ಆಸೀಸ್ ದಿಗ್ಗಜ ಕ್ರಿಕೆಟಿಗನಿಗೆ ಸ್ಕಿನ್ ಕ್ಯಾನ್ಸರ್! ಫೋಟೋ ಹಂಚಿಕೊಂಡ ವಿಶ್ವಕಪ್ ಹೀರೋ
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರು ಚರ್ಮದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದ್ದಾರೆ.
15

Image Credit : Getty
ಮೈಕೆಲ್ ಕ್ಲಾರ್ಕ್ ಚರ್ಮದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಚರ್ಮದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕ್ಲಾರ್ಕ್ ತಮ್ಮ ಮೂಗಿನ ಮೇಲಿನ ಕ್ಯಾನ್ಸರ್ ಗಡ್ಡೆಯನ್ನು ತೆಗೆಸಿದ್ದಾರೆ.
25
Image Credit : Getty
2006 ರಿಂದ ಮೈಕೆಲ್ ಕ್ಲಾರ್ಕ್ ಹೋರಾಟ
ಮೈಕೆಲ್ ಕ್ಲಾರ್ಕ್ 2006 ರಿಂದ ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. 2019 ರಲ್ಲಿ ಅವರ ಹಣೆಯ ಮೇಲಿನ ಗಡ್ಡೆಗಳನ್ನು ತೆಗೆಸಿದ್ದರು.
35
Image Credit : Getty
ಅಭಿಮಾನಿಗಳಿಗೆ ಕ್ಲಾರ್ಕ್ ಸಂದೇಶ
ಕ್ಲಾರ್ಕ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಿಯಮಿತ ತಪಾಸಣೆ ಮುಖ್ಯ ಎಂದಿದ್ದಾರೆ.
45
Image Credit : Instagram / michaelclarkeofficial
ಮೈಕೆಲ್ ಕ್ಲಾರ್ಕ್ 2004 ರಿಂದ 2015 ರವರೆಗೆ ಆಸ್ಟ್ರೇಲಿಯಾ ಪರ ಆಡಿದ್ದಾರೆ. 2015 ರ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದರು. 2015ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಆಸೀಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
55
Image Credit : Instagram / beyond23cricketpod
ಆಸ್ಟ್ರೇಲಿಯಾದಲ್ಲಿ ಚರ್ಮದ ಕ್ಯಾನ್ಸರ್ ಪ್ರಕರಣಗಳು ಹೆಚ್ಚು. ಮೈಕಲ್ ಕ್ಲಾರ್ಕ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

