Ind vs Eng ಟೆಸ್ಟ್ ಸರಣಿ: ಅಪರೂಪದ ಮೈಲಿಗಲ್ಲು ಬರೆಯಲು ರೆಡಿಯಾದ Team India
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾದ ಹಲವು ಆಟಗಾರರು ಅಪರೂಪದ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಇಂಡಿಯಾ - ಇಂಗ್ಲೆಂಡ್ ಟೆಸ್ಟ್ ಸರಣಿ
ಗಿಲ್, ಜೈಸ್ವಾಲ್ 2000 ರನ್ಸ್
ಶುಭ್‌ಮನ್ ಗಿಲ್ ಗೆ 2000 ಟೆಸ್ಟ್ ರನ್ ಪೂರೈಸಲು ಇನ್ನೂ 107 ರನ್ ಬೇಕು. ಜೈಸ್ವಾಲ್ ಗೆ 2000 ಟೆಸ್ಟ್ ರನ್ ಗಳಿಗೆ 202 ರನ್ ಬೇಕು. ಇಂಗ್ಲೆಂಡ್ ನಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಈ ಸರಣಿಯಲ್ಲಿ ಕ್ಯಾಪ್ಟನ್ ಗಿಲ್ ಮೇಲೆ ಎಲ್ಲರ ಚಿತ್ತವಿದೆ.
ಜೈಸ್ವಾಲ್ ಚಾಲೆಂಜ್
ಜೈಸ್ವಾಲ್ ಇಂಗ್ಲೆಂಡ್ ಬೌಲರ್ ಗಳಿಗೆ ಸವಾಲೊಡ್ಡಲಿದ್ದಾರೆ. ಅವರಿಗೆ 3,000 ಅಂತಾರಾಷ್ಟ್ರೀಯ ರನ್ ಗಳಿಗೆ 464 ರನ್ ಬೇಕು.
9,000 ರನ್ ಗಳತ್ತ ರಾಹುಲ್
ಕೆ.ಎಲ್ ರಾಹುಲ್ 9,000 ಅಂತಾರಾಷ್ಟ್ರೀಯ ರನ್ ಗಳಿಗೆ ಕೇವಲ 435 ರನ್ ದೂರದಲ್ಲಿದ್ದಾರೆ. ಇಂಗ್ಲೆಂಡ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ.
ರಿಷಭ್ ಪಂತ್ 3,000 ಟೆಸ್ಟ್ ರನ್!
ರಿಷಭ್ ಪಂತ್ 3,000 ಟೆಸ್ಟ್ ರನ್ ಗಳಿಗೆ ಕೇವಲ 52 ರನ್ ದೂರದಲ್ಲಿದ್ದಾರೆ. ಉಪನಾಯಕನಾಗಿ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಜಡೇಜಾ & ಸಿರಾಜ್ ಮೈಲಿಗಲ್ಲುಗಳು
ರವೀಂದ್ರ ಜಡೇಜಾ 7,000 ಅಂತಾರಾಷ್ಟ್ರೀಯ ರನ್ ಗಳಿಗೆ 309 ರನ್ ದೂರದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ 200 ಅಂತಾರಾಷ್ಟ್ರೀಯ ವಿಕೆಟ್ ಗಳಿಗೆ 15 ವಿಕೆಟ್ ದೂರದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

