MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಇಮ್ರಾನ್‌ ಖಾನ್‌ಗೆ ಚಿಕಿತ್ಸೆ ಕೊಡಿಸಿ: ಕಪಿಲ್‌, ಗವಾಸ್ಕರ್‌ ಸೇರಿದಂತೆ 14 ದಿಗ್ಗಜ ಕ್ರಿಕೆಟಿಗರ ಒತ್ತಾಯ

ಇಮ್ರಾನ್‌ ಖಾನ್‌ಗೆ ಚಿಕಿತ್ಸೆ ಕೊಡಿಸಿ: ಕಪಿಲ್‌, ಗವಾಸ್ಕರ್‌ ಸೇರಿದಂತೆ 14 ದಿಗ್ಗಜ ಕ್ರಿಕೆಟಿಗರ ಒತ್ತಾಯ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಭಾರತದ ಕಪಿಲ್‌ ದೇವ್‌, ಸುನೀಲ್‌ ಗವಾಸ್ಕರ್‌ ಸೇರಿದಂತೆ ವಿಶ್ವದ 14 ಕ್ರಿಕೆಟ್‌ ದಿಗ್ಗಜರು ಪಾಕ್‌ ಸರ್ಕಾರಕ್ಕೆ ಪತ್ರ ಬರೆದು, ಅವರಿಗೆ ಸೂಕ್ತ ವೈದ್ಯಕೀಯ ಆರೈಕೆ ನೀಡುವಂತೆ ಒತ್ತಾಯಿಸಿದ್ದಾರೆ.

1 Min read
Author : Kannadaprabha News
Published : Feb 18 2026, 07:32 AM IST
Share this Photo Gallery
  • FB
  • TW
  • Linkdin
  • Whatsapp
14
ಪಾಕಿಸ್ತಾನ ಸರ್ಕಾರಕ್ಕೆ ಪತ್ರ
Image Credit : Getty

ಪಾಕಿಸ್ತಾನ ಸರ್ಕಾರಕ್ಕೆ ಪತ್ರ

ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪಾಕ್ ಮಾಜಿ ಪ್ರಧಾನಿ, ದಿಗ್ಗಜ ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಸೂಕ್ತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಭಾರತದ ಕಪಿಲ್‌ ದೇವ್‌, ಸುನೀಲ್‌ ಗವಾಸ್ಕರ್‌ ಸೇರಿದಂತೆ ವಿಶ್ವದ 14 ಕ್ರಿಕೆಟ್‌ ದಿಗ್ಗಜರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

24
 14 ವರ್ಷ ಜೈಲು ಶಿಕ್ಷೆ
Image Credit : x

14 ವರ್ಷ ಜೈಲು ಶಿಕ್ಷೆ

1992ರಲ್ಲಿ ಪಾಕಿಸ್ತಾನ ಏಕದಿನ ವಿಶ್ವಕಪ್‌ ಗೆದ್ದಾಗ ಇಮ್ರಾನ್‌ ನಾಯಕರಾಗಿದ್ದರು. 2018ರಿಂದ 2022ರ ವರೆಗೆ ಪಾಕಿಸ್ತಾನ ಪ್ರಧಾನಿಯಾಗಿದ್ದ ಅವರು, 2023ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

Related Articles

Related image1
ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!
Related image2
'ಡಿವೋರ್ಸ್ ಬಳಿಕ ಮಾನಸಿಕ ಸ್ಥಿತಿ ಹದಗೆಟ್ಟಿತ್ತು' ಎಂಬ ವೈರಲ್ ನ್ಯೂಸ್ ಬಗ್ಗೆ ನಟ ಇಮ್ರಾನ್ ಖಾನ್ ಹೇಳಿದ್ದೇನು?
34
 ಶೇ.85ರಷ್ಟು ಕಣ್ಣಿನ ದೃಷ್ಠಿ
Image Credit : Asianet News

ಶೇ.85ರಷ್ಟು ಕಣ್ಣಿನ ದೃಷ್ಠಿ

ಸದ್ಯ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್‌ ಜೈಲಧಿಕಾರಿಗಳ ನಿರ್ಲಕ್ಷ್ಯದಿಂದ ಶೇ.85ರಷ್ಟು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ವಿಶ್ವದ ವಿವಿಧ ಕ್ರಿಕೆಟ್‌ ತಂಡಗಳ ಮಾಜಿ ನಾಯಕರು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ತೋಷಖಾನಾ–2 ಪ್ರಕರಣ: ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!

44
ವೈದ್ಯಕೀಯ ಆರೈಕೆ ನೀಡಬೇಕೆಂದು ಆಗ್ರಹ
Image Credit : X/@TsMeSalman

ವೈದ್ಯಕೀಯ ಆರೈಕೆ ನೀಡಬೇಕೆಂದು ಆಗ್ರಹ

‘ಕ್ರಿಕೆಟ್‌ ದಿಗ್ಗಜ ಇಮ್ರಾನ್ ಖಾನ್‌ ಅವರ ದೃಷ್ಠಿ ಕ್ಷೀಣಿಸುತ್ತಿರುವುದು ಕಳವಳ ಉಂಟು ಮಾಡಿದೆ. ಅವರ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ತಜ್ಞರ ತಂಡದಿಂದ ವೈದ್ಯಕೀಯ ಆರೈಕೆ ನೀಡಬೇಕೆಂದು ಆಗ್ರಹಿಸುತ್ತೇವೆ’ ಎಂದಿದ್ದಾರೆ. 

ಈ ಪತ್ರಕ್ಕೆ ಮೈಕೆಲ್ ಅಥರ್ಟನ್, ಅಲಾನ್ ಬಾರ್ಡರ್, ಮೈಕೆಲ್ ಬ್ರಿಯಾರ್ಲಿ, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, ಸ್ಟೀವ್ ವಾ ಮತ್ತು ಜಾನ್ ರೈಟ್ ಕೂಡಾ ಸಹಿ ಮಾಡಿದ್ದಾರೆ.

ಇದನ್ನೂ ಓದಿ: ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಇಮ್ರಾನ್ ಖಾನ್
ಪಾಕಿಸ್ತಾನ
ಕ್ರಿಕೆಟ್

Latest Videos
Recommended Stories
Recommended image1
ಅರ್ಜುನ್ ತೆಂಡೂಲ್ಕರ್ ಪ್ರೀ ವೆಡ್ಡಿಂಗ್‌ನಲ್ಲಿ ಶುಬಮನ್ ಭರ್ಜರಿ ಡ್ಯಾನ್ಸ್, ಕೈಹಿಡಿದು ಕುಣಿದ ಚೆಲುವೆ ಯಾರು?
Recommended image2
ಜಿಂಬಾಬ್ವೆ-ಐರ್ಲೆಂಡ್ ಮ್ಯಾಚ್ ರದ್ದು! ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಔಟ್!
Recommended image3
ಐರ್ಲೆಂಡ್-ಜಿಂಬಾಬ್ವೆ ಮ್ಯಾಚ್‌ಗೆ ಮಳೆ ಅಡ್ಡಿ; ಪಂದ್ಯ ರದ್ದಾದ್ರೆ ಆಸ್ಟ್ರೇಲಿಯಾಗೆ ಇದೆಯಾ ಚಾನ್ಸ್? ಹೀಗಿದೆ ನೋಡಿ ಸೂಪರ್-8 ಲೆಕ್ಕಾಚಾರ
Related Stories
Recommended image1
ಜೈಲಿನಲ್ಲಿ ಚಿತ್ರಹಿಂಸೆ, ದೃಷ್ಟಿ ಕಳೆದುಕೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್! ವಿಶ್ವಕಪ್ ಗೆದ್ದ ನಾಯಕನಿಗೆ ಇದೆಂಥಾ ಪರಿಸ್ಥಿತಿ!
Recommended image2
'ಡಿವೋರ್ಸ್ ಬಳಿಕ ಮಾನಸಿಕ ಸ್ಥಿತಿ ಹದಗೆಟ್ಟಿತ್ತು' ಎಂಬ ವೈರಲ್ ನ್ಯೂಸ್ ಬಗ್ಗೆ ನಟ ಇಮ್ರಾನ್ ಖಾನ್ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved