- Home
- Entertainment
- Cine World
- ವಿಜಯ್-ವರ್ಜೀನಿ ಖಾಸಗಿ ಫೋಟೋ ವೈರಲ್ ಮಾಡ್ತಿರೋದು ಯಾರು? ರಶ್ಮಿಕಾಗೆ ಯಾಕ್ ಇಷ್ಟೊಂದು ಕಾಟ?
ವಿಜಯ್-ವರ್ಜೀನಿ ಖಾಸಗಿ ಫೋಟೋ ವೈರಲ್ ಮಾಡ್ತಿರೋದು ಯಾರು? ರಶ್ಮಿಕಾಗೆ ಯಾಕ್ ಇಷ್ಟೊಂದು ಕಾಟ?
ಹೊಸದೊಂದು ಸಮಸ್ಯೆ ಉದ್ಭವಿಸಿದೆ. ವಿಜಯ್ ದೇವರಕೊಂಡ, ಮಾಜಿ ಪ್ರೇಯಸಿ ವರ್ಜೀನಿ ಖಾಸಗಿ ಫೋಟೋಗಳು ವೈರಲ್ ಆಗುತ್ತಿವೆ. ವಿಜಯ್-ವರ್ಜೀನಿ ಫೋಟೋ ವೈರಲ್ ಮಾಡುತ್ತಿರೋದು ಯಾರು? ರಶ್ಮಿಕಾ-ವಿಜಯ್ ಇಬ್ಬರಿಗೂ ಮುಜುಗರ ತರುತ್ತಿರೋದು ಯಾರು?

ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅವರಿಬ್ಬರ ಮದುವೆ ಈ ತಿಂಗಳು 26ಕ್ಕೆ ಉದಯಪುರದಲ್ಲಿ ನಡೆಯಲಿದೆ ಎಂಬ ಸುದ್ದಿ ಅದೆಷ್ಟೋ ದಿನಗಳಿಂದ ಹರಡುತ್ತಲೇ ಇದೆ. ವಿಜಯ್ ಆಗಲೀ ಅಥವಾ ರಶ್ಮಿಕಾ ಆಗಲೀ ಈ ಮದುವೆಯ ಬಗ್ಗೆ ಇನ್ನೂ ಅಧಿಕೃತ ಎಂಬಂತೆ ಏನೂ ಹೇಳಿಲ್ಲ. ಆದರೆ, ಅವರಿಬ್ಬರ ಮದುವೆ ಬಗ್ಗೆ ಮಾತ್ರ ಎಲ್ಲಾ ಕಡೆ ಸುದ್ದಿ ಹಬ್ಬಿದೆ. ಆದರೆ, ನಿಜವಾಗಿಯೂ ಈ ಮದುವೆ ಫೆಬ್ರವರಿ 26ಕ್ಕೇ ನಡೆಯೋದು ಹೌದಾ? ಇನ್ನೂ ಇದು ಸಂದೇಹ ಎಂಬಂತಾಗಿದೆ.
ಈ ನಡುವೆ ಹೊಸದೊಂದು ಸಮಸ್ಯೆ ಉದ್ಭವಿಸಿದೆ. ನಟ ವಿಜಯ್ ದೇವರಕೊಂಡ, ಮಾಜಿ ಪ್ರೇಯಸಿ ವರ್ಜೀನಿ ಜೊತೆಗಿನ ಫೋಟೋಗಳು ವೈರಲ್ ಆಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ವಿಜಯ್-ವರ್ಜೀನಿ ಫೋಟೋ ವೈರಲ್ ಆಗುತ್ತಿರುವುದು ರಶ್ಮಿಕಾ ಹಾಗೂ ವಿಜಯ್ ಇಬ್ಬರಿಗೂ ಮುಜುಗರ ತರುತ್ತಿದೆ ಎನ್ನಲಾಗುತ್ತಿದೆ. ರಶ್ಮಿಕಾ-ವಿಜಯ್ ಅವರಿಬ್ಬರಿಗಿಂತ ಹೆಚ್ಚಾಗಿ ಈ ಇಬ್ಬರ ಅಭಿಮಾನಿಗಳು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಕಾರಣ, ಮದುವೆ ಹೊತ್ತಲ್ಲಿ ಇದೇನು ಅಪಶಕುನ ಅಂತ!
ಈ ಹೊಸ ಟ್ವಿಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಮದುವೆ ಸಿದ್ದತೆ ಬೆನ್ನಲೇ ವಿಜಯ್ ದೇವರಕೊಂಡ ಮಾಜಿ ಪ್ರೇಯಸಿ ವರ್ಜೀನಿ ಜೊತೆಗಿನ ಫೋಟೋ ಲೀಕ್ ಆಗಿದ್ದು ಹೇಗೆ? ಯಾರು, ಏತಕ್ಕಾಗಿ ಹಳೆಯ ಘಟನೆಯ ಈ ಫೋಟೋವನ್ನು ಈಗ ವೈರಲ್ ಮಾಡ್ತಿದ್ದಾರೆ ಎಂಬ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ? ಆದರೆ ಸದ್ಯಕ್ಕೆ ಇದಕ್ಕೆ ಉತ್ತರ ಸಿಗುತ್ತಿಲ್ಲ.
ಯಾರು ಈ ವರ್ಜೀನಿ?
ಬೆಲ್ಸಿಯಂ ಮೂಲದ ಮಾಡೆಲ್ ವರ್ಜೀನಿ ಜೊತೆ ವಿಜಯ್ ಈ ಹಿಂದೆ ಡೇಟಿಂಗ್ ಮಾಡುತ್ತಿದ್ದರಂತೆ. ಸದ್ಯ ವೈರಲ್ ಆಗ್ತಿರುವ ಫೋಟೋದಲ್ಲಿ ಇರುವ ಮಾಡೆಲ್ ವರ್ಜಿನಿಯಾ ಅವರ ಬಗ್ಗೆಯೇ ನೆಟ್ಟಿಗರು ಮಾತನಾಡುತ್ತಿದ್ದಾರೆ. 2016ರಲ್ಲಿ ತೆರೆಕಂಡ ವಿಜಯ್ ದೇವರಕೊಂಡ ಅಭಿನಯಿಸಿದ್ದ ಪೆಲ್ಲಿ 'ಪೆಲ್ಲಿ ಚೂಪುಲು' ಚಿತ್ರದಲ್ಲಿ ವರ್ಜೀನಿ ಸಣ್ಣ ಪಾತ್ರ ಮಾಡಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗುತ್ತಿದೆ. ಅವರಿಬ್ಬರೂ ಜೊತೆಯಲ್ಲಿ ಓಡಾಡಿದ್ದಾರೆ, ಡೇಟಿಂಗ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ, ಫೋಟೋಗಳು ಕೂಡ ಓಡಾಡುತ್ತಿವೆ.
ವಿಜಯ್-ವರ್ಜೀನಿ ಇಬ್ಬರೂ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ನಂತರ ಆತ್ಮೀಯತೆ ಬೆಳೆದು ಡೇಟಿಂಗ್ ಮಾಡ್ತಿದ್ದ ವರ್ಜೀನಿ-ವಿಜಯ್ ಅವರ ಖಾಸಗಿ ಫೋಟೋಸ್ ಈಗ ವೈರಲ್ ಆಗಿವೆ. ಸದ್ಯವೇ ರಶ್ಮಿಕಾ ಜೊತೆಗೆ ವಿಜಯ್ ಮದುವೆ ಹತ್ತಿರ ಇರುವಾಗಲೇ ಮಾಜಿ ಪ್ರೇಯಸಿ ವರ್ಜೀನಿ ಜೊತೆಗಿನ ಫೋಟೋಸ್ ವೈರಲ್ ಆಗಿದ್ದು ಮಾತ್ರ ದುರಂತ ಎನ್ನಬಹುದು.
ಆದರೆ, ಈ ಖಾಸಗಿ ಫೋಟೋಗಳನ್ನು ವೈರಲ್ ಮಾಡುತ್ತಿದ್ದರೂ ವಿಜಯ್ ಆಗಲೀ ವರ್ಜೀನಿ ಆಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಶ್ಮಿಕಾ ಕೂಡ ತಲೆ ಕೆಡಿಸಿಕೊಂಡಿಲ್ಲ ಎನ್ನಬಹುದು. ಅವರೆಲ್ಲರಿಗೂ ಎಲ್ಲವೂ ಗೊತ್ತಿದೆ, ಏನೂ ಸಮಸ್ಯೆ ಇಲ್ಲ ಎನ್ನಬಹುದು. ಆದರೆ, ಕೆಲಸವಿಲ್ಲದ ಕೆಲವು ಮಂದಿ ಹಳೆಯ ಸುದ್ದಿ, ಫೋಟೋಗಳನ್ನು ಅನಾವಶ್ಯಕವಾಗಿ ಈಗ ವೈರಲ್ ಮಾಡುತ್ತ ಸ್ಯಾಡಿಸ್ಟ್ ಮೆಂಟಾಲಿಟಿ ಪ್ರದರ್ಶಿಸುತ್ತಿದ್ದಾರೆ. ಇದು ಎಲ್ಲಿಗೆ ಮುಟ್ಟುತ್ತೋ ಏನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

