ವಿದಾಯದ ರೂಮರ್ ಬೆನ್ನಲ್ಲೇ ಏಕದಿನ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ ಕೊಹ್ಲಿ
ವಿದಾಯದ ರೂಮರ್ ಬೆನ್ನಲ್ಲೇ ಏಕದಿನ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ ಕೊಹ್ಲಿ, ಸೋಶಿಯಲ್ ಮೀಡಿಯಾ ಮೂಲಕ ವಿರಾಟ್ ಕೊಹ್ಲಿ ಸಂದೇಶ ನೀಡಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಸೂಚ್ಯವಾಗಿ ಹೇಳಿದ್ದೇನು?

ವಿರಾಟ್ ಕೊಹ್ಲಿ ಟ್ವೀಟ್
ವಿರಾಟ್ ಕೊಹ್ಲಿ ಟ್ವೀಟ್
ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನದಿಂದಲೂ ನಿವೃತ್ತಿಯಾಗುತ್ತಿದ್ದಾರ? ಈ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದೆ. ಇತ್ತೀಚೆಗೆ ಏಕದಿನ ತಂಡ ಪ್ರಕಟ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರಿಗೂ ಸ್ಥಾನ ನೀಡಲಾಗಿತ್ತು. ಆದರೂ ಈ ಇಬ್ಬರು ದಿಗ್ಗಜರು ಸೈಲೆಂಟ್ ಆಗಿ ಶಾಕ್ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಇದರ ನಡುವೆ ವಿರಾಟ್ ಕೊಹ್ಲಿ ಎಕ್ಸ್ ಮೂಲಕ ಏಕದಿನ ಭವಿಷ್ಯದ ಕುರಿತು ಸುಳಿವು ನೀಡಿದ್ದಾರೆ.
ಕೊಹ್ಲಿ ಮಹತ್ವದ ಸಂದೇಶ
ಕೊಹ್ಲಿ ಮಹತ್ವದ ಸಂದೇಶ
ವಿರಾಟ್ ಕೊಹ್ಲಿ ಎಕ್ಸ್ ಮೂಲಕ ಮಹತ್ವದ ಟ್ವೀಟ್ ಮಾಡಿದ್ದಾರೆ. ನೀವು ಯಾವತ್ತು ಸೋತು ಹೋಗುತ್ತೀರಿ ಎಂದರೆ, ಯಾವಾಗ ನೀವು ನಿಮ್ಮಿಂದ ಸಾಧ್ಯವಿಲ್ಲ ಎಂದು ಕೈಬಿಟ್ಟಾಗ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಕೊಹ್ಲಿ ಕೆಲವು ಸಂದೇಶ ನೀಡಿದ್ದಾರೆ. ಪ್ರಮುಖವಾಗಿ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುವವ ಸೂಚನೆಯನ್ನು ನೀಡಿದ್ದಾರೆ.
ಕೊಹ್ಲಿ ಟ್ವೀಟ್ ಅರ್ಥ
ಕೊಹ್ಲಿ ಟ್ವೀಟ್ ಅರ್ಥ
ಕೊಹ್ಲಿ ಮಾರ್ಮಿಕವಾಗಿ ತಾವು ಸದ್ಯ ಹೋರಾಟ ಮುಂದುವರಿಸುವುದಾಗಿ ಸೂಚಿಸಿದ್ದಾರೆ. ಈ ಸಮಯದಲ್ಲಿ ಹೋರಾಟ ಅರ್ಧಕ್ಕೆ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಮುಂಬರುವ ವಿಶ್ವಕಪ್ ಟೂರ್ನಿವರೆಗೂ ಆಡುವ ಸೂಚನೆ ನೀಡಿದ್ದಾರೆ. ಇದರೊಂದಿಗೆ ಕೊಹ್ಲಿ ಅಭಿಮಾನಿಗಳ ಆತಂಕ ದೂರವಾಗಿದೆ.
ಆಯ್ಕೆ ಸಮಿತಿ ಮುಖ್ಯಸ್ಥ ಹೇಳಿದ್ದೇನು?
ಆಯ್ಕೆ ಸಮಿತಿ ಮುಖ್ಯಸ್ಥ ಹೇಳಿದ್ದೇನು?
ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಟಿ20 ಮಾದರಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಪೈಕಿ ಟೆಸ್ಟ್ ಮಾದರಿಗೆ ನೀಡಿದ ವಿದಾಯ ಹಲವರಿಗೆ ಆಘಾತ ನೀಡಿತ್ತು. ತಂಡದ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳುತ್ತದ್ದಂತೆ ವಿದಾಯ ಘೋಷಿಸಿದ್ದರು. ಇತ್ತೀಚೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೊಹ್ಲಿಯನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಿ, ಊಹಾಪೋಹಳಿಗೆ ತೆರೆ ಎಳೆದಿದ್ದರು.
2007ರ ಏಕದಿನ ವಿಶ್ವಕಪ್ ಆಧರಿಸಿ ತಂಡದ ಆಯ್ಕೆ
2007ರ ಏಕದಿನ ವಿಶ್ವಕಪ್ ಆಧರಿಸಿ ತಂಡದ ಆಯ್ಕೆ
ಇತ್ತೀಚಿಗೆ ಟೀಂ ಇಂಡಿಯಾ ಏಕದಿನ ತಂಡ ಆಯ್ಕೆ ವೇಳೆ ಮುಖ್ಯಸ್ಥ ಅಜಿತ್ ಅಗರ್ಕರ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿ ದೃಷ್ಟಿಯಲ್ಲಿಟ್ಟುಕೊಂಡು ತಂಡದ ಆಯ್ಕೆ ಮಾಡಿದ್ದೇವೆ ಎಂದು ಅಗರ್ಕರ್ ಹೇಳಿದ್ದಾರೆ. ಏಕದಿನ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಶುಭಮನ್ ಗಿಲ್‌ಗೆ ನಾಯಕತ್ವ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

