One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, ಉದ್ಯಮ ಜಗತ್ತಿನಲ್ಲಿ ಭಾರಿ ಹೂಡಿಕೆ ಮಾಡಿರುವ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ಮೆಗಾ ಡೀಲ್ ಕುದುರಿಸಿದ್ದಾರೆ. ವಿಶೇಷ ಅಂದರೆ ಬ್ರ್ಯಾಂಡ್ ಮಾರಾಟ ಮಾಡಿ ಬಳಿಕ ಅದೇ ಬ್ರ್ಯಾಂಡ್ ಮೇಲೆ 40 ಕೋಟಿ ಹೂಡಿಕೆ ಪ್ಲಾನ್.

ಒನ್8 ಬ್ರ್ಯಾಂಡ್ ಮಾರಾಟ
ವಿರಾಟ್ ಕೊಹ್ಲಿ ಅದೆಂತಾ ಕ್ರಿಕೆಟಿಗ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ರನ್ ಮಶಿನ್, ದಾಖಲೆಗಳ ಸರದಾರನಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಅಷ್ಟೇ ಯಶಸ್ವಿ ಉದ್ಯಮಿ ಎಂದರೆ ತಪ್ಪಲ್ಲ. ಕೊಹ್ಲಿ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತನ್ನದೇ ಬ್ರ್ಯಾಂಡ್‌ನಿಂದ ಹಿಡಿದು, ಪ್ರಮೋಶನ್, ಎಂಡೋರ್ಸ್‌ಮೆಂಟ್ ಸೇರಿದಂತೆ ಹಲವು ರೀತಿಯಲ್ಲಿ ಕೊಹ್ಲಿ ಆದಾಯಗಳಿಸುತ್ತಿದ್ದಾರೆ. ಇದೀಗ ತಮ್ಮ ಒನ್8 ಬ್ರ್ಯಾಂಡ್ ಮಾರಾಟ ಮಾಡುತ್ತಿದ್ದಾರೆ.
ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿಗೆ ಮಾರಾಟ
ಒನ್8 ವಿರಾಟ್ ಕೊಹ್ಲಿಯ ಸ್ಪೋರ್ಟ್ ಬ್ರ್ಯಾಂಡ್ ಉತ್ಪನ್ನ. ಇದೀಗ ಈ ಒನ್8 ಸ್ಪೋರ್ಟ್ಸ್ ಬ್ರ್ಯಾಂಡ್‌ನ್ನು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಅಗಿಲಿಟಾಸ್ ಕಂಪನಿಗೆ ಮಾರಾಟ ಮಾಡುತ್ತಿದ್ದಾರೆ. ಮಾತುಕತೆಗಳು ಅಂತಿಮಹಂತ ತಲುಪಿದ್ದು, ಶೀಘ್ರದಲ್ಲೇ ಮಾರಾಟ ಒಪ್ಪಂದವಾಗಲಿದೆ. ಅತೀದೊಡ್ಡ ಕಂಪನಿಯಾಗಿ ಬೆಳೆದಿರುವ ಅಗಿಲಿಟಾಸ್ ತೆಗ್ಗೆಗೆ ಒನ್8 ಸೇರಿಕೊಳ್ಳಲಿದೆ.
ಮಾರಾಟ ಮಾಡಿ ಅದೇ ಕಂಪನಿಯಲ್ಲಿ 40 ಕೋಟಿ ಹೂಡಿಕೆ
ವಿರಾಟ್ ಕೊಹ್ಲಿಯ ಒನ್8 ಬ್ರ್ಯಾಂಡ್‌ನ್ನು ಅಗಿಲಿಟಾಸ್ ಕಂಪನಿಗೆ ಮಾರಾಟ ಮಾಡಲಾಗುತ್ತಿದೆ. ಬಳಿಕ ಇದೇ ಅಗಿಲಿಟಾಸ್ ಕಂಪನಿಯಲ್ಲಿ ಸಣ್ಣ ಪಾಲು ಪಡೆಯುತ್ತಿದ್ದಾರೆ. ಇದಕ್ಕಾಗಿ 40 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಒನ್8 ಬ್ರ್ಯಾಂಡ್ ಎಷ್ಟು ಕೋಟಿ ರೂಪಾಯಿಗೆ ಮಾರಾಟವಾಗುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿಲ್ಲ
ಮೋಶಿಕೋ ಖರೀದಿಸಿದ್ದ ಅಗಿಲಿಟಾಸ್
ಅಗಿಲಿಟಾಸ್ ಇತ್ತೀಚೆಗೆ ಮೊಶಿಕೋ ಶೋಸ್ ಉತ್ಪಾದಕ ಕಂಪನಿಯನ್ನೇ ಖರೀದಿ ಮಾಡಿತ್ತು. ವಿಶೇಷ ಅಂದರೆ ಈ ಮೋಶಿಕೋ ಕಂಪನಿ ಪುಮಾ, ಅಡಿಡಾಸ್, ರಿಬಾಕ್, ಕ್ರಾಸ್, ಡೆಕಾಥ್ಲಾನ್, ಯುಸ್ ಪೋಲೋ, ಸ್ಕೆಚಸ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಶೂ ಉತ್ಪಾದನೆ ಮಾಡುತ್ತದೆ. ಇದೀಗ ಒನ್8 ಕೂಡ ಅಗಿಲಿಟಾಸ್ ತೆಕ್ಕೆಗೆ ಸೇರುತ್ತಿದೆ.
ಪುಮಾದ ಭಾಗವಾಗಿದ್ದ ಒನ್8
ವಿರಾಟ್ ಕೊಹ್ಲಿಯ ಒನ್8 ಸ್ಪೋರ್ಟ್ ಬ್ರ್ಯಾಂಡ್ ಪ್ರತಿಷ್ಠಿತ ಪುಮಾದ ಭಾಗವಾಗಿತ್ತು. 8 ವರ್ಷಗಳ ಒಪ್ಪಂದ ಇದಾಗಿತ್ತು. 2017ರಲ್ಲಿ ವಿರಾಟ್ ಕೊಹ್ಲಿಯನ್ನು ಪುಮಾ ಭಾರತದ ರಾಯಭಾರಿಯಾಗಿ ಆಯ್ಕೆ ಮಾಡಿತ್ತು. 8 ವರ್ಷಗಳ ಪುಮಾ ಒಪ್ಪಂದಕ್ಕೆ ವಿರಾಟ್ ಕೊಹ್ಲಿ ಬರೋಬ್ಬರ 110 ಕೋಟಿ ರೂಪಾಯಿ ಸಂಭಾವನೆ ನೀಡಿತ್ತು. ಇದೀಗ 2025ರ ಅಂತ್ಯಕ್ಕೆ ಪುಮಾ ಒಪ್ಪಂದ ಅಂತ್ಯಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಒನ್8 ಮಾರಾಟಕ್ಕೆ ಮುಂದಾಗಿದ್ದಾರೆ.
ಪುಮಾದ ಭಾಗವಾಗಿದ್ದ ಒನ್8
300 ಕೋಟಿ ರೂಪಾಯಿ ಡೀಲ್ ತಿರಸ್ಕರಿಸಿದ್ದ ಕೊಹ್ಲಿ
ವಿರಾಟ್ ಕೊಹ್ಲಿ ಪುಮಾ 8 ವರ್ಷದ ಒಪ್ಪಂದ ಅಂತ್ಯಗೊಳ್ಳುತ್ತಿದ್ದಂತೆ ತೀವ್ರ ಕುತೂಹಲ ಮನೆ ಮಾಡಿತ್ತು. ಇದರ ನಡುವೆ ಪುಮಾ 300 ಕೋಟಿ ರೂಪಾಯಿ ಆಫರ್ ನೀಡಿತ್ತು. ಆದರೆ ವಿರಾಟ್ ಕೊಹ್ಲಿ ಪುಮಾದ 300 ಕೋಟಿ ರೂಪಾಯಿ ಆಫರ್ ತಿರಸ್ಕರಿಸಿದ್ದರು. ವಿರಾಟ್ ಕೊಹ್ಲಿ ಹೂಡಿಕೆಯತ್ತ ಹೆಚ್ಚು ಗಮನಹರಿಸಿದ್ದಾರೆ.
300 ಕೋಟಿ ರೂಪಾಯಿ ಡೀಲ್ ತಿರಸ್ಕರಿಸಿದ್ದ ಕೊಹ್ಲಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

