- Home
- Sports
- Cricket
- ಕೊಹ್ಲಿ, ರೋಹಿತ್, ಅಶ್ವಿನ್ ಆಡದ್ದನ್ನು ಅರಗಿಸಿಕೊಳ್ಳಲು 2 ವಾರ ಬೇಕಾಯ್ತು; ಕೆ ಎಲ್ ರಾಹುಲ್ ಹೀಗಂದಿದ್ದೇಕೆ?
ಕೊಹ್ಲಿ, ರೋಹಿತ್, ಅಶ್ವಿನ್ ಆಡದ್ದನ್ನು ಅರಗಿಸಿಕೊಳ್ಳಲು 2 ವಾರ ಬೇಕಾಯ್ತು; ಕೆ ಎಲ್ ರಾಹುಲ್ ಹೀಗಂದಿದ್ದೇಕೆ?
ಲಂಡನ್: ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ. ಅನುಭವಿ ಆಟಗಾರರಿಲ್ಲದೇ ಯುವ ಆಟಗಾರರನ್ನೊಳಗೊಂಡ ತಂಡವು 2-2ರ ಸಮಬಲದೊಂದಿಗೆ ಸರಣಿ ಮುಗಿಸಿದೆ. ಈ ಕುರಿತಂತೆ ಕೆ ಎಲ್ ರಾಹುಲ್ ಮನಬಿಚ್ಚಿ ಮಾತಾನಾಡಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ನಿವೃತ್ತಿಯಾದಾಗ ಅದನ್ನು ಅರಗಿಸಿಕೊಳ್ಳಲು ನನಗೆ 2 ವಾರ ಬೇಕಾಗಿತ್ತು ಎಂದು ಭಾರತದ ತಾರಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಹೇಳಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದರು.
ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಕೆಲವೇ ದಿನಗಳ ಮೊದಲ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡಾ ಅಚ್ಚರಿಯ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಹೀಗಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶುಭ್‌ಮನ್ ಗಿಲ್‌ಗೆ ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು.
5ನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಅವರು, ‘ನಾನು ಸುಮಾರು ವರ್ಷದಿಂದ ಕ್ರಿಕೆಟ್ ಆಡುತ್ತಿದ್ದೇನೆ. ಭಾರತ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಗೆದ್ದಿದೆ. ಈ ಸರಣಿಯನ್ನು ಅದಕ್ಕೆ ಹೋಲಿಕೆ ಮಾಡಲು ಆಗದಿದ್ದರೂ, ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲಿ ಒಂದು ಶ್ರೇಷ್ಠ ಸರಣಿಯಾಗಿ ಉಳಿದುಕೊಳ್ಳಲಿದೆ. ಟೆಸ್ಟ್ ಕ್ರಿಕೆಟ್ ಮೌಲ್ಯ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೂ ಈ ಸರಣಿ ಉತ್ತರ’ ಎಂದರು.
ರೋಹಿತ್, ಕೊಹ್ಲಿ, ಅಶ್ವಿನ್‌ರಂತಹ ಹಿರಿಯ ಆಟಗಾರರಿಲ್ಲದೇ ಎಲ್ಲರೂ ನನ್ನ ಬಳಿ ಬಂದು ಕೇಳುವಾಗ ನನ್ನ ಜವಾಬ್ದಾರಿ ಏನೆಂಬುದು ಗೊತ್ತಾಯಿತು. ಅದರಿಂದಲೇ ಸರಣಿಯಲ್ಲಿ ಉತ್ತಮ ಆಟವಾಡಲು ಸಾಧ್ಯವಾಯಿತು ಎಂದು ರಾಹುಲ್ ಹೇಳಿದ್ದಾರೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕೆ ಎಲ್ ರಾಹುಲ್ ತಲಾ ಎರಡು ಶತಕ ಹಾಗೂ ಎರಡು ಅರ್ಧಶತಕ ಸಹಿತ 53.20 ಬ್ಯಾಟಿಂಗ್ ಸರಾಸರಿಯಲ್ಲಿ 532 ರನ್ ಸಿಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

