ಬಂದರೋ ಬಂದರೋ ಬಾವ ಬಂದರೋ.. ಗಪ್‌ಚುಪ್ ಆಗಿದ್ರೂ ಅನುಶ್ರೀ ಮದುವೆ ಸುದ್ದಿಯೀಗ ಬಿರುಗಾಳಿ!
ಅನುಶ್ರೀಗೆ ಈಗಿನ ಯಂಗ್ ಜನರೇಶನ್ ಹುಡುಗ್ರು 'ಅಕ್ಕ' ಅಂತ ಕರೆಯೋದ್ರಿಂದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ರೋಶನ್ ನೋಡಿ ಅವರೆಲ್ಲ 'ಬಂದರೋ ಬಂದರೋ ಬಾವ ಬಂದರೋ' ಅಂತಿದಾರೆ!

ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಮದುವೆ ಆಗೋದು ಪಕ್ಕಾ ಫಿಕ್ಸ್ ಆಗಿದೆ. ಮುಂಬರುವ ಆಗಸ್ಟ್ 28ಕ್ಕೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅನುಶ್ರೀ ಮದುವೆ ನಡೆಯಲಿದೆ ಎನ್ನಲಾಗಿದೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಈ ಸಂಗತಿಯನ್ನು ಇಲ್ಲಿಯವರೆಗೂ ನಟಿ-ನಿರೂಪಕಿ ಅನುಶ್ರೀ ಅವರು ಕನ್ಫರ್ಮ್ ಮಾಡದಿದ್ದರೂ 'ನೋ, ಈ ಸುದ್ದಿ ಸುಳ್ಳು' ಅಂತ ಎಲ್ಲಿಯೂ ಹೇಳಿಲ್ಲ. ಹೀಗಾಗಿ ಅನುಶ್ರೀ ಮದುವೆ ಆಗಲಿರುವ ಸುದ್ದಿ ಹೌದು ಅಂತಲೇ ಎಲ್ಲರೂ ಭಾವಿಸಿದ್ದಾರೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಕೊಡಗು ಮೂಲದ ರೋಶನ್ ಜೊತೆ ಅನುಶ್ರೀ ಮದುವೆ ನಡೆಯಲಿದೆಯಂತೆ. ಈಗಾಗಲೇ ಎರಡೂ ಕುಟುಂಬಗಳ ಹಿರಿಯರು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅನುಶ್ರೀ ಅವರಾಗಲೀ, ಕುಟುಂಬಸ್ಥರಾಗಲೀ ಯಾವುದೇ ನಿಖರ ಮಾಹಿತಿ ನೀಡಿಲ್ಲ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಇದು ಎರಡೂ ಕುಟುಂಬಗಳ ಹಿರಿಯರು ನಿರ್ಣಯಿಸಿರುವ ಅರೇಂಜ್ಡ್ ಮ್ಯಾರೇಜ್ ಅಂತೆ. ಅನುಶ್ರೀ ಮನೆಯ ಗೃಹ ಪ್ರವೇಶದಲ್ಲಿ ರೋಶನ್ ಭಾಗಿಯಾಗಿದ್ದರು ಎನ್ನಲಾಗಿದೆ. ದೇವರಿಗೆ ಆರತಿ ಮಾಡುವಾಗ ಅನುಶ್ರೀ ಪಕ್ಕದಲ್ಲಿರೋ ಹುಡುಗನೇ ರೋಶನ್ ಎನ್ನಲಾಗಿದೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಅನುಶ್ರೀ ಮದುವೆಯಾಗುವ ರೋಶನ್ ಸೋಶಿಯಲ್ ಮೀಡಿಯಾ ಅಕೌಂಟ್ ಕೂಡ ಪ್ರೈವೇಟ್ ಅಲ್ಲಿದೆ. ಹೀಗಾಗಿ ಅವರು ಯಾರಿರಬಹುದು ಎಂದು ಅನೇಕರಿಗೆ ಪ್ರಶ್ನೆ ಕಾಡಿತ್ತು. ಆದರೆ ಈಗ ಅನುಶ್ರೀ, ರೋಶನ್ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗ್ತಿದೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಪುನೀತ್ ರಾಜಕುಮಾರ್ ಅವರ ʼಗಂಧದಗುಡಿʼ ಡಾಕ್ಯುಮೆಂಟರಿಯ ಇವೆಂಟ್‌ನಲ್ಲಿ ಅನುಶ್ರೀ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್ ಪರಿಚಯ ಆಗಿತ್ತು.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಇವರಿಬ್ಬರು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು. ರೋಶನ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಲಾಗುತ್ತಿದೆ. ಕಳೆದು ಎರಡು ವರ್ಷಗಳಿಂದ ಈ ಜೋಡಿ ಲವ್ ಮಾಡ್ತಿದೆಯಂತೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಎರಡು ಕುಟುಂಬಗಳು ಈ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ರೆಡಿಯಾಗಿವೆ. ಅನುಶ್ರೀ ಅವರ ತಮ್ಮ ಹೊಸ ಹೋಟೆಲ್ ಆರಂಭಿಸಿದ್ದರು. ಆ ಪೂಜೆಯಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ವೈರಲ್ ಆಗ್ತಿದೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಈ ಸುದ್ದಿಗೆ ಅನುಶ್ರೀ ಯಾವುದೇ ಕ್ಲಾರಿಟಿ ಕೊಟ್ಟಿಲ್ಲವಾದರೂ ಅಲ್ಲಗಳೆದಿಲ್ಲ. ಹೀಗಾಗಿ ಸುದ್ದಿ ಸತ್ಯವೇ ಎಂದೇ ಎಲ್ಲಾ ಕಡೆ ಪ್ರಚಾರ ಆಗುತ್ತಿದೆ. ಇತ್ತೀಚೆಗೆ ಅನುಶ್ರೀ ಅವರು ಕೆಲ ರಿಯಾಲಿಟಿ ಶೋ, ಇವೆಂಟ್‌ಗಳಲ್ಲಿ 'ಈ ವರ್ಷ ನಾನು ಪಕ್ಕಾ ಮದುವೆ ಆಗ್ತೀನಿ, ಈ ವರ್ಷವೇ ನನ್ನ ಮದುವೆ ಆಗುತ್ತದೆ' ಎಂದು ಕಾನ್ಫಿಡೆಂಟ್ ಆಗಿ ಅನುಶ್ರೀ ಹೇಳಿದ್ದರು.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಈಗ ಮದುವೆ ಫಿಕ್ಸ್ ಆಗಿರೋ ಬಗ್ಗೆ ಅನುಶ್ರೀ ಅಧಿಕೃತ ಹೇಳಿಕೆ ನೀಡಬೇಕಿದೆ. ಅನುಶ್ರೀ ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ತಂದೆ ಮನೆ ಬಿಟ್ಟು ಹೋಗಿದ್ದರು. ಆ ನಂತರ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿ ಬೆಳೆಸಿದ್ದರು.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಅನುಶ್ರೀ ಅವರು ಮಂಗಳೂರಿನವರು. ಇಂದು ಕನ್ನಡದ ನಂ 1 ನಿರೂಪಕಿ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿ ಕಲಾವಿದೆ ಆಗಿಯೂ ಗುರುತಿಸಿಕೊಂಡಿದ್ದಾರೆ.
ಆಂಕರ್ ಅನುಶ್ರೀ ಹಾಗೂ ವರ ರೋಶನ್ ಫೋಟೋಗಳು
ಅನುಶ್ರೀಗೆ ಈಗಿನ ಯಂಗ್ ಜನರೇಶನ್ ಹುಡುಗ್ರು 'ಅಕ್ಕ' ಅಂತ ಕರೆಯೋದ್ರಿಂದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ರೋಶನ್ ನೋಡಿ ಅವರೆಲ್ಲ 'ಬಂದರೋ ಬಂದರೋ ಬಾವ ಬಂದರೋ' ಅಂತಿದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

