ಶ್ರೇಯಸ್ ಮಾಡಿದ ತಪ್ಪೇನು? ಏಷ್ಯಾಕಪ್ ಟೂರ್ನಿಯಿಂದ ಐಯ್ಯರ್ ಹೊರಬಿದ್ದಿದ್ದೇಕೆ?
ಶ್ರೇಯಸ್ ಐಯ್ಯರ್‌ಗೆ 2025ರ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಮಂಗಳವಾರ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ತಂಡವನ್ನು ಪ್ರಕಟಿಸಿದರು. ಫಾರ್ಮ್‌ನಲ್ಲಿರುವ ಐಯ್ಯರ್‌ರನ್ನು ಯಾಕೆ ಕೈಬಿಟ್ಟರು ಎನ್ನುವುದನ್ನು ನೋಡೋಣ ಬನ್ನಿ

ಮುಂಬೈನಲ್ಲಿ ಮಂಗಳವಾರ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿದರು. ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ಈ ಟೂರ್ನಿ ನಡೆಯಲಿದೆ. ಸೂರ್ಯಕುಮಾರ್ ನಾಯಕ, ಶುಭ್‌ಮನ್ ಗಿಲ್ ಉಪನಾಯಕರಾಗಿ ನೇಮಕವಾಗಿದ್ದಾರೆ. ಆದರೆ ಫಾರ್ಮ್‌ನಲ್ಲಿರುವ ಶ್ರೇಯಸ್ ಐಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಐಯ್ಯರ್ ಆಯ್ಕೆಯಾಗದಿರುವುದು ಚರ್ಚೆಯ ವಿಷಯವಾಗಿದೆ. ಏಕೆಂದರೆ ಐಪಿಎಲ್, ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ಮೂಲದ ಬ್ಯಾಟರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ತಂಡವನ್ನು ನಾಯಕನಾಗಿ ಫೈನಲ್‌ಗೆ ಕರೆದೊಯ್ದರು. ಅಗರ್ಕರ್ ಹೇಳುವಂತೆ, ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯದೇ ಇರುವುದಕ್ಕೆ ಅವರದ್ದು ತಪ್ಪಿಲ್ಲ, ನಮ್ಮದು ತಪ್ಪಿಲ್ಲ. 15 ಜನರನ್ನು ಮಾತ್ರ ಆಯ್ಕೆ ಮಾಡಬಹುದು." ಎಂದಿದ್ದಾರೆ.
ಐಯ್ಯರ್ ಕೊನೆಯದಾಗಿ ಡಿಸೆಂಬರ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. 2024ರ ಐಪಿಎಲ್‌ನಲ್ಲಿ ಕೆಕೆಆರ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟರು. 2025ರಲ್ಲಿ ಪಂಜಾಬ್ ತಂಡವನ್ನು ಫೈನಲ್‌ಗೆ ಕರೆದೊಯ್ದರು. ಈ ವರ್ಷ 17 ಪಂದ್ಯಗಳಲ್ಲಿ 604 ರನ್ ಗಳಿಸಿದ್ದಾರೆ. ಆದರೂ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
"ಇಂಗ್ಲೆಂಡ್ ಸರಣಿಯಲ್ಲಿ ಗಿಲ್ ಚೆನ್ನಾಗಿ ಆಡಿದ್ದಾರೆ. ಅದಕ್ಕೇ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಿದ್ದೇವೆ" ಎಂದು ಅಗರ್ಕರ್ ಹೇಳಿದ್ದಾರೆ. ಗಿಲ್ ಕೊನೆಯದಾಗಿ 2024ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಆಡಿದ್ದರು. ಆದರೆ ಫಾರ್ಮ್‌ನಲ್ಲಿರುವ ಅಯ್ಯರ್ ಅವರನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

