- Home
- Entertainment
- Cine World
- ವಿರಾಟ್ ಕೊಹ್ಲಿ ತಪ್ಪಾಗಿ ಕೊಟ್ಟ ಒಂದು ಲೈಕ್‌ನಿಂದ ನಟಿ ಅವನೀತ್ ಕೌರ್ ಫಾಲೋವರ್ಸ್ ಡಬಲ್
ವಿರಾಟ್ ಕೊಹ್ಲಿ ತಪ್ಪಾಗಿ ಕೊಟ್ಟ ಒಂದು ಲೈಕ್‌ನಿಂದ ನಟಿ ಅವನೀತ್ ಕೌರ್ ಫಾಲೋವರ್ಸ್ ಡಬಲ್
ವಿರಾಟ್ ಕೊಹ್ಲಿ ಬೈ ಮಿಸ್ಟೇಕ್ ಆಗಿ ನಟಿ ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟು ಬಳಿಕ ಸ್ಪಷ್ಟನೆ ನೀಡಿಯೂ ಆಗಿದೆ. ಆದರೆ ಕೊಹ್ಲಿ ಕೊಟ್ಟ ಒಂದು ಲೈಕ್‌ನಿಂದ ಇದೀಗ ನಟಿ ಅವನೀತ್ ಕೌರ್ ಫಾಲೋವರ್ಸ್ ಸಂಖ್ಯೆ ಭಾರಿ ಏರಿಕೆಯಾಗಿದೆ.

ಆರ್‌ಸಿಬಿಯಲ್ಲಿ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ ಈ ಐಪಿಎಲ್ ಟೂರ್ನಿ ನಡುವೆ ಲೈಕ್ ವಿವಾದ ಭಾರಿ ಸಂಚಲನ ಸೃಷ್ಟಿಸಿತ್ತು. ಕೊಹ್ಲಿಗೆ ಗೊತ್ತಿಲ್ಲದೆ ನಟಿ ಅನವೀತ್ ಕೌರ್ ಫೋಟೋ ಒಂದಕ್ಕೆ ಲೈಕ್ ಮಾಡಲಾಗಿದೆ. ಇದು ಭಾರಿ ವಿವಾದ ಸೃಷ್ಟಿಸಿತ್ತು. ಮೀಮ್ಸ್, ಟ್ರೋಲ್ ವಿವಾದ ಜೋರಾಗುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದರು. ಆದರೂ ಟ್ರೋಲ್ ಕಡಿಮೆಯಾಗಿರಲಿಲ್ಲ. ಈ ಘಟನೆ ಕೊಹ್ಲಿಗೆ ತೀವ್ರ ಬೇಸರ ತರಿಸಿತ್ತು. ಆದರೆ ಈ ಘಟನೆ ನಟಿ ಅವನೀತ್ ಕೌರ್‌ಗೆ ಹಲವು ರೀತಿಯಲ್ಲಿ ನೆರವಾಗಿದೆ.
ನಟಿ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಫೋಟೋ ಒಂದನ್ನು ವಿರಾಟ್ ಕೊಹ್ಲಿ ತಪ್ಪಾಗಿ ಲೈಕ್ ಮಾಡಿದ್ದರು. ಇದು ಟೆಕ್ ಅಲ್ಗೋರಿದಂನಿಂದ ಆಗಿದೆ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಕೊಹ್ಲಿಯ ಒಂದು ಲೈಕ್‌ನಿಂದ ನಟಿ ಅವನೀತ್ ಕೌರ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಅವನೀತ್ ಕೌರ್ ಇದೀಗ ದೇಶಾದ್ಯಂತ ಸುದ್ದಿಯಾಗಿದ್ದಾರೆ. ನಟಿ ಅವನೀತ್ ಕೌರ್ ಇದೀಗ ಜನಪ್ರಿಯ ಸೆಲೆಬ್ರೆಟಿಯಾಗಿದ್ದಾರೆ.
ನಟಿ ಅವನೀತ್ ಕೌರ್ ಸಿನಿಮಾ ಪ್ರೀಯರಿಗೆ ಗೊತ್ತಿಲ್ಲದ ಸೆಲೆಬ್ರೆಟಿ ಏನು ಅಲ್ಲ. ಆದರೆ ಕ್ರಿಕೆಟಿಗರು, ಇತರ ಕ್ರೀಡಾ ಕ್ಷೇತ್ರದ ಆಸಕ್ತರು, ಬಹುತೇಕ ಭಾರತೀಯರಿಗೆ ಇದೀಗ ಅವನೀತ್ ಕೌರ್ ಚಿರಪರಿಚಿತರಾಗಿದ್ದಾರೆ. ಕೊಹ್ಲಿ ಒಂದು ಲೈಕ್ಸ್‌ನಿಂದ ಇದೀಗ ಅವನೀತ್ ಕೌರ್ ಕಳೆದ ನಾಲ್ಕು ದಿನಗಳಲ್ಲಿ ಸರಿಸುಮಾರು 2 ಮಿಲಿಯನ್ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ.
ಕೊಹ್ಲಿ ಲೈಕ್ ಮಾಡುವ ಮೊದಲು ಅವನೀತ್ ಕೌರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 30 ಮಿಲಿಯನ್ ಆಸುಪಾಸಿನಲ್ಲಿತ್ತು. ವಿವಾದ ಶುರುವಾದ ನಾಲ್ಕೇ ದಿನದಲ್ಲಿ ಇದೀಗ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 31.8 ಮಿಲಿಯನ್‌ಗೆ ಏರಿಕೆಯಾಗಿದೆ. ನಾಲ್ಕು ದಿನದಲ್ಲಿ ಸರಿಸುಮಾರು 2 ಮಿಲಿಯನ್ ಫಾಲೋವರ್ಸ್ ಸಂಖ್ಯೆ ವಿಶ್ವದ ದಿಗ್ಗಜ ಸೆಲೆಬ್ರೆಟಿಗಳಿಗೂ ಹರಿದು ಬಂದಿಲ್ಲ. ಇದು ಕೊಹ್ಲಿ ಒಂದು ಲೈಕ್ಸ್ ಪರಿಣಾಮವಾಗಿದೆ.
ಅವನೀತ್ ಕೌರ್ ಸಿನಿಮಾ, ಮಾಡೆಲ್ ಜಗತ್ತಿಗಿಂತ ವಿವಾದಗಳಿಂದಲೂ ಹೆಚ್ಚು ಸುದ್ದಿಯಾಗಿದ್ದಾರೆ. ಜುವ್ಯೆಲ್ಲರಿ ಬ್ರ್ಯಾಂಡ್ ಅಂಬಾಸಿಡರ್ ಆಗಿ, ಪ್ರಚಾರ ಮಾಡುವ ಒಪ್ಪಂದಲ್ಲಿ ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.ಇನ್ನು ವಿವಾದಾತ್ಮಕ ಹೇಳಿಕೆ, ಫೋಟೋಗಳಿಂದಲೂ ಅವನೀತ್ ಕೌರ್ ಹೆಚ್ಚು ಸುದ್ದಿಯಾಗಿದ್ದಾರೆ. ಇದೀಗ ಕೊಹ್ಲಿ ಲೈಕ್ಸ್‌ನಿಂದ ಮತ್ತೆ ಸುದ್ದಿಯಾಗಿದ್ದಾರೆ.
ಕೊಹ್ಲಿ ಮಾಡಿದ ಲೈಕ್ಸ್‌ನಿಂದ ನಟಿ ಅವನೀತ್ ಕೌರ್‌ಗೆ ಒಂದಿಂಚು ನಷ್ಟವಾಗಿಲ್ಲ. ಆದರೆ ವಿರಾಟ್ ಕೊಹ್ಲಿಗೆ ಈ ಘಟನೆ ತೀವ್ರ ನೋವುಂಟು ಮಾಡಿದೆ. ಈ ಘಟನೆ ನಡುವೆ ವಿರಾಟ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಪಂದ್ಯ ಆಡಿದ್ದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಆದರೆ ವಿರಾಟ್ ಕೊಹ್ಲಿ ಮುಖದಲ್ಲಿ ನಗು ಮಾತ್ರ ಇರಲಿಲ್ಲ. ಎಂದಿನ ಜೋಶ್ ಕಾಣಲೇ ಇಲ್ಲ. ಅರ್ಧಶತಕ, ಸಿಎಸ್‌ಕೆ ವಿರುದ್ದ ಗೆಲುವನ್ನು ವಿರಾಟ್ ಕೊಹ್ಲಿ ಸಂಬ್ರಮಿಸಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

