಗೂ ಓವರ್ ಸೀಸ್ ಕಲೆಕ್ಷನ್ 180 ಕೋಟಿ. ಒಟ್ಟು ಸೇರಿ ಜಗತ್ತಿನಾದ್ಯಂತ 518 ಕೋಟಿ ಗಳಿಸಿದೆ.
4. ಸೈಯಾರ
ಯುವ ಲವ್‌ಸ್ಟೋರಿ ‘ಸೈಯಾರ’ ಚಿತ್ರವು ಭಾರತದಲ್ಲಿ 409 ಕೋಟಿ, ವಿದೇಶದಲ್ಲಿ 170 ಕೋಟಿ ಸೇರಿದಂತೆ ಒಟ್ಟು 570 ರಿಂದ 580 ಕೋಟಿ ಗಳಿಕೆ ಮಾಡಿದೆ.
5. ಧುರಂಧರ್
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರವು ಇಲ್ಲಿಯವರೆಗೂ (ಡಿ.17) 400 ಕೋಟಿ ಗಳಿಕೆ ದಾಟಿದ್ದು, ಸದ್ಯದಲ್ಲೇ 500 ಕೋಟಿ ಕ್ಲಬ್ ಸೇರುವುದು ನಿಶ್ಚಿತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

