- Home
- Entertainment
- Cine World
- ಶ್ರೀದೇವಿಯನ್ನು ಮನಸಾರೆ ಪ್ರೀತಿಸಿದ್ದ ರಜನಿಕಾಂತ್… ಪ್ರಪೋಸ್ ಮಾಡದೇ ಇದ್ದದ್ದು ಯಾಕೆ…?
ಶ್ರೀದೇವಿಯನ್ನು ಮನಸಾರೆ ಪ್ರೀತಿಸಿದ್ದ ರಜನಿಕಾಂತ್… ಪ್ರಪೋಸ್ ಮಾಡದೇ ಇದ್ದದ್ದು ಯಾಕೆ…?
ಶ್ರೀದೇವಿ ಮತ್ತು ಸೂಪರ್ ಸ್ಟಾರ್ ರಜನಿ ಕಾಂತ್ ಲವ್ ಮಾಡುತ್ತಿದ್ದರು ಎನ್ನುವ ಗಾಳಿ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಕೊನೆಯವರೆಗೂ ಇವರಿಬ್ಬರು ಸ್ನೇಹಿತರಾಗಿಯೇ ಉಳಿದರು. ಪ್ರಪೋಸ್ ಮಾಡಲು ಹೋಗಿ ಹಾಗೆ ಸುಮ್ಮನೆ ಬಂದಿದ್ದರು ರಜನಿ. ಇಲ್ಲಿದೆ ಇವರ ಲವ್ ಸ್ಟೋರಿ ಡೀಟೇಲ್ಸ್..

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಅನೇಕ ಪ್ರಮುಖ ನಟಿಯರೊಂದಿಗೆ ಜೋಡಿಯಾಗಿ ನಟಿಸಿದ್ದರು, ಆದರೆ ಶ್ರೀದೇವಿಯೊಂದಿಗಿನ ಅವರ ತೆರೆಯ ಮೇಲಿನ ಕೆಮೆಸ್ಟ್ರಿಯನ್ನು ಅನೇಕರು ಹಾಡಿ ಹೊಗಳಿದ್ದರು. ಈ ಜೋಡಿ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ 19 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಶ್ರೀದೇವಿ ಮತ್ತು ರಜನಿಕಾಂತ್ ಅವರ ಮೊದಲ ಚಿತ್ರ ಮೂಂಡ್ರು ಮುಡಿಚು, ಇದರಲ್ಲಿ 13 ವರ್ಷದ ಶ್ರೀದೇವಿ ರಜನಿಕಾಂತ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದರು. ಇಬ್ಬರು ಸೂಪರ್‌ಸ್ಟಾರ್‌ಗಳು ತುಂಬಾನೆ ಕ್ಲೋಸ್ ಆಗಿದ್ದರು. ಒಂದು ಹಂತದಲ್ಲಿ, ರಜನಿಕಾಂತ್ ಶ್ರೀದೇವಿಯವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಎನ್ನುವ ಸುದ್ದಿ ಕೂಡ ಇದೆ.
ಶ್ರೀದೇವಿ -ರಜನಿಕಾಂತ್
ರಜನಿಕಾಂತ್ ಮತ್ತು ಶ್ರೀದೇವಿ (Sridevi) ಅವರ ಬಾಂಧವ್ಯ ಬಹಳ ಹಿಂದಿನಿಂದಲೂ ಇದೆ, ಏಕೆಂದರೆ ಅವರು ಶ್ರೀದೇವಿ ಅವರ ತಾಯಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಶ್ರೀದೇವಿ ರಜನಿಕಾಂತ್ ಗಿಂತ 13 ವರ್ಷ ಚಿಕ್ಕವಳಾಗಿದ್ದರಿಂದ, ಶ್ರೀದೇವಿಯನ್ನು ರಜನಿ ತುಂಬಾ ಪ್ರೊಟೆಕ್ಟ್ ಮಾಡುತ್ತಿದ್ದರಂತೆ. ಅವರು ಒಟ್ಟಿಗೆ ಕೆಲಸ ಮಾಡುತ್ತಲೇ ಇದ್ದಾಗ, ರಜನಿಕಾಂತ್ ಶ್ರೀದೇವಿಯ ಬಗ್ಗೆ ಭಾವನೆಗಳನ್ನು ಬೆಳೆಸಿಕೊಂಡರು ಮತ್ತು ಕೊನೆಗೆ ಶ್ರೀದೇವಿಯ ಪ್ರೀತಿಯಲ್ಲಿ ಕೂಡ ಬಿದ್ದಿದರು. ಒಮ್ಮೆ ರಜನಿ ಶ್ರೀದೇವಿಗೆ 16 ವರ್ಷವಿದ್ದಾಗ, ಅವರನ್ನು ಮದುವೆಯಾಗುವ ಕುರಿತು ಶ್ರೀದೇವಿ ತಾಯಿ ಬಳಿ ಕೂಡ ಕೇಳಿಕೊಂಡಿದ್ದರು ಎಂದು ವರದಿಯಾಗಿದೆ.
ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ರಜನಿಕಾಂತ್
ಸುಂದರಿ ಶ್ರೀದೇವಿಯನ್ನು ರಜನಿಕಾಂತ್ ಹುಚ್ಚನಂತೆ ಪ್ರೀತಿಸುತ್ತಿದ್ದರೂ, ಆಕೆಗೂ ರಜನಿ ಬಗ್ಗೆ ಅದೇ ಭಾವನೆ ಇತ್ತೋ ಇಲ್ಲವೋ ಎಂಬುದು ಖಚಿತವಿಲ್ಲ ಎಂದು ಒಂದು ಥ್ರೋಬ್ಯಾಕ್ ಸಂದರ್ಶನದಲ್ಲಿ, ಕೆ. ಬಾಲಚಂದರ್ (K Balachander) ಹೇಳಿದ್ದರು. ರಜನಿ ಶ್ರೀದೇವಿಯನ್ನು ತುಂಬಾ ಪ್ರೀತಿಸುತ್ತಿದ್ದರು, ಅವರ ಮನೆಗೆ ಹೋಗಿ ಅವರ ಮದುವೆಯ ಪ್ರೊಪೋಸ್ ಮಾಡಲು ನಿರ್ಧರಿಸಿದರು ಎಂದು ಬಹಿರಂಗಪಡಿಸಿದರು.
ಶ್ರೀದೇವಿಗೆ ಮದುವೆಗೆ ಪ್ರಪೋಸ್
ನಟಿ ಶ್ರೀದೇವಿ ಅವರ, ಗೃಹ ಪ್ರವೇಶ ಸಮಾರಂಭದ ಸಮಯದಲ್ಲಿ ರಜನಿಕಾಂತ್ ಮತ್ತು ಬಾಲಚಂದರ್ ಶ್ರೀದೇವಿಯವರ ಮನೆಗೆ ಹೋಗಿದ್ದರಂತೆ. ಆ ದಿನವೇ ಶ್ರೀದೇವಿಗೆ ಮದುವೆಗೆ ಪ್ರಪೋಸ್ (wedding proposal) ಮಾಡಬೇಕು ಎಂದು ಅವರು ಅಂದುಕೊಂಡಿದ್ದರು. ಆದರೆ ರಜನಿ ಶ್ರೀದೇವಿ ಮನೆಗೆ ಬಂದ ತಕ್ಷಣ, ವಿದ್ಯುತ್ ಸರಬರಾಜು ಇದ್ದಕ್ಕಿದ್ದಂತೆ ಕಡಿತಗೊಂಡು, ಎಲ್ಲೆಡೆ ಕತ್ತಲೆ ತುಂಬಿತ್ತಂತೆ. ರಜನಿಕಾಂತ್ ಇದನ್ನು ಅಶುಭ ಶಕುನವೆಂದು ಪರಿಗಣಿಸಿ ತಮ್ಮ ವಿವಾಹ ಪ್ರಸ್ತಾಪದ ಬಗ್ಗೆ ಒಂದು ಮಾತನ್ನೂ ಹೇಳದೆ ನಿರಾಶೆಯಿಂದ ಅಲ್ಲಿಂದ ಹಿಂತಿರುಗಿದ್ದರು ಎಂದಿದ್ದರು ಬಾಲಚಂದರ್.
ಶ್ರೀದೇವಿಗೆ ಪರ್ಸನಲ್ ಫೋನ್ ನಂಬರ್ ನೀಡಿದ್ದ ರಜನಿಕಾಂತ್
ಶ್ರೀದೇವಿ ಮೇಲಿನ ಪ್ರೀತಿಯನ್ನು ಬದಿಗಿಟ್ಟು, ರಜನಿಕಾಂತ್ ನಟಿಯೊಂದಿಗೆ ಉತ್ತಮ ಸ್ನೇಹವನ್ನು ಮುಂದುವರೆಸಿದರು. ರಜನಿಕಾಂತ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅವರ ವೈಯಕ್ತಿಕ ಫೋನ್ ಸಂಖ್ಯೆ ಕೆ. ಬಾಲಚಂದರ್, ಕಮಲ್ ಹಾಸನ್ (Kamal Hassan) ಮತ್ತು ಶ್ರೀದೇವಿಯಂತಹ ಕೆಲವೇ ಜನರೊಂದಿಗೆ ಮಾತ್ರ ಹಂಚಿಕೊಂಡಿದ್ದರು.
ಶ್ರೀದೇವಿ ರಜನಿಕಾಂತ್‌ಗಾಗಿ ಏಳು ದಿನಗಳ ಉಪವಾಸ ಮಾಡಿದ್ದರು
ಡೆಕ್ಕನ್ ಕ್ರಾನಿಕಲ್ ವರದಿಯ ಪ್ರಕಾರ, ರಾಣಾ ಚಿತ್ರೀಕರಣದ ಸಮಯದಲ್ಲಿ ರಜನಿಕಾಂತ್ ತೀವ್ರ ಅಸ್ವಸ್ಥರಾದಾಗ, ಶ್ರೀದೇವಿ ಅವರಿಗಾಗಿ ಉಪವಾಸ (Sridevi kept fasting for Rajini) ಮಾಡಿದರು. ಅವರು ರಜನಿಕಾಂತ್ ಬಗ್ಗೆ ತುಂಬಾ ಚಿಂತಿತರಾಗಿ ಶಿರಡಿ ಸಾಯಿಬಾಬಾ ಅವರನ್ನು ಪ್ರಾರ್ಥಿಸಿದರು. ಅವರು ಏಳು ದಿನಗಳ ಕಾಲ ಉಪವಾಸ ಮಾಡಿ ಪುಣೆಯ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದರು ಎಂದು ವರದಿಯಾಗಿತ್ತು.
ಶ್ರೀದೇವಿ ಮರಣ ಹೊಂದಿದಾಗ ರಜನಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು (wedding anniversary) ರದ್ದುಗೊಳಿಸಿದ್ದರು
ಫೆಬ್ರವರಿ 24, 2018 ರಂದು ಶ್ರೀದೇವಿಯವರ ಅಕಾಲಿಕ ಮರಣ ಎಲ್ಲರಿಗೂ ಆಘಾತವನ್ನುಂಟು ಮಾಡಿತು. ಈ ಸುದ್ದಿ ತಿಳಿದ ರಜನಿಕಾಂತ್ ಎಲ್ಲವನ್ನೂ ತೊರೆದು ಅವರ ಕುಟುಂಬವನ್ನು ಭೇಟಿಯಾಗಲು ಮುಂಬೈಗೆ ಹಾರಿದರು. ಫೆಬ್ರವರಿ 26 ರಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸೆಲೆಬ್ರೇಟ್ ಮಾಡಲು ತಯಾರಿ ನಡೆದಿತ್ತು. ಪ್ರತಿ ವರ್ಷ ತಮ್ಮ ಫ್ಯಾಮಿಲಿ ಜೊತೆ ರಜನಿ ಆನಿವರ್ಸರಿ ಸೆಲೆಬ್ರೇಟ್ ಮಾಡುತ್ತೆ. ಆದರೆ 2018 ರ ಫೆಬ್ರುವರಿ 26 ರಂದು ಶ್ರೀದೇವಿ ಮರಣದ ಹಿನ್ನೆಲೆಯಲ್ಲಿ ರಜನಿ ಅದನ್ನು ಕೂಡ ಕ್ಯಾನ್ಸಲ್ ಮಾಡಿದ್ದರು.
ರಜನಿಕಾಂತ್ ಅವರ ಶುದ್ಧ ಪ್ರೀತಿ
ಶ್ರೀದೇವಿಯ ಮೇಲಿನ ರಜನಿಕಾಂತ್ ಅವರ ಪ್ರೀತಿ ಶುದ್ಧವಾಗಿತ್ತು, ಮತ್ತು ಅವರು ಯಾವಾಗಲೂ ಅವಳನ್ನು ರಕ್ಷಿಸುತ್ತಿದ್ದರು. ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದರೂ, ರಜನಿ ಯಾವಾಗಲೂ ಶ್ರೀದೇವಿಯನ್ನು ಗೌರವಿಸುತ್ತಿದ್ದರು ಮತ್ತು ಅವರನ್ನು ತಮ್ಮ ಆತ್ಮೀಯ ಸ್ನೇಹಿತರಲ್ಲಿ ಒಬ್ಬರನ್ನಾಗಿ ಇಟ್ಟುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.