- Home
- Sports
- Cricket
- ಧೋನಿ ಮೇಲೆ ನಂಬಿಕೆ ಕಳೆದುಕೊಂಡ CSK, ಐಪಿಎಲ್‌ನ ಕೊನೇ ಹಂತದಲ್ಲಿ ದಾಖಲೆವೀರ ವಿಕೆಟ್‌ಕೀಪರ್ ಸೇರ್ಪಡೆ!
ಧೋನಿ ಮೇಲೆ ನಂಬಿಕೆ ಕಳೆದುಕೊಂಡ CSK, ಐಪಿಎಲ್‌ನ ಕೊನೇ ಹಂತದಲ್ಲಿ ದಾಖಲೆವೀರ ವಿಕೆಟ್‌ಕೀಪರ್ ಸೇರ್ಪಡೆ!
MS Dhoni: ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಧೋನಿ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡಿರುವ ಸೂಚನೆ ಸಿಕ್ಕಿದೆ. ಏಕೆಂದರೆ ಋತುವಿನ ಅಂತ್ಯದಲ್ಲಿ ಚೆನ್ನೈ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅವರೊಂದಿಗೆ ಸಹಿ ಹಾಕಿಕೊಂಡಿದೆ.

ಐಪಿಎಲ್ ನಲ್ಲಿ ಸಿಎಸ್ ಕೆ ತಂಡದ ಪಾಲಿಗೆ ಇಂಥದ್ದೊಂದು ಘಟನೆ ಆಗಿರುವುದು ಇದೇ ಮೊದಲು. ಐದು ಬಾರಿ ಚಾಂಪಿಯನ್ ಆಗಿರುವ ತಂಡ ಸತತ ಎರಡು ಬಾರಿ ಐಪಿಎಲ್ ಪ್ಲೇಆಫ್ ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವುದು ಇದೇ ಮೊದಲು.
ಋತುವಿನ ಆರಂಭದಲ್ಲಿ ರುತುರಾಜ್ ಗಾಯಕ್ವಾಡ್ ತಂಡದ ನಾಯಕರಾಗಿದ್ದರು. ಗಾಯದ ಕಾರಣ ಅವರು ಐಪಿಎಲ್‌ನಿಂದ ಹೊರಬಿದ್ದಿದ್ದರು. ಬಳಿಕ ಧೋನಿ ಮತ್ತೆ ನಾಯಕನಾಗಿದ್ದರೂ, ತಂಡವನ್ನು ಯಶಸ್ಸಿನ ಹಾದಿಗೆ ತರಲು ಅವರಿಗೆ ಸಾಧ್ಯವಾಗಲಿಲ್ಲ. ಧೋನಿಯ ಸ್ವಂತ ಪ್ರದರ್ಶನವೂ ಅತ್ಯಂತ ಕೆಳಮಟ್ಟದಲ್ಲಿದೆ.
ಈ ಬಾರಿ ಅವರು ನಾಯಕರಾಗಿಯೂ ವಿಫಲರಾಗಿದ್ದಾರೆ, ವಿಕೆಟ್ ಹಿಂದೆ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ, ಫಿನಿಶರ್ ಧೋನಿ ಎನ್ನುವ ಹೆಸರಿಗೆ ತಕ್ಕಂತೆ ಅವರ ಆಟ ಬಂದಿಲ್ಲ. ಈ ಬಾರಿ ಸಿಎಸ್‌ಕೆ ಅಧಿಕಾರಿಗಳು ಧೋನಿ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎನ್ನುವ ಸೂಚನೆ ಸಿಗುವಂಥ ಬೆಳವಣಿಗೆಯಾಗಿದೆ.
ಏಕೆಂದರೆ ಋತುವಿನ ಕೊನೆಯಲ್ಲಿ, ಚೆನ್ನೈ ಯುವ ವಿಕೆಟ್ ಕೀಪರ್-ಬ್ಯಾಟರ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಿಎಸ್‌ಕೆ ಗುಜರಾತ್‌ನ ಉರ್ವಿಲ್ ಪಟೇಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ. ಊರ್ವಿಲ್ ಪಟೇಲ್, ಟಿ20ಯಲ್ಲಿ ಅತಿವೇಗದ ಶತಕ ಬಾರಿಸಿದ ಭಾರತದ ಬ್ಯಾಟ್ಸ್‌ಮನ್ ಎನ್ನುವ ಶ್ರೇಯ ಹೊಂದಿದ್ದಾರೆ. ಅವರು ಕೇವಲ 28 ಎಸೆತಗಳಲ್ಲಿ ಟಿ20 ಶತಕ ಗಳಿಸಿದ ದಾಖಲೆ ಮಾಡಿದ್ದಾರ. ಈ ಹಾದಿಯಲ್ಲಿ ಅವರು ಗೇಲ್ ದಾಖಲೆಯನ್ನು ಮುರಿದರು. ಅವರು ಟಿ20 ಕ್ರಿಕೆಟ್‌ನಲ್ಲಿ 36 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತ್ರಿಪುರ ವಿರುದ್ಧ ಉರ್ವಿಲ್ ಕೇವಲ 28 ಎಸೆತಗಳಲ್ಲಿ ಶತಕ ಗಳಿಸಿದರು. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವ ದಾಖಲೆಯನ್ನು ಕೇವಲ 1 ಎಸೆತದಲ್ಲಿ ಅವರು ತಪ್ಪಿಸಿಕೊಂಡರು. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವ ದಾಖಲೆಯನ್ನು ಎಸ್ಟೋನಿಯಾದ ಸಾಹಿಲ್ ಚೌಹಾಣ್ ಹೊಂದಿದ್ದಾರೆ, ಅವರು 27 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಆದರೂ, ಪಂತ್ ಅವರ ದಾಖಲೆಯನ್ನು ಮುರಿದ ಅತ್ಯಂತ ವೇಗದ ಭಾರತೀಯ ಆಟಗಾರ ಇವರಾಗಿದ್ದರು.
ಆದರೆ, ಸಿಎಸ್‌ಕೆ ಅಧಿಕಾರಿಗಳು ಉರ್ವಿಲ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಧೋನಿ ಮೇಲಿನ ನಂಬಿಕೆ ಕಳೆದುಕೊಂಡ ಕಾರಣದಿಂದಲ್ಲ, ಬದಲಿಗೆ ವಿಕೆಟ್ ಕೀಪರ್ ವಂಶ್ ಬೇಡಿ ಗಾಯದ ಕಾರಣದಿಂದ ಹೊರಗುಳಿದಿರುವುದರಿಂದ ಈ ಸ್ಥಾನಕ್ಕೆ ಊರ್ವಿಲ್‌ರನ್ನು ಆಯ್ಕೆ ಮಾಡಲಾಗಿದೆ ಎಂದಿದೆ. ಆದರೆ, ಲಕ್ಷಣ ಹಾಗೆ ಕಾಣುತ್ತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

