- Home
- Entertainment
- Amruthadhare Serial Update: ಕಿಡ್ನಾಪ್ ಆದ ಮಗು ಸಿಕ್ತೇ ಬಿಡ್ತಾ? ಭೂಮಿಕಾಗೆ 3 ಮಕ್ಕಳು ಹುಟ್ಟಿದ್ರಾ? ಇದೇನಿದು ಟ್ವಿಸ್ಟ್?
Amruthadhare Serial Update: ಕಿಡ್ನಾಪ್ ಆದ ಮಗು ಸಿಕ್ತೇ ಬಿಡ್ತಾ? ಭೂಮಿಕಾಗೆ 3 ಮಕ್ಕಳು ಹುಟ್ಟಿದ್ರಾ? ಇದೇನಿದು ಟ್ವಿಸ್ಟ್?
ಅಮೃತಧಾರೆಯಲ್ಲಿ ಕಿಡ್ನ್ಯಾಪ್ ಆದ ಮಗು ಸಿಕ್ತಾ ಅಥ್ವಾ ಭೂಮಿಕಾಗೆ ಮೂರು ಮಕ್ಕಳು ಹುಟ್ಟಿದ್ವಾ? ಇದೇನಿದು ನೆಟ್ಟಿಗರ ಗೊಂದಲ? ಇಲ್ಲಿದೆ ಡಿಟೇಲ್ಸ್...

ಅಮೃತಧಾರೆಯ ಮಗುವಿನ ಮೇಲೆ ನೆಟ್ಟಿಗರ ಕಣ್ಣು
ಅಮೃತಧಾರೆಯಲ್ಲಿ ಸದ್ಯ ಸುಧಾಳ ಮದುವೆ ಸುಖಾಂತ್ಯ ಕಂಡಿದೆ. ಸುಧಾಳ ಬಾಳಲ್ಲಿ ಹೊಸ ಯುಗ ಆರಂಭವಾಗಿದೆ. ಪತಿಯ ಎಂಟ್ರಿಯಿಂದ ಬಿರುಗಾಳಿ ಎದ್ದಿದ್ದ ಸುಧಾ ಬಾಳಲ್ಲಿ ಈಗ ತಂಗಾಳಿ ಬೀಸಿದೆ. ಈಗೇನಿದ್ದರೂ ಸದ್ಯ ಭೂಮಿಕಾಳ ಇನ್ನೊಂದು ಮಗು ಏನಾಯಿತು ಎನ್ನುವುದು ಅಷ್ಟೇ. ಸದ್ಯ ಅವಳಿ ಮಕ್ಕಳಲ್ಲಿ ಒಂದು ಮಗು ಕಳೆದುಕೊಂಡಿರುವ ವಿಷಯ ಭೂಮಿಕಾಗೆ ಗೊತ್ತಿಲ್ಲ. ಇದನ್ನು ಆಕೆಗೆ ಹೇಗೆ ಹೇಳುವುದು ಎಂದು ತಿಳಿಯದೇ ಗೌತಮ್ ನೋವಿನಲ್ಲಿ ಇದ್ದಾನೆ. ಇರುವ ಒಂದು ಮಗುವನ್ನು ಶಕುಂತಲಾ ಇನ್ನೇನು ಮಾಡಿಬಿಟ್ಟಾಳೋ ಎನ್ನುವ ಭಯದಲ್ಲಿ ವೀಕ್ಷಕರು ಇದ್ದಾರೆ.
ಅಮೃತಧಾರೆಯ ಮಗುವಿನ ಮೇಲೆ ನೆಟ್ಟಿಗರ ಕಣ್ಣು
ಆದರೆ ಇಂದು ಬಿಡುಗಡೆ ಮಾಡಿರುವ ಪ್ರೊಮೋ ನೋಡಿದ ವೀಕ್ಷಕರ ಗಮನ ಮಗುವಿನ ಮೇಲೆ ನೆಟ್ಟಿದೆ. ಏಕೆಂದರೆ ಮಗು ಬದಲಾಗಿ ಹೋಗಿದೆ. ನಿನ್ನೆಯವರೆಗೆ ಇದ್ದ ಮಗು ಈಗಿಲ್ಲ. ಆಗಿನ ಮಗುವಿಗೆ ಕಿವಿಚುಚ್ಚಿದ್ರು, ಆದರೆ ಈ ಮಗುವಿಗೆ ಕಿವಿಚುಚ್ಚಿಲ್ಲ. ಅಷ್ಟೇ ಅಲ್ಲದೇ ಮಗು ಕೂಡ ಬದಲಾಗಿದೆ.ಹಾಗಿದ್ರೆ ಭೂಮಿಕಾಗೆ ಮತ್ತೊಂದು ಮಗು ಸಿಕ್ಕಿಬಿಡ್ತಾ ಎಂದು ಕೆಲವರು ಕಾಲೆಳೆಯುತ್ತಿದ್ದರೆ, ಮತ್ತೆ ಕೆಲವರು ಇದು ಭೂಮಿಕಾಳ 3ನೇ ಮಗು. ಒಂದು ಆಟವಾಡಲು ಹೋಗಿದೆ. ಇನ್ನೊಂದು ಕಿಡ್ನ್ಯಾಪ್ ಆಗಿದೆ ಎಂದು ತಮಾಷೆ ಮಾಡುತ್ತಿದ್ದಾರೆ.
ಅಮೃತಧಾರೆಯ ಮಗುವಿನ ಮೇಲೆ ನೆಟ್ಟಿಗರ ಕಣ್ಣು
ಅಷ್ಟಕ್ಕೂ ಶೂಟಿಂಗ್ಗೆ ಮಕ್ಕಳನ್ನು ಕರೆದುಕೊಂಡು ಬರುವುದು ಎಂದರೆ ಸುಲಭದ ಮಾತಲ್ಲ. ಅಮ್ಮಂದಿರು ಪ್ರತಿನಿತ್ಯವೂ ತಮ್ಮ ಮಗುವನ್ನು ಶೂಟಿಂಗ್ಗೆ ಕಳುಹಿಸಲು ಇಷ್ಟಪಡುವುದಿಲ್ಲ. ಮಗು ಟಿವಿಯ ಪರದೆಯ ಮೇಲೆ ಕಾಣಿಸಿಕೊಳ್ಳುವ ಹಂಬಲವಿದ್ದರೂ ದಿನನಿತ್ಯವೂ ನಡೆಯುವ ಶೂಟಿಂಗ್ಗೆ ಅದನ್ನು ಬಿಡುವುದು ಅದೇನು ಸುಲಭದ ಕೆಲಸವೂ ಅಲ್ಲ. ಆದ್ದರಿಂದ ಬೇರೆ ಬೇರೆ ಮಗುವನ್ನು ತಂದು ಶೂಟಿಂಗ್ ಮಾಡುವುದು ಅನಿವಾರ್ಯವೇ. ಇದೇ ಕಾರಣಕ್ಕೆ ಅಮೃತಧಾರೆಯಲ್ಲಿಯೂ ಬೇರೆ ಬೇರೆ ಮಗುವನ್ನು ತಂದು ಶೂಟಿಂಗ್ ಮಾಡಲಾಗುತ್ತಿದೆ.
ಅಮೃತಧಾರೆಯ ಮಗುವಿನ ಮೇಲೆ ನೆಟ್ಟಿಗರ ಕಣ್ಣು
ಇದೀಗ ಸೀರಿಯಲ್ ವಿಷಯಕ್ಕೆ ಬರುವುದಾದರೆ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೌತಮ್ ಹೇಳಿದ ಮಾತು ತುಂಬಾ ಅದ್ಭುತವಾಗಿದೆ. ಮಗುವಿಗೆ ಡೈಪರ್ ಚೇಂಜ್ ಮಾಡಲು ಗೌತಮ್ ಮುಂದಾದಾಗ, ಭೂಮಿಕಾ ಮಗುವಿಗೆ ಅದೇ ರೂಢಿಯಾಗುತ್ತದೆ,ನಾನು ಮಾಡುತ್ತೇನೆ ಎನ್ನುತ್ತಾಳೆ.
ಮಕ್ಕಳನ್ನು ಬೆಳೆಸುವ ಬಗೆ ತಿಳಿಸಿದ ಗೌತಮ್
ಆಗ ಗೌತಮ್ ಮಕ್ಕಳನ್ನು ತುಂಬಾ ಬಿಗಿಯಾಗಿ ಇರಿಸಬಾರದು. ಅವು ಚಿಟ್ಟೆ ಇದ್ದ ಹಾಗೆ. ಮುಷ್ಠಿಯಲ್ಲಿ ಹಿಡಿದುಕೊಂಡು ಇಡಲೂ ಬಾರದು, ಬಿಟ್ಟರೆ ಹಾರಿ ಹೋಗಿ ಕೈಗೆ ಸಿಗಲ್ಲ. ಆದ್ದರಿಂದ ಹೇಗೆ ಬೇಕೊ ಹಾಗೆ ಇಟ್ಟುಕೊಳ್ಳಬೇಕು. ತುಂಬಾ ಸಲಿಗೆಯನ್ನೂ ಕೊಡಬಾರದು, ತುಂಬಾ ಸ್ಟ್ರಿಕ್ಟ್ ಕೂಡ ಮಾಡಬಾರದು ಎನ್ನುತ್ತಾರೆ. ಇದಕ್ಕೆ ಹಲವರು ಸಮ್ಮತಿ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

