2026ರ ಟಿ20 ವಿಶ್ವಕಪ್‌ಗೆ 5 ಸ್ಟೇಡಿಯಂ ಆತಿಥ್ಯ! ಟೀಂ ಇಂಡಿಯಾ ಸೋತಲ್ಲೇ ಮತ್ತೆ ಫೈನಲ್ ಮ್ಯಾಚ್
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿವೆ. ಏಳು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.

2026ರ ಟಿ20 ವಿಶ್ವಕಪ್ ಬಗ್ಗೆ ಮಹತ್ವದ ಅಪ್‌ಡೇಟ್
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಅಪ್‌ಡೇಟ್ ಬಂದಿದೆ. ಈ ಟೂರ್ನಿಯ ಫೈನಲ್ ಪಂದ್ಯ ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟಿ20 ವಿಶ್ವಕಪ್ ಆಯೋಜಿಸುತ್ತಿದ್ದು, ಪಂದ್ಯಗಳು ಎರಡೂ ದೇಶಗಳಲ್ಲಿ ನಡೆಯಲಿವೆ.
ಏಳು ಸ್ಥಳಗಳು ಶಾರ್ಟ್‌ಲಿಸ್ಟ್
ಐಸಿಸಿ ಈ ಮೆಗಾ ಈವೆಂಟ್‌ಗಾಗಿ ಒಟ್ಟು ಏಳು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಇದರಲ್ಲಿ ಐದು ಭಾರತದಲ್ಲಿದ್ದರೆ, ಉಳಿದೆರಡು ಶ್ರೀಲಂಕಾದಲ್ಲಿವೆ. ಭಾರತದಲ್ಲಿ ಅಹಮದಾಬಾದ್, ಕೋಲ್ಕತ್ತಾ, ದೆಹಲಿ, ಚೆನ್ನೈ ಮತ್ತು ಮುಂಬೈ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ರೀಡಾಂಗಣಗಳು ಸ್ಪಿನ್ನರ್‌ಗಳು ಮತ್ತು ಬಿಗ್-ಹಿಟ್ಟರ್‌ಗಳಿಗೆ ಅನುಕೂಲಕರವಾಗಿರಲಿವೆ ಎಂದು ನಿರೀಕ್ಷಿಸಲಾಗಿದೆ.
2023ರ ಏಕದಿನ ವಿಶ್ವಕಪ್ ಫೈನಲ್‌ಗೂ ಅಹಮದಾಬಾದ್ ಆತಿಥ್ಯ
2023ರ ಏಕದಿನ ವಿಶ್ವಕಪ್ ಫೈನಲ್‌ಗೂ ಅಹಮದಾಬಾದ್ ಆತಿಥ್ಯ ವಹಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಆ ಫೈನಲ್‌ನಲ್ಲಿ ಭಾರತ ಸೋತಿತ್ತು. ಈಗ ಮತ್ತೆ ಅದೇ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ನಡೆಸಲಾಗುತ್ತಿದೆ. ಈ ಬಾರಿ ಬಿಸಿಸಿಐ ಕಡಿಮೆ ಸ್ಥಳಗಳನ್ನು ಆಯ್ಕೆ ಮಾಡಿದೆ.
ಸೆಮಿಫೈನಲ್‌ಗೆ ಲಂಕಾ ಆತಿಥ್ಯ
ಈ ಕ್ರೀಡಾಂಗಣಗಳಲ್ಲಿ ಹೆಚ್ಚು ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ. ಪಾಕಿಸ್ತಾನದ ಪಂದ್ಯಗಳು ಮತ್ತು ಸೆಮಿಫೈನಲ್‌ಗಳನ್ನು ಶ್ರೀಲಂಕಾದಲ್ಲೇ ನಡೆಸಲು ಈಗಾಗಲೇ ಒಪ್ಪಂದವಾಗಿದೆ. ಪಾಕಿಸ್ತಾನ ಫೈನಲ್‌ಗೆ ಬಂದರೆ, ಆ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.
ಲಂಕಾ ಸೆಮೀಸ್‌ಗೇರಿದರೆ ಆ ಪಂದ್ಯ ದ್ವೀಪರಾಷ್ಟ್ರದಲ್ಲೇ ಆಯೋಜನೆ
ಶ್ರೀಲಂಕಾ ಸೆಮಿಫೈನಲ್‌ಗೆ ತಲುಪಿದರೆ, ಆ ಪಂದ್ಯವನ್ನು ಅವರ ತವರಿನಲ್ಲೇ ಆಡಲು ಐಸಿಸಿ ಸೂಚಿಸಿದೆ. ಐಸಿಸಿ ಶೀಘ್ರದಲ್ಲೇ ಟೂರ್ನಿಯ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಆದರೆ, ದಕ್ಷಿಣ ಭಾರತದ ರಾಜ್ಯಗಳ ಯಾವುದೇ ಸ್ಟೇಡಿಯಂ ಆಯ್ಕೆಯಾಗದಿರುವುದು ಗಮನಾರ್ಹ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

