MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ, ಬೆಡ್‌ರೂಮ್‌ ಫೋಟೋ ವೈರಲ್‌!

ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ, ಬೆಡ್‌ರೂಮ್‌ ಫೋಟೋ ವೈರಲ್‌!

Vijay Deverakonda's Old Photos with Belgian Model Virginie Go Viral ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ವದಂತಿಗಳ ನಡುವೆಯೇ, ದಶಕದ ಹಿಂದೆ ವಿಜಯ್ ಪ್ರೀತಿಸುತ್ತಿದ್ದ ಬೆಲ್ಜಿಯಂ ಮಾಡೆಲ್ ವರ್ಜಿನಿ ಅವರೊಂದಿಗಿನ ಖಾಸಗಿ ಫೋಟೋಗಳು ವೈರಲ್ ಆಗಿವೆ. 

2 Min read
Author : Santosh Naik
Published : Feb 18 2026, 08:34 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : X

ವರ್ತಮಾನದ ಬದುಕು ಕುತೂಹಲಕಾರಿಯಾಗಿರುವಾಗಲೇ ಹಳೆಯ ನೆನಪುಗಳು ಬಂದು ಬಾಗಿಲು ತಟ್ಟುತ್ತವೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರ ಮದುವೆಯ ಸುದ್ದಿ ಚಾಲ್ತಿಯಲ್ಲಿ ಇರುವಾಗಲೇ, ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಬೆಲ್ಜಿಯಂ ಮೂಲದ ಮಾಡೆಲ್ ವರ್ಜಿನಿ (Virginie) ಅವರ ದಶಕದ ಹಳೆಯ ಖಾಸಗಿ ಫೋಟೋಗಳು ದಿಢೀರನೆ ಪ್ರತ್ಯಕ್ಷವಾಗಿ ಸಂಚಲನ ಮೂಡಿಸಿವೆ.

26
Image Credit : X

ಇದರ ಬೆನ್ನಲ್ಲಿಯೇ ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್‌ ಮುಚ್ಚಾಲ್‌ ಆಗ್ತಾರಾ ವಿಜಯ್‌ ದೇವರಕೊಂಡ ಅನ್ನೋ ಚರ್ಚೆ ಶುರುವಾಗಿದೆ. ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪಲಾಶ್‌ ಮುಚ್ಚಾಲ್‌ ನಡುವಿನ ದೀರ್ಘಕಾಲದ ರಿಲೇಷನ್‌ಷಿಪ್‌ ಮದುವೆಯ ಹಿಂದಿನ ದಿನ ಇಂಥದ್ದೇ ಕಾರಣಕ್ಕಾಗಿ ಮುರಿದುಬಿದ್ದಿತ್ತು. ಹಾಗಾಗಿ ವಿಜಯ್‌ ದೇವರಕೊಂಡ ಹಾಗೂ ವರ್ಜಿನಿ ನಡುವಿನ ರಿಲೇಷನ್‌ಷಿಪ್‌ ಫೋಟೋ ಕುತೂಹಲ ಮೂಡಿದೆ.

Related Articles

Related image1
ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್‌ ಮುಚ್ಚಾಲ್‌ ಮೇಲೆ ಮತ್ತೊಂದು ಸೆನ್ಸೇಷನಲ್‌ ಆರೋಪ, ಎಫ್‌ಐಆರ್‌ ದಾಖಲು!
Related image2
'ಪಲಾಶ್‌ ಮುಚ್ಚಾಲ್‌ ಬೇರೆ ಯುವತಿಯ ಜೊತೆ ಬೆಡ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದ, ವುಮೆನ್‌ ಪ್ಲೇಯರ್‌ಗಳೇ ಸರಿಯಾಗಿ ಬಾರಿಸಿದ್ರು..'
36
Image Credit : X

ವಿಜಯ್ ದೇವರಕೊಂಡ ಅವರು 'ಅರ್ಜುನ್ ರೆಡ್ಡಿ' ಅಥವಾ 'ಫ್ಯಾಮಿಲಿ ಸ್ಟಾರ್' ಆಗುವ ಮುನ್ನವೇ ವರ್ಜಿನಿ ಅವರು ವಿಜಯ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ, ವಿಜಯ್ ಅವರಿಗೆ ದೊಡ್ಡ ಬ್ರೇಕ್ ನೀಡಿದ 2016ರ ಸೂಪರ್ ಹಿಟ್ ಸಿನಿಮಾ 'ಪೆಳ್ಳಿ ಚೂಪುಲು'ನಲ್ಲಿ ವರ್ಜಿನಿ ಒಂದು ಸಣ್ಣ ಪಾತ್ರವನ್ನೂ ಮಾಡಿದ್ದರು.

46
Image Credit : X

2026ರ ಫೆಬ್ರವರಿ ಆರಂಭದಲ್ಲಿ ವೈರಲ್ ಆಗಿರುವ ಈ ಫೋಟೋಗಳಲ್ಲಿ ವಿಜಯ್ ಅವರ ಅಪರೂಪದ ಖಾಸಗಿ ಕ್ಷಣಗಳಿವೆ. ಈ ಚಿತ್ರಗಳಲ್ಲಿ ವರ್ಜಿನಿ ಕೇವಲ ವಿಜಯ್ ಜೊತೆ ಮಾತ್ರವಲ್ಲದೆ, ಅವರ ತಾಯಿ ಮಾಧವಿ ಮತ್ತು ಸಹೋದರ ಆನಂದ್ ಅವರೊಂದಿಗೂ ಆತ್ಮೀಯವಾಗಿ ಸಮಯ ಕಳೆದಿದ್ದರು. ಇದನ್ನು ಗಮನಿಸಿದರೆ ವರ್ಜಿನಿ ಅವರು ಒಂದು ಕಾಲದಲ್ಲಿ ದೇವರಕೊಂಡ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.

56
Image Credit : X

ಸಿನಿಮಾ ರಂಗದ ಆಪ್ತ ಮೂಲಗಳ ಪ್ರಕಾರ, ವಿಜಯ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸುಮಾರು ಎಂಟು ವರ್ಷಗಳ ಹಿಂದೆಯೇ ಅಂದರೆ 2018ರಲ್ಲಿ ವಿಜಯ್ ನಟನೆಯ 'ನೋಟಾ' (NOTA) ಸಿನಿಮಾ ಬಿಡುಗಡೆಗೂ ಮುನ್ನವೇ ಇಬ್ಬರು ಬೇರ್ಪಟ್ಟಿದ್ದರು ಎನ್ನಲಾಗಿದೆ.

66
Image Credit : X

ಈ ಹಳೆಯ ಫೋಟೋಗಳು ಈಗಲೇ ಮತ್ತೆ ಮುನ್ನೆಲೆಗೆ ಬರಲು ಒಂದು ಪ್ರಬಲ ಕಾರಣವಿದೆ. ಪ್ರಸ್ತುತ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಹಾಗೂ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಚಿಕ್ಕ ಸುಳಿವು ಸಿಕ್ಕರೂ ಅದನ್ನು ದೊಡ್ಡದು ಮಾಡಲು ಕಾಯುತ್ತಿದ್ದಾರೆ. ಈಗ ಹಳೆಯ ದಾಖಲೆಗಳನ್ನು ಕೆದಕಿ ವಿಜಯ್ ಅವರ ಈ ಹಳೆಯ ಪ್ರೇಮ ಕಥೆಯನ್ನು ಮತ್ತೆ ಚರ್ಚೆಗೆ ತಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ
ಸ್ಮೃತಿ ಮಂಧನ
ಸಂಬಂಧಗಳು
ಮದುವೆ
ಮದುವೆ
ಮನರಂಜನಾ ಸುದ್ದಿ
ಟಾಲಿವುಡ್

Latest Videos
Recommended Stories
Recommended image1
ಹನುಮನ ಪಾದಕ್ಕೆ ದೀರ್ಘದಂಡ ನಮಸ್ಕಾರ ಮಾಡಿದ ಬಲ್ಲಾಳದೇವ; 'ಬಾಹುಬಲಿ' ತಮ್ಮ ಆಂಜನೇಯನ ಪಾದ ಸೇರಿದ್ದೇಕೆ?
Recommended image2
60 ದಾಟಿದ್ರೂ ಸಲ್ಮಾನ್ ಖಾನ್ ಯಾಕೆ ಬ್ಯಾಚುಲರ್? ಈ ಕಂಡೀಷನ್‌ಗಳೇ ಅಡ್ಡಿಯಾಯ್ತಾ? ತಂದೆ ಸಲೀಂ ಖಾನ್ ಹೇಳಿದ್ದೇನು?
Recommended image3
ದರ್ಶನ್ ಬಗ್ಗೆ ರವಿಮಾಮ ಹೇಳಿದ್ದು ನಿಜನಾ? 2 ತಿಂಗಳಲ್ಲಿ ದಾಸ ಹೊರಬರೋದು ಸತ್ಯಾನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
Related Stories
Recommended image1
ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್‌ ಮುಚ್ಚಾಲ್‌ ಮೇಲೆ ಮತ್ತೊಂದು ಸೆನ್ಸೇಷನಲ್‌ ಆರೋಪ, ಎಫ್‌ಐಆರ್‌ ದಾಖಲು!
Recommended image2
'ಪಲಾಶ್‌ ಮುಚ್ಚಾಲ್‌ ಬೇರೆ ಯುವತಿಯ ಜೊತೆ ಬೆಡ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದ, ವುಮೆನ್‌ ಪ್ಲೇಯರ್‌ಗಳೇ ಸರಿಯಾಗಿ ಬಾರಿಸಿದ್ರು..'
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved