- Home
- Sports
- Cricket
- ಕೊಹ್ಲಿ ಬ್ಯಾಟಿಂಗ್ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ
ಕೊಹ್ಲಿ ಬ್ಯಾಟಿಂಗ್ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ
ಕೊಹ್ಲಿ ಬ್ಯಾಟಿಂಗ್ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಕೆಲ ಅಭಿಮಾನಿಗಳು ಡೆಲ್ಲಿ ವಿರುದ್ದ ಆರ್ಸಿಬಿ ಸೋಲಿಗೆ ಕೊಹ್ಲಿ ಕಳಪೆ ಬ್ಯಾಟಿಂಗ್ ಕಾರಣ ಎಂದಿದ್ದಾರೆ.

ಆರ್ಸಿಬಿ ಸೋಲಿಗೆ ಕಾರಣ ಹೇಳಿದ ಫ್ಯಾನ್ಸ್
ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಗೆಲುವಿನೊಂದಿಗೆ ಸಾಗುತ್ತಿದ್ದ ಆರ್ಸಿಬಿ, ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಗ್ಗರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು. ಹೀಗಾಗಿ ಕೊನೆಯ ಓವರ್ನಲ್ಲಿ ಪಂದ್ಯ ಕೈಚೆಲ್ಲಿದೆ. ಈ ಪಂದ್ಯದ ಸೋಲಿಗೆ ಅಭಿಮಾನಿಗಳು ಕಾರಣ ಬಿಚ್ಚಿಟ್ಟಿದ್ದಾರೆ.
ಕೊಹ್ಲಿ ಶೋ ಆಫ್ ಹೆಚ್ಚಾಯ್ತು
ಆರ್ಸಿಬಿ ಸೋಲಿನ ಬಳಿಕ ಹಲವು ಅಭಿಮಾನಿಗಳು ಬ್ಯಾಟಿಂಗ್ ಪ್ರದರ್ಶನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಕೆಲ ಅಭಿಮಾನಿಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕನ್ನಡಿದ ಕೆಎಲ್ ರಾಹುಲ್ ಬ್ಯಾಟಿಂಗ್ ಶ್ಲಾಘಿಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಗ್ಯಾಲರಿಯಲ್ಲಿರುವ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟು ಶೋಆಫ್ ಮಾಡುವುದೇ ಹೆಚ್ಚಾಯಿತು. ರನ್ ಬರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬ್ಯಾಟಿಂಗ್ ಕಡೆ ಇರಲಿ ಗಮನ
ವಿರಾಟ್ ಕೊಹ್ಲಿ ಕಿಸ್ ಕೊಡುವುದು, ಇತರ ಕಡೆ ಗಮನ ಕೊಡುವುದಕ್ಕಿಂತ ಬ್ಯಾಟಿಂಗ್ ಕಡೆ ಗಮನ ಕೊಡಬೇಕು ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಯಾವುದೇ ಶೋ ಆಫ್ ಇಲ್ಲದೆ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊನೆಯ ಓವರ್ನಲ್ಲಿ ಕೈಚೆಲ್ಲಿದ ಪಂದ್ಯ
ಆರ್ಸಿಬಿ 175 ರನ್ ಸಿಡಿಸಿದಾಗಲೇ ಕೆಲ ಅಭಿಮಾನಿಗಳು ಗೆಲುವಿನ ಆಸೆ ಕೈಬಿಟ್ಟಿದ್ದರು. ಆದರೆ ಆರ್ಸಿಬಿ ಬೌಲಿಂಗ್ ಉತ್ತಮ ಪ್ರದರ್ಶನ ನೀಡಿತ್ತು. ಕೊನೆಯ ಓವರ್ನಲ್ಲಿ ಆರ್ಸಿಬಿ ಬೌಲರ್ ರೊಮಾರಿಯೋ ಶೆಫರ್ಡ್ ಎರಡು ಸಿಕ್ಸರ್ ನೀಡಿ ದುಬಾರಿಯಾದರು. ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಶರಣಾಗಿತ್ತು.
ಐಪಿಎಲ್ 2026 ಅಂಕಪಟ್ಟಿ
ಆರ್ಸಿಬಿ ಈ ಬಾರಿ ರಾಜಸ್ತಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೋಲು ಕಂಡಿದೆ. ಈ ಮೂಲಕ ಆಡಿದ 6 ಪಂದ್ಯದಲ್ಲಿ 4 ಗೆಲುವು ಹಾಗೂ 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ಪಂಜಾಬ್ ಕಿಂಗ್ಸ್ ಆಕ್ರಮಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

