ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ? ಭಾರತ ಹಾಗೂ ಶ್ರೀಲಂಕಾ ಆಯೋಜಿಸುತ್ತಿರುವ 2026ರ ಟಿ20 ವಿಶ್ವಕಪ್ ಟೂರ್ನಿ ಟಿಕೆಟ್ ಮಾರಾಟ ಆರಂಭಗೊಂಡಿದೆ.

ಟಿ20 ವಿಶ್ವಕಪ್ ಟೂರ್ನಿ ಟಿಕೆಟ್
ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಶ್ರೀಲಂಕಾ ಹಾಗೂ ಭಾರತ ಈ ಬಾರಿ ಟೂರ್ನಿ ಆಯೋಜಿಸುತ್ತಿದೆ. ವಿಶೇಷ ಅಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ಇಡೀ ಟೂರ್ನಿಯ ಟಿಕೆಟ್ ಮಾರಾಟ ಆರಂಭಗೊಂಡಿದೆ. ಅತೀ ಕಡಿಮೆ ಬೆಲೆಯಲ್ಲಿ ಟಿಕೆಟ್ ಲಭ್ಯವಿದೆ.
ಭಾರತ ಪಾಕ್ ಪಂದ್ಯದ ಟಿಕೆಟ್ ಬೆಲೆ 450 ರೂಪಾಯಿ
2026ರ ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಫೆಬ್ರವರಿ 15ರಂದು ಕೊಲೊಂಬೋದ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಶ್ರೀಲಂಕಾ ರೂಪಾಯಿಯಲ್ಲಿ ಇಂಡೋ ಪಾಕ್ ಪಂದ್ಯದ ಟಿಕೆಟ್ ಬೆಲೆ LKR1500. ಇದು ಭಾರತದ ರೂಪಾಯಿಗಳಲ್ಲಿ 450 ರೂಪಾಯಿ ಮಾತ್ರ.
ಟಿ20 ಟೂರ್ನಿ ಟಿಕೆಟ್ ಮಾರಾಟ
ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಫೈನಲ್ ಪಂದ್ಯ ಮಾರ್ಚ್ 8 ರಂದು ಭಾರತದಲ್ಲಿ ನಡೆಯಲಿದೆ. ಇಂದು ಸಂಜೆ 6.45ರಿಂದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದ ಟಿಕೆಟ್ ಮಾರಾಟ ಆರಂಭಗೊಂಡಿದೆ. 100 ರೂಪಾಯಿಯಿಂದ 1,500 ರೂಪಾಯಿ ವರೆಗೆ ಟಿಕೆಟ್ ಬೆಲೆ ಇರಲಿದೆ.
ಟಿಕೆಟ್ ಎಲ್ಲಿ ಲಭ್ಯ
ಟಿ20 ವಿಶ್ವಕಪ್ ಟೂರ್ನಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತದ ಪಂದ್ಯದ ಟಿಕೆಟ್ ಬುಕ್‌ಮೈಶೋದಲ್ಲಿ ಲಭ್ಯವಿದೆ. ಸುಲಭವಾಗಿ ಬುಕ್‌ಮೈ ಶೋ ಮೂಲಕ ಈಗಲೇ ಪಂದ್ಯದ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಜೊತೆಗೆ ಕಡಿಮೆ ಬೆಲೆಯಲ್ಲಿ ಟಿಕೆಟ್ ಲಭ್ಯವಿದೆ.
ಟಿಕೆಟ್ ಎಲ್ಲಿ ಲಭ್ಯ
ಕ್ಯೂಆರ್ ಕೋಡ್
ಟಿ20 ಪಂದ್ಯದ ಟಿಕೆಟ್ ಬುಕ್‌ಮೈ ಶೋ ಮೂಲಕ ಖರೀದಿಸಲು ಅವಕಾಶ ನೀಡಲಾಗಿದೆ. ಸೆಕ್ಯೂರಿಟಿ ಕಾರಣದಿಂದ ಎಂ ಟಿಕೆಟ್ ಕ್ಯೂಆರ್ ಕೋಡ್ ಖರೀದಿ ವೇಳೆ ಬ್ಲರ್ ಆಗಿರಲಿದೆ. ಪಂದ್ಯದ ದಿನ ಈ ಟಿಕೆಟ್‌ಗಳನ್ನು ಆ್ಯಕ್ಟಿವೇಟ್ ಮಾಡಬೇಕು.
ಕ್ಯೂಆರ್ ಕೋಡ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

