ಕೊಹ್ಲಿ ಹೆಸರಿನಲ್ಲಿರೋ ಈ 5 ರೆಕಾರ್ಡ್ಸ್ ಮುರಿಯೋಕೆ ಯಾರಿಂದಲೂ ಸಾಧ್ಯವಿಲ್ಲ!
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಕಿಂಗ್ ಕೊಹ್ಲಿ ಸಾಧಿಸಿದ ಟಾಪ್ 5 ಮುರಿಯಲಾಗದ ದಾಖಲೆಗಳನ್ನು ತಿಳಿದುಕೊಳ್ಳೋಣ.

ವಿರಾಟ್ ಕೊಹ್ಲಿ (ಫೈಲ್ ಫೋಟೋ)
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕೊಹ್ಲಿ ಸಾಧಿಸಿದ ಟಾಪ್ 5 ಮುರಿಯಲಾಗದ ದಾಖಲೆಗಳನ್ನು ತಿಳಿದುಕೊಳ್ಳೋಣ.
ವಿರಾಟ್ ಕೊಹ್ಲಿ (ಫೈಲ್ ಫೋಟೋ)
ಟೆಸ್ಟ್ ನಾಯಕನಾಗಿ ಅತಿ ಹೆಚ್ಚು ಡಬಲ್ ಸೆಂಚುರಿ ಹೊಡೆದ ಏಕೈಕ ಆಟಗಾರ ಕೊಹ್ಲಿ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ವಿರಾಟ್ ಬರೋಬ್ಬರಿ 7 ಡಬಲ್ ಸೆಂಚುರಿ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ (ಫೈಲ್ ಫೋಟೋ)
ಟೆಸ್ಟ್ ನಾಯಕನಾಗಿ ಭಾರತಕ್ಕೆ ಅತಿ ಹೆಚ್ಚು ಗೆಲುವು ತಂದುಕೊಟ್ಟವರು ಕೊಹ್ಲಿ. 68 ಪಂದ್ಯಗಳಲ್ಲಿ 40 ಗೆಲುವು ದಾಖಲಿಸಿದೆ. ಎರಡನೇ ಸ್ಥಾನದಲ್ಲಿ ಧೋನಿ(27) ಹಾಗೂ ಮೂರನೇ ಸ್ಥಾನದಲ್ಲಿ ಗಂಗೂಲಿ(21) ಇದ್ದಾರೆ.
ವಿರಾಟ್ ಕೊಹ್ಲಿ (ಫೈಲ್ ಫೋಟೋ)
ಟೆಸ್ಟ್ ನಾಯಕನಾಗಿ ಭಾರತ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿರುವವರು ವಿರಾಟ್ ಕೊಹ್ಲಿ. ಟೆಸ್ಟ್‌ನಲ್ಲಿ ಕೊಹ್ಲಿ 68 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ವಿರಾಟ್ ಕೊಹ್ಲಿ (ಫೈಲ್ ಫೋಟೋ)
ವಿದೇಶಗಳಲ್ಲಿ ಅದ್ಭುತ ನಾಯಕತ್ವ ದಾಖಲೆ ಹೊಂದಿರುವ ಕೊಹ್ಲಿ. ಇಂಗ್ಲೆಂಡ್, ಆಸ್ಟ್ರೇಲಿಯಾ, ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವು.
ವಿರಾಟ್ ಕೊಹ್ಲಿ (ಫೈಲ್ ಫೋಟೋ)
ಭಾರತ ಟೆಸ್ಟ್ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ನಾಯಕನಾಗಿ ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 5864 ರನ್ ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

