MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಉದ್ಯಮಿ ಮಗಳನ್ನು ಪ್ರೀತಿಸಿದ ಗೌತಮ್ ಗಂಭೀರ್; ಪತ್ನಿ ನತಾಶಾ ಬಗ್ಗೆ ನಿಮಗೆ ಗೊತ್ತಿಲ್ಲದ ಸೀಕ್ರೆಟ್ಸ್

ಉದ್ಯಮಿ ಮಗಳನ್ನು ಪ್ರೀತಿಸಿದ ಗೌತಮ್ ಗಂಭೀರ್; ಪತ್ನಿ ನತಾಶಾ ಬಗ್ಗೆ ನಿಮಗೆ ಗೊತ್ತಿಲ್ಲದ ಸೀಕ್ರೆಟ್ಸ್

ಟಿ20 ವಿಶ್ವಕಪ್ ವೇಳೆ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ದೆಹಲಿಯ ತಮ್ಮ ನಿವಾಸದಲ್ಲಿ ತಂಡಕ್ಕೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ, ಗಂಭೀರ್ ಜೊತೆ ಅವರ ಪತ್ನಿ ನತಾಶಾ ಕೂಡ ತಂಡಕ್ಕೆ ಆತ್ಮೀಯ ಸ್ವಾಗತ ಕೋರಿದರು.

2 Min read
Author : Naveen Kodase
Published : Feb 10 2026, 01:59 PM IST
Share this Photo Gallery
  • FB
  • TW
  • Linkdin
  • Whatsapp
16
ಗೌತಮ್ ಗಂಭೀರ್ ಪತ್ನಿ ನತಾಶಾ ಜೈನ್
Image Credit : our own

ಗೌತಮ್ ಗಂಭೀರ್ ಪತ್ನಿ ನತಾಶಾ ಜೈನ್

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ಅಂದ್ರೆ, ಅದು ವಿಶ್ವ ಕ್ರಿಕೆಟ್‌ನ ಅತ್ಯಂತ ಗ್ಲಾಮರಸ್ ಪಾತ್ರಗಳಲ್ಲಿ ಒಂದು. ಭಾರತದ ಮಾಜಿ ಓಪನರ್ ಮತ್ತು ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಸದ್ಯ ಟೀಂ ಇಂಡಿಯಾದ ಹೆಡ್ ಕೋಚ್ ಆಗಿದ್ದಾರೆ. ಗಂಭೀರ್ ಜಾಗತಿಕವಾಗಿ ಪ್ರಸಿದ್ಧ ಕ್ರಿಕೆಟಿಗರಾಗಿದ್ದರೂ, ಅವರ ಪತ್ನಿ ನತಾಶಾ ಜೈನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಗಂಭೀರ್ ಅವರ ವೃತ್ತಿಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿರುವ ನತಾಶಾ ಜೈನ್ ಬಗ್ಗೆ ವಿವರವಾಗಿ ತಿಳಿಯೋಣ.

26
ನತಾಶಾ ಜೈನ್ ಅಲಿಯಾಸ್ ನತಾಶಾ ಗಂಭೀರ್
Image Credit : our own

ನತಾಶಾ ಜೈನ್ ಅಲಿಯಾಸ್ ನತಾಶಾ ಗಂಭೀರ್

ನತಾಶಾ ಜೈನ್ ಅಲಿಯಾಸ್ ನತಾಶಾ ಗಂಭೀರ್, ಪಂಜಾಬ್‌ನ ಅಮೃತಸರದ ಒಂದು ಉದ್ಯಮಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ನತಾಶಾ ಜೈನ್ ಜುಲೈ 26, 1984 ರಂದು ಜನಿಸಿದರು. ಅವರ ತಂದೆ ರವೀಂದ್ರ ಜೈನ್ ಒಬ್ಬ ಪ್ರಸಿದ್ಧ ಉದ್ಯಮಿ. ನತಾಶಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (BBA) ಪದವಿ ಪಡೆದಿದ್ದಾರೆ. 2007 ರಿಂದ ಗೌತಮ್ ಗಂಭೀರ್ ಮತ್ತು ನತಾಶಾ ನಡುವೆ ಪ್ರೇಮಾಂಕುರವಾಗಿತ್ತು ಎಂದು ಹಳೆಯ ವರದಿಗಳು ಹೇಳುತ್ತವೆ. 2011 ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ನಂತರ, ಇಬ್ಬರೂ ಖಾಸಗಿ ಸಮಾರಂಭದಲ್ಲಿ ಮದುವೆಯಾದರು.

Related Articles

Related image1
ಟಿ20 ವಿಶ್ವಕಪ್: ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!
Related image2
ವಿಕೆಟ್ ಕೀಪಿಂಗ್‌ಗೆ ರೆಡಿಯಾಗುತ್ತಿದ್ದ ಸಂಜು ಸ್ಯಾಮ್ಸನ್‌ಗೆ ಶಾಕ್ ಕೊಟ್ಟ ಗೌತಮ್ ಗಂಭೀರ್! ವಿಡಿಯೋ ವೈರಲ್
36
ಗಂಭೀರ್ ಅವರ ನೆರಳಾಗಿರುವ ನತಾಶಾ
Image Credit : our own

ಗಂಭೀರ್ ಅವರ ನೆರಳಾಗಿರುವ ನತಾಶಾ

ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಗೌತಮ್ ಗಂಭೀರ್ ಕ್ರಿಕೆಟಿಗರಾಗಿದ್ದಾಗ ಮತ್ತು ಈಗ ತರಬೇತುದಾರರಾದಾಗಲೂ ಅವರಿಗೆ ಅತಿ ಹೆಚ್ಚು ಬೆಂಬಲ ನೀಡಿದ್ದು ನತಾಶಾ. ಗಂಭೀರ್-ನತಾಶಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅನೇಕ ಭಾರತೀಯ ಕ್ರಿಕೆಟಿಗರ ಪತ್ನಿಯರು ದೊಡ್ಡ ಸೆಲೆಬ್ರಿಟಿಗಳಾಗಿ ಮೆರೆಯುತ್ತಿರುವಾಗ, ನತಾಶಾ ಜೈನ್ ಯಾವಾಗಲೂ ತಮ್ಮ ಖಾಸಗಿತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ.
46
ಭಾರತ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ ಗಂಭೀರ್ ಫ್ಯಾಮಿಲಿ
Image Credit : our own

ಭಾರತ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ ಗಂಭೀರ್ ಫ್ಯಾಮಿಲಿ

ಟಿ20 ವಿಶ್ವಕಪ್ 2026ರ ವೇಳೆ ಟೀಮ್ ಇಂಡಿಯಾ ದೆಹಲಿಗೆ ಬಂದಾಗ, ಗೌತಮ್ ಗಂಭೀರ್ ಭಾರತೀಯ ಆಟಗಾರರಿಗೆ ಔತಣಕೂಟ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ನತಾಶಾ ಗಂಭೀರ್ ಅವರ ಆತಿಥ್ಯ ಮತ್ತು ನಾಯಕತ್ವದ ಗುಣಗಳು ಎಲ್ಲರ ಗಮನ ಸೆಳೆದವು. ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಭಾರತೀಯ ಆಟಗಾರರು, ಮೋರ್ನೆ ಮಾರ್ಕೆಲ್ ಸೇರಿದಂತೆ ಸಹಾಯಕ ಸಿಬ್ಬಂದಿ ಮತ್ತು ಇತರ ಮ್ಯಾನೇಜ್‌ಮೆಂಟ್ ಸದಸ್ಯರನ್ನು ನತಾಶಾ ಆತ್ಮೀಯವಾಗಿ ಮನೆಗೆ ಸ್ವಾಗತಿಸಿದರು. ಇಡೀ ಟೀಂ ಇಂಡಿಯಾವನ್ನು ಪರಿಚಯಿಸಿಕೊಂಡು, ತಮ್ಮ ಮಕ್ಕಳನ್ನೂ ಪರಿಚಯಿಸಿದರು.

56
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನತಾಶಾ
Image Credit : our own

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನತಾಶಾ

ನತಾಶಾ ಗಂಭೀರ್ ಅವರಿಗೆ ಡೈಮಂಡ್ ಡಿಸೈನಿಂಗ್ ಮತ್ತು ಅಡುಗೆಯಲ್ಲಿ ಹೆಚ್ಚಿನ ಪರಿಣತಿ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಎರಡು ದಶಕಗಳಿಂದ ಗೌತಮ್ ಗಂಭೀರ್ ಅವರ ಅತಿದೊಡ್ಡ ಶಕ್ತಿ ನತಾಶಾ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನತಾಶಾ ಗಂಭೀರ್, ತಮ್ಮ ಕುಟುಂಬ ಮತ್ತು ಮಕ್ಕಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
66
ಟಿ20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ
Image Credit : Getty

ಟಿ20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ

ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ ಟೀಂ ಇಂಡಿಯಾ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್‌ಎ ತಂಡವನ್ನು ಮಣಿಸಿ ಭರ್ಜರಿಯಾಗಿ ಶುಭಾರಂಭ ಮಾಡಿದೆ. ಇದೀಗ ಫೆಬ್ರವರಿ 12ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಗಂಭೀರ್ ಮನೆಗೆ ಭೇಟಿ ಆತಿಥ್ಯ ಸ್ವೀಕರಿಸಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಗೌತಮ್ ಗಂಭೀರ್
ಟೀಮ್ ಇಂಡಿಯಾ
ಐಸಿಸಿ ಟಿ20 ವಿಶ್ವಕಪ್

Latest Videos
Recommended Stories
Recommended image1
ಟಿ20 ವಿಶ್ವಕಪ್: ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!
Recommended image2
ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಶಾಕ್‌ ಕೊಟ್ಟ BCCI; ಕ್ರಿಕೆಟ್ ದಿಗ್ಗಜರಿಗೆ ಇಂಥ ಗತಿ ಬಂತಾ?
Recommended image3
ಬಹಿಷ್ಕಾರದಿಂದ ಯೂಟರ್ನ್‌: ಇಲ್ಲಿ ದುಡ್ಡೇ ದೊಡ್ಡಪ್ಪ! ICC ಮುಂದೆ ಅಂಗಲಾಚಿದ ಪಾಕ್
Related Stories
Recommended image1
ಟಿ20 ವಿಶ್ವಕಪ್: ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!
Recommended image2
ವಿಕೆಟ್ ಕೀಪಿಂಗ್‌ಗೆ ರೆಡಿಯಾಗುತ್ತಿದ್ದ ಸಂಜು ಸ್ಯಾಮ್ಸನ್‌ಗೆ ಶಾಕ್ ಕೊಟ್ಟ ಗೌತಮ್ ಗಂಭೀರ್! ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved