- Home
- Entertainment
- Cine World
- ಟಾಕ್ಸಿಕ್‌ನಂಥಾ ಸಿನಿಮಾ ಕನ್ನಡದಲ್ಲಾಗಲಿ, ಭಾರತೀಯ ಭಾಷೆಗಳಲ್ಲಾಗಲೀ ಬಂದಿಲ್ಲ: ರುಕ್ಮಿಣಿ ವಸಂತ್
ಟಾಕ್ಸಿಕ್‌ನಂಥಾ ಸಿನಿಮಾ ಕನ್ನಡದಲ್ಲಾಗಲಿ, ಭಾರತೀಯ ಭಾಷೆಗಳಲ್ಲಾಗಲೀ ಬಂದಿಲ್ಲ: ರುಕ್ಮಿಣಿ ವಸಂತ್
ಟಾಕ್ಸಿಕ್‌ನಂಥಾ ಇನ್ನೊಂದು ಸಿನಿಮಾ ಕನ್ನಡದಲ್ಲಾಗಲಿ, ಭಾರತೀಯ ಭಾಷೆಗಳಲ್ಲಾಗಲೀ ಈವರೆಗೆ ಬಂದಿಲ್ಲ. ಹಸಿಹಸಿ ಅಂಶಗಳಿರುವ, ಅನೇಕ ಲೇಯರ್‌ಗಳಿರುವ, ಪ್ರತಿಯೊಂದು ಸಂಗತಿಯೂ ಪರಸ್ಪರ ಕನೆಕ್ಟ್ ಆಗುವ ಚಿತ್ರವಿದು ಎಂದರು ರುಕ್ಮಿಣಿ ವಸಂತ್.

ಪವರ್‌ಫುಲ್ ಚಿತ್ರವಿದು
ಟಾಕ್ಸಿಕ್‌ನಂಥಾ ಇನ್ನೊಂದು ಸಿನಿಮಾ ಕನ್ನಡದಲ್ಲಾಗಲಿ, ಭಾರತೀಯ ಭಾಷೆಗಳಲ್ಲಾಗಲೀ ಈವರೆಗೆ ಬಂದಿಲ್ಲ. ಹಸಿಹಸಿ ಅಂಶಗಳಿರುವ, ಅನೇಕ ಲೇಯರ್‌ಗಳಿರುವ, ಪ್ರತಿಯೊಂದು ಸಂಗತಿಯೂ ಪರಸ್ಪರ ಕನೆಕ್ಟ್ ಆಗುವ ಪವರ್‌ಫುಲ್ ಚಿತ್ರವಿದು. ಇದು ‘ಟಾಕ್ಸಿಕ್’ ಸಿನಿಮಾ ಬಗ್ಗೆ ರುಕ್ಮಿಣಿ ವಸಂತ್ ಆಡಿರುವ ಮಾತು.
ಮೊದಲ ಬಾರಿಗೆ ಸಿನಿಮಾ ಬಗ್ಗೆ ಬಾಯ್ಬಿಟ್ಟ ರುಕ್ಮಿಣಿ
ಇಲ್ಲಿಯವರೆಗೆ ‘ಟಾಕ್ಸಿಕ್’ನಲ್ಲಿ ನಟಿಸುತ್ತಿರುವುದನ್ನಷ್ಟೇ ಒಪ್ಪಿಕೊಂಡಿದ್ದ ನಟಿ ಇದೀಗ ಮೊದಲ ಬಾರಿಗೆ ಸಿನಿಮಾ ಬಗ್ಗೆ ಬಾಯ್ಬಿಟ್ಟಿದ್ದಾರೆ. ಯಶ್ ಬಗ್ಗೆ ಏನೂ ಹೇಳದೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಸೂಕ್ಷ್ಮತೆಯನ್ನು ಹೊಗಳಿದ್ದಾರೆ.
ಅವರ ವಿಷನ್ ದಿಟ್ಟವಾದುದು
ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ವಿಷನ್ ದಿಟ್ಟವಾದುದು. ಅವರು ಬೋಲ್ಡ್ ಅಂಶಗಳನ್ನೂ ಮಾನವೀಯ ನೆಲೆಯಲ್ಲಿ ನಿರೂಪಿಸಿರುವುದು ವಿಶೇಷವೆನಿಸುತ್ತದೆ ಎಂದೂ ಹೇಳಿದ್ದಾರೆ.
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು
ಸಿನಿಮಾ ಮೇಕಿಂಗ್ ವೇಳೆ ಎಲ್ಲವನ್ನೂ ಏಕಕಾಲಕ್ಕೆ ಗ್ರಹಿಸುವ ಯಶ್ ಅವರ ದೃಷ್ಟಿಕೋನ ನನಗೆ ಅಚ್ಚರಿ ತರಿಸಿತು. ಅವರದು ಸಿನಿಮಾವನ್ನೂ ಮೀರಿದ ಅಗಾಧ ಗ್ರಹಿಕೆ. ಅದೊಂಥರ ಸಾಂಸ್ಕೃತಿಕ ಯುಗಧರ್ಮದಂತಿರುತ್ತದೆ.
ತಳಮಟ್ಟದಿಂದಲೇ ಅದ್ಭುತ ಕೆಲಸ
ನನಗೆ ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋದಕ್ಕಿಂತಲೂ ಭಾಷೆಯನ್ನು ಮಾಧ್ಯಮವಾಗಿಟ್ಟು ಹೆಚ್ಚು ಹೆಚ್ಚು ಜನರನ್ನು ತಲುಪುವುದೇ ಮುಖ್ಯ. ಕನ್ನಡ ಚಿತ್ರರಂಗದಲ್ಲಿ ತಳಮಟ್ಟದಿಂದಲೇ ಅದ್ಭುತ ಕೆಲಸಗಳಾಗುತ್ತಿವೆ.
ಮುಖ್ಯ ಭೂಮಿಕೆಯಲ್ಲಿರುವುದು ಖುಷಿ
ಕೆಜಿಎಫ್, ಕಾಂತಾರದಂಥಾ ಜಗತ್ತು ತಿರುಗಿ ನೋಡುವ ಸಿನಿಮಾಗಳ ಜೊತೆಗೆ ‘ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ’ ಎಂಬ ಆಸ್ಕರ್ ರೇಸ್‌ನಲ್ಲಿರುವ ಕಿರುಚಿತ್ರದ ಜೊತೆಗೆ ವೈವಿಧ್ಯಮಯ ಸಿನಿಮಾಗಳು ಬರುತ್ತಿವೆ. ಇಂಥಾ ಇಂಡಸ್ಟ್ರಿಯಿಂದ ಬಂದು, ಈ ಚಿತ್ರರಂಗ ಗರಿಗೆದರುವ ಹೊತ್ತಿನಲ್ಲಿ ಮುಖ್ಯ ಭೂಮಿಕೆಯಲ್ಲಿರುವುದು ಖುಷಿ ಅನಿಸುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

