MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆಸ್ಪತ್ರೆಯಿಂದ ಅಭಿಷೇಕ್ ಶರ್ಮಾ ಡಿಸ್ಚಾರ್ಜ್! ಪಾಕ್ ಬೌಲರ್‌ಗಳಿಗೆ ಶುರುವಾಗಿದೆ ನಡುಕ!

ಆಸ್ಪತ್ರೆಯಿಂದ ಅಭಿಷೇಕ್ ಶರ್ಮಾ ಡಿಸ್ಚಾರ್ಜ್! ಪಾಕ್ ಬೌಲರ್‌ಗಳಿಗೆ ಶುರುವಾಗಿದೆ ನಡುಕ!

ಟೀಮ್ ಇಂಡಿಯಾ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಅವರು ಚೇತರಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇದು ಭಾರತ ತಂಡಕ್ಕೆ ದೊಡ್ಡ ಬೂಸ್ಟ್ ನೀಡಿದೆ.

2 Min read
Author : Naveen Kodase
Published : Feb 12 2026, 08:33 AM IST
Share this Photo Gallery
  • FB
  • TW
  • Linkdin
  • Whatsapp
16
IND vs PAK ಪಂದ್ಯಕ್ಕೂ ಮುನ್ನ ಗುಡ್‌ ನ್ಯೂಸ್
Image Credit : ANI

IND vs PAK ಪಂದ್ಯಕ್ಕೂ ಮುನ್ನ ಗುಡ್‌ ನ್ಯೂಸ್

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಟೀಮ್ ಇಂಡಿಯಾದ ಯುವ ಆಟಗಾರ ಅಭಿಷೇಕ್ ಶರ್ಮಾ ಅನಾರೋಗ್ಯದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಹ ಆಟಗಾರ ತಿಲಕ್ ವರ್ಮಾ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಅಭಿಷೇಕ್ ಈಗ ಆರೋಗ್ಯವಾಗಿದ್ದಾರೆ ಎಂದು ತಿಲಕ್ ವರ್ಮಾ ಸ್ಪಷ್ಟಪಡಿಸಿದ್ದು, ಭಾರತೀಯ ಪಾಳಯದಲ್ಲಿ ಸಂತಸ ಮನೆಮಾಡಿದೆ.
26
ಅಭಿಷೇಕ್‌ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು
Image Credit : AFP

ಅಭಿಷೇಕ್‌ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು

2026ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಮೊದಲ ಪಂದ್ಯದ ನಂತರ ಅಭಿಷೇಕ್ ಶರ್ಮಾಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೆಡ್ ಕೋಚ್ ಗೌತಮ್ ಗಂಭೀರ್ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್ ಪಾರ್ಟಿ ವೇಳೆ ನೋವು ಹೆಚ್ಚಾಗಿದ್ದರಿಂದ, ಅವರನ್ನು ತಕ್ಷಣವೇ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 15ರಂದು ಪಾಕಿಸ್ತಾನ ವಿರುದ್ಧ ಮಹತ್ವದ ಪಂದ್ಯವಿರುವಾಗ ಅಭಿಷೇಕ್ ಆಸ್ಪತ್ರೆಗೆ ದಾಖಲಾಗಿದ್ದು ಆತಂಕ ಮೂಡಿಸಿತ್ತು.

Related Articles

Related image1
ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು!
Related image2
ಯಾರ್ ಗುರು ಇವನು? ಅಭಿಷೇಕ್ ಶರ್ಮಾ ವಿಶ್ವದಾಖಲೆ ಕೇವಲ 44 ಎಸೆತಗಳಲ್ಲಿ ಪೀಸ್ ಪೀಸ್!
36
ಇಂದು ಭಾರತ-ನಮೀಬಿಯಾ ನಡುವೆ ಫೈಟ್
Image Credit : Getty

ಇಂದು ಭಾರತ-ನಮೀಬಿಯಾ ನಡುವೆ ಫೈಟ್

ಟಿ20 ವಿಶ್ವಕಪ್‌ನಲ್ಲಿ ಭಾರತ ಗುರುವಾರವಾದ ಇಂದು ನಮೀಬಿಯಾ ವಿರುದ್ಧ ಆಡಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಅಭಿಷೇಕ್ ಆಡುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. 'ಅಭಿಷೇಕ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ನಾಳೆ ಅವರ ಚೇತರಿಕೆ ನೋಡಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ತಿಲಕ್ ವರ್ಮಾ ಹೇಳಿದ್ದಾರೆ. ಮ್ಯಾನೇಜ್‌ಮೆಂಟ್ ಅವರ ಮೇಲೆ ಯಾವುದೇ ಒತ್ತಡ ಹೇರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

46
ಪಾಕ್ ವಿರುದ್ದ ಕಣಕ್ಕಿಳಿಯುವುದಂತೂ ಕನ್ಫರ್ಮ್
Image Credit : Getty

ಪಾಕ್ ವಿರುದ್ದ ಕಣಕ್ಕಿಳಿಯುವುದಂತೂ ಕನ್ಫರ್ಮ್

ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಲಭ್ಯರಿರಲಿ, ಇಲ್ಲದಿರಲಿ, ಫೆಬ್ರವರಿ 15ರಂದು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧದ ಬಿಗ್ ಫೈಟ್‌ಗೆ ಅವರು ಸಿದ್ಧರಾಗುವ ನಿರೀಕ್ಷೆಯಿದೆ. ಪಾಕ್ ವಿರುದ್ಧ ಅಭಿಷೇಕ್ ಉತ್ತಮ ದಾಖಲೆ ಹೊಂದಿದ್ದಾರೆ. ಏಷ್ಯಾಕಪ್ 2025ರಲ್ಲಿ ಪಾಕ್ ಬೌಲರ್ ಶಾಹೀನ್ ಅಫ್ರಿದಿ ಬೌಲಿಂಗ್‌ಅನ್ನು ಧೂಳೀಪಟ ಮಾಡಿದ್ದರು. ಸಲ್ಮಾನ್ ಆಘಾ ನಾಯಕತ್ವದ ಪಾಕ್ ತಂಡಕ್ಕೆ ಅಭಿಷೇಕ್ ದೊಡ್ಡ ಅಪಾಯಕಾರಿಯಾಗಬಲ್ಲರು.

56
ಗಂಭೀರ್ ಮಾರ್ಗದರ್ಶನದಲ್ಲಿ ಆಕ್ರಮಣಕಾರಿ ಆಟ
Image Credit : Tilak Varma\Twitter

ಗಂಭೀರ್ ಮಾರ್ಗದರ್ಶನದಲ್ಲಿ ಆಕ್ರಮಣಕಾರಿ ಆಟ

ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಆಟವಾಡುತ್ತಿದೆ. ಅಭಿಷೇಕ್ ಶರ್ಮಾ ನೀಡುವ ಆರಂಭ ತಂಡಕ್ಕೆ ಬಹಳ ಮುಖ್ಯ. ಪಾಕಿಸ್ತಾನದಂತಹ ಒತ್ತಡದ ಪಂದ್ಯಗಳಲ್ಲಿ ಅಭಿಷೇಕ್ ಅವರಂತಹ ನಿರ್ಭೀತ ಬ್ಯಾಟರ್‌ಗಳು ತಂಡದಲ್ಲಿರುವುದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್. 

66
ಪಾಕಿಸ್ತಾನಕ್ಕೆ ಶುರುವಾಗಿದೆ ಚಳಿಜ್ವರ
Image Credit : Getty

ಪಾಕಿಸ್ತಾನಕ್ಕೆ ಶುರುವಾಗಿದೆ ಚಳಿಜ್ವರ

ಅವರು ಚೇತರಿಸಿಕೊಂಡಿರುವುದು ಪಾಕ್ ಬೌಲರ್‌ಗಳಲ್ಲಿ ಈಗಾಗಲೇ ನಡುಕ ಹುಟ್ಟಿಸಿದೆ. ಕೊಲಂಬೊದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್ ಜಗತ್ತು ಕಾಯುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಐಸಿಸಿ ಟಿ20 ವಿಶ್ವಕಪ್
ಬಿಸಿಸಿಐ

Latest Videos
Recommended Stories
Recommended image1
Viral Video: ನೋರಾ ಫತೇಹಿ ಡಾನ್ಸ್‌ ನೋಡ್ತಾ ಮೈಮರೆತ ಸೂರ್ಯ; ಸ್ಟೇಡಿಯಂನಲ್ಲೇ ಗಂಡನನ್ನ ರೆಡ್‌ಹ್ಯಾಂಡ್‌ ಆಗಿ ಹಿಡಿದ ಹೆಂಡ್ತಿ ದಿವಿಶಾ ಶೆಟ್ಟಿ!
Recommended image2
T20 ವಿಶ್ವಕಪ್‌: ಭಾರತಕ್ಕಿಂದು ನಮೀಬಿಯಾ ಸವಾಲು; ಇಂದು ಕಣಕ್ಕಿಳೀತಾರಾ ಅಭಿಷೇಕ್ ಶರ್ಮಾ?
Recommended image3
ನಮೀಬಿಯಾ ಎದುರಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಬರೋಬ್ಬರಿ 3 ಮೇಜರ್ ಚೇಂಜ್! ಅಭ್ಯಾಸದ ವೇಳೆ ಮತ್ತೊಬ್ಬ ಆಟಗಾರನಿಗೆ ಗಾಯ!
Related Stories
Recommended image1
ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್‌ ನೀಡಿದ BCCI; ಆಟಗಾರರ ಕನಸಿಗೆ ತಣ್ಣೀರು!
Recommended image2
ಯಾರ್ ಗುರು ಇವನು? ಅಭಿಷೇಕ್ ಶರ್ಮಾ ವಿಶ್ವದಾಖಲೆ ಕೇವಲ 44 ಎಸೆತಗಳಲ್ಲಿ ಪೀಸ್ ಪೀಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved