ಬೆಂಗಳೂರು ಪಂದ್ಯಕ್ಕೆ ಮಳೆ ಭೀತಿ, ಪಂದ್ಯ ರದ್ದಾದರೆ ಆರ್‌ಸಿಬಿ ಪ್ಲೇ ಆಫ್ ಕತೆ ಏನು?
ಬೆಂಗಳೂರಿನ ಇಂದಿನ ಐಪಿಎಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಸಿಎಸ್‌ಕೆ ವಿರುದ್ಧದ ಪಂದ್ಯ ರದ್ದಾದರೆ ಆರ್‌ಸಿಬಿ ತಂಡದ ಪ್ಲೇ ಆಫ್ ಚಾನ್ಸ್ ಎಷ್ಟಿದೆ?

ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಭರವಸೆ ಮೂಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ತವರಿನಲ್ಲಿ ಅಖಾಡಕ್ಕಿಳಿಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಟ ನಡೆಸಲಿದೆ. ಸಿಎಸ್‌ಕೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಸೋಲಿನ ಅಂತರ ಕಡಿಮೆ ಮಾಡಲು, ಪ್ರತಿಷ್ಠೆಗಾಗಿ ಹೋರಾಟ ನಡೆಸಲಿದೆ. ಆದರೆ ಆರ್‌ಸಿಬಿಗೆ ಇದು ಮಹತ್ವದ ಪಂದ್ಯ ಪ್ಲೇ ಆಫ್ ಹಾದಿ ಸುಗಮಗೊಳಿಸಲು ಪಂದ್ಯ ಗೆಲ್ಲಬೇಕು.
ಬೆಂಗಳೂರಿನ ಇಂದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಜೆ ಮಳೆಯಾಗುತ್ತಿದೆ. ಇಂದಿನ ಪಂದ್ಯಕ್ಕೆ ನಿರಂತರ ಮಳೆ ಸುರಿದರೆ ಪಂದ್ಯ ರದ್ದಾಗಲಿದೆ. ಇದು ಅಂಕಪಟ್ಟಿಯ ಲೆಕ್ಕಾಚಾರ ಉಲ್ಟಾ ಮಾಡಲಿದೆ. ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿಪಡಿಸಿಕೊಳ್ಳಲು ಹೋರಾಟ ನಡೆಸಬೇಕು.
ಪಂದ್ಯ ರದ್ದಾದರೆ ಆರ್‌ಬಿಗೆ ಪ್ಲೇ ಆಫ್ ಚಾನ್ಸ್ ಎಷ್ಟಿದೆ?
ಚೆನ್ನೈ ವಿರುದ್ಧದ ಬೆಂಗಳೂರು ಪಂದ್ಯ ರದ್ದಾದರೆ ಆರ್‌ಸಿಬಿ ಪ್ಲೇ ಆಫ್ ಚಾನ್ಸ್ ಏಷ್ಟಿದೆ? ಸದ್ಯ 10 ಪಂದ್ಯಗಳಲ್ಲಿ 14 ಅಂಕ ಸಂಪಾದಿಸಿದೆ. ಇಂದಿನ ಪಂದ್ಯ ಮಳೆಯಿಂದ ರದ್ದಾದರೆ 1 ಅಂಕ ಸಿಗಲಿದೆ. ಹೀಗಾದಲ್ಲಿ ಆರ್‌ಸಿಪಿ ಅಂಕ 15ಕ್ಕೇರಲಿದೆ. ಆದರೆ ಸದ್ಯದ ಅಂಕಪಟ್ಟಿ ಹಾಗೂ ಇತರ ತಂಡಗಳ ಪ್ರದರ್ಶನ ನೋಡಿದರೆ ಆರ್‌ಸಿಬಿ ಪ್ಲೇ ಆಫ್ ಸ್ಥಾನ ಖಚಿತಗೊಳ್ಳಲು 20 ಅಂಕಗಳು ಅವಶ್ಯಕತೆ ಇದೆ.
ಸಿಎಸ್‌ಕೆ ವಿರುದ್ಧ ಪಂದ್ಯ ರದ್ದಾಗಿ, ಉಳಿದ ಮೂರು ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ 21 ಅಂಕ ಸಂಪಾದಿಸಲಿದೆ. ಇದು ಸುಲಭವಾಗಿ ಆರ್‌ಸಿಬಿಯನ್ನು ಪ್ಲೇಆಫ್ ಸ್ಥಾನಕ್ಕೇರಿಸಲಿದೆ. ಇನ್ನು ಒಂದು ಪಂದ್ಯದಲ್ಲಿ ಆರ್‌ಸಿಬಿ ಸೋತರೆ 19 ಅಂಕ ಸಂಪಾದಿಸಲಿದೆ. ಹೀಗಾದರೂ ಆರ್‌ಸಿಬಿ ಪ್ಲೇ ಆಪ್ ಹಂತಕ್ಕೇರುವ ಅವಕಾಶಗಳಿವೆ. ಆದರೆ 2 ಪಂದ್ಯದಲ್ಲಿ ಮುಗ್ಗರಿಸಿದರೆ ಆರ್‌ಸಿಬಿ ಅಂಕ 17ಕ್ಕೆ ಕುಸಿಯಲಿದೆ. ಇದು ಆರ್‌ಸಿಬಿ ಪ್ಲೇಆಫ್ ಮತ್ತಷ್ಟು ಕಠಿಣವಾಗಿಸಲಿದೆ. ಈ ವೇಳೆ ಇತರ ತಂಡಗಳ ಪ್ರದರ್ಶನ, ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಆರ್‌ಸಿಬಿ ಪ್ಲೇ ಆಫ್ ಅವಲಂಬಿತವಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಾರ ಬ್ರೇಕ್ ನೀಡಿದರೆ ಸಾಕು. ಅದೆಷ್ಟೇ ಮಳೆ ಬಂದರೂ ಸಬ್ ಏರ್ ಸಿಸ್ಟಮ್ ಇರುವ ಕಾರಣ 10 ರಿಂದ 15 ನಿಮಿಷದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಲಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಗಳು ಬೇಕಿಲ್ಲ. ಇಂದು ಬಿಡುವಿಲ್ಲದೆ ಮಳೆ ಆಗಮಿಸಿದರೆ ಮಾತ್ರ ಪಂದ್ಯ ರದ್ದಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

