ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?
ಬೆಂಗಳೂರು: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿದು, ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ರೋ-ಕೋ ಜೋಡಿಯ ಮುಂದಿನ ಪಂದ್ಯ ಯಾವಾಗ ನೋಡೋಣ ಬನ್ನಿ.

ವಿಜಯ್ ಹಜಾರೆ ಟ್ರೋಫಿಗೆ ಕೊಹ್ಲಿ-ರೋಹಿತ್ ಭರ್ಜರಿ ಕಮ್‌ಬ್ಯಾಕ್
2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಕೊಹ್ಲಿ 15 ವರ್ಷಗಳ ಬಳಿಕ ಈ ಟೂರ್ನಿ ಆಡಿದರೆ, ರೋಹಿತ್ ಶರ್ಮಾ 8 ವರ್ಷಗಳ ಬಳಿಕ ಮೊದಲ ಸಲ ವಿಜಯ್ ಹಜಾರೆ ಪಂದ್ಯವನ್ನಾಡಿದರು.
ಸ್ಮರಣೀಯವಾಗಿ ಶತಕ ಸಿಡಿಸಿದ ರೋ-ಕೋ ಜೋಡಿ
ಇನ್ನು ಈ ಇಬ್ಬರು ಆಟಗಾರರು ತಮ್ಮ ಕಮ್‌ಬ್ಯಾಕ್ ರಣಜಿ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು.
ಮೊದಲ ಪಂದ್ಯದಲ್ಲೇ ಶತಕ ಚಚ್ಚಿದ ಕೊಹ್ಲಿ
ವಿರಾಟ್ ಕೊಹ್ಲಿ, ಬೆಂಗಳೂರಿನ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೈದಾನದಲ್ಲಿ ಆಂಧ್ರ ಪ್ರದೇಶ ವಿರುದ್ದ ಪಂದ್ಯದಲ್ಲಿ ಡೆಲ್ಲಿ ಪರ ಕಣಕ್ಕಿಳಿದು ಕೇವಲ 101 ಎಸೆತಗಳನ್ನು ಎದುರಿಸಿ 131 ರನ್ ಚಚ್ಚಿದರು. ಆಂಧ್ರ ಪ್ರದೇಶ ಎದುರು ಡೆಲ್ಲಿ 4 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿತು.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ದಾಖಲೆ
ಆಂಧ್ರ ಪ್ರದೇಶ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಖಾತೆ ತೆರೆಯುತ್ತಿದ್ದಂತೆಯೇ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 16 ಸಾವಿರ ರನ್ ಬಾರಿಸಿದ ಭಾರತದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್ ಈ ಸಾಧನೆ ಮಾಡಿದ್ದಾರೆ.
ಶತಕ ಚಚ್ಚಿದ ಹಿಟ್‌ಮ್ಯಾನ್
ಇನ್ನು ಮುಂಬೈ ಪರ ಕಣಕ್ಕಿಳಿದ ರೋಹಿತ್ ಶರ್ಮಾ, ಸಿಕ್ಕಿಂ ಎದುರು ಕೇವಲ 94 ಎಸೆತಗಳಲ್ಲಿ 18 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ 155 ರನ್ ಸಿಡಿಸಿದರು. ಪರಿಣಾಮ ಸಿಕ್ಕಿಂ ಎದುರು ಮುಂಬೈ 8 ವಿಕೆಟ್ ಸುಲಭ ಜಯ ಸಾಧಿಸಿತು.
ಕೊಹ್ಲಿ ಮುಂದಿನ ಪಂದ್ಯ ಯಾವಾಗ?
ವಿರಾಟ್ ಕೊಹ್ಲಿ ಬಹುತೇಕ ಡಿಸೆಂಬರ್ 26ರಂದು ನಡೆಯಲಿರುವ ಗುಜರಾತ್ ಎದುರಿನ ಪಂದ್ಯದಲ್ಲೂ ಡೆಲ್ಲಿ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ.
ರೋಹಿತ್ ಮುಂದಿನ ಪಂದ್ಯ ಯಾವಾಗ?
ಇನ್ನು ರೋಹಿತ್ ಶರ್ಮಾ ಮುಂಬೈ ಪರ ಡಿಸೆಂಬರ್ 26ರಂದು ಉತ್ತರಖಂಡ್ ಎದುರಿನ ಮ್ಯಾಚ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿರುವ ಈ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ
ಮುಂದಿನ ಮ್ಯಾಚ್‌ನಲ್ಲೂ ಈ ಎರಡು ಮ್ಯಾಚ್ ಲೈವ್ ಸ್ಟ್ರೀಮ್ ಇಲ್ಲ
ದುರಾದೃಷ್ಟವಶಾತ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮುಂದಿನ ಪಂದ್ಯವು ಯಾವುದೇ ಟಿವಿ ಅಥವಾ ಓಟಿಟಿ ಫ್ಲಾಟ್‌ಫಾರಂನಲ್ಲಿ ವೀಕ್ಷಿಸಲು ಲೈವ್ ಸ್ಟ್ರೀಮ್ ಇರುವುದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

