- Home
- Entertainment
- ಸ್ಕೇಟಿಂಗ್ ಶೂಸ್ನಲ್ಲೇ ಕ್ಯಾಟ್ವಾಕ್ ಮಾಡಿದ Bhagyalakshmi ಭಾಗ್ಯ! ಆದಿ ಬಂದ ಖುಷಿಗಾ ಕೇಳ್ತಿರೋ ಫ್ಯಾನ್ಸ್
ಸ್ಕೇಟಿಂಗ್ ಶೂಸ್ನಲ್ಲೇ ಕ್ಯಾಟ್ವಾಕ್ ಮಾಡಿದ Bhagyalakshmi ಭಾಗ್ಯ! ಆದಿ ಬಂದ ಖುಷಿಗಾ ಕೇಳ್ತಿರೋ ಫ್ಯಾನ್ಸ್
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಆದಿ ಭಾಗ್ಯಳ ಮನೆಯಲ್ಲಿದ್ದು, ತಾಂಡವ್‌ಗೆ ಹೊಟ್ಟೆ ಉರಿ ಉಂಟುಮಾಡುತ್ತಿದ್ದಾನೆ. ಭಾಗ್ಯ ಮತ್ತು ಆದಿಯ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದು, ಸುಷ್ಮಾ ರಾವ್ ರೀಲ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕುತೂಹಲ ಘಟ್ಟದಲ್ಲಿ ಭಾಗ್ಯಲಕ್ಷ್ಮಿ
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಅತ್ತ ತಾಂಡವ್ ಛಾನ್ಸ್ ಸಿಕ್ಕಾಗಲೆಲ್ಲಾ ಭಾಗ್ಯಳ ಮೇಲೆ ಸವಾರಿ ಮಾಡುತ್ತ ಬಂದಿದ್ದರೆ, ಅದೇ ಇನ್ನೊಂದೆಡೆ ಆದಿ ಭಾಗ್ಯಳನ್ನು ತಾಂಡವ್ ಎದುರೇ ಹೊಗಳುತ್ತಿದ್ದು, ಆತನಿಗೆ ಹೊಟ್ಟೆ ಉರಿಸುತ್ತಿದ್ದಾನೆ.
ಭಾಗ್ಯಳನ್ನು ಹೊಗಳ್ತಿರೋ ತಾಂಡವ್
ಆದಿಗೆ ಇವನೇ ಭಾಗ್ಯಳ ಗಂಡ ಎನ್ನುವುದು ತಿಳಿದಿಲ್ಲ. ಆದ ಕಾರಣದಿಂದ, ಭಾಗ್ಯಳನ್ನು ತಾಂಡವ್ ಎದುರೇ ಹೊಗಳುತ್ತಿರುತ್ತಾನೆ. ಆದ್ದರಿಂದ ಭಾಗ್ಯ ಎನ್ನುವುದು ತಾಂಡವ್‌ಗೆ ಬಿಸಿ ತುಪ್ಪದ ರೀತಿ ಆಗಿದೆ. ಉಗುಳಲೂ ಆಗದೇ, ನುಂಗಲೂ ಆಗದೇ ಸುಮ್ಮನೇ ಇರಬೇಕಿದೆ. ಆದಿಗೆ ಸತ್ಯವನ್ನೂ ಆತ ಹೇಳುವಂತಿಲ್ಲ.
ಭಾಗ್ಯ ಮನೆಯಲ್ಲಿ ಆದಿ
ಇದೀಗ ಮಿಡ್ಲ್ಲೈಫ್ ಜೀವನ ನಡೆಸುತ್ತೇನೆ ಎಂದು ಆದಿ ಭಾಗ್ಯಳ ಮನೆಯಲ್ಲಿಯೇ ಇದ್ದಾನೆ. ಇದನ್ನು ನೋಡಿ ತಾಂಡವ್ ಇನ್ನೂ ಹೊಟ್ಟೆ ಉರಿಸಿಕೊಳ್ತಿದ್ದಾನೆ. ಆದರೆ ಆದಿಗೆ ಮಾತ್ರ ಇದು ತಿಳಿಯದೇ ಎಲ್ಲವನ್ನೂ ತಾಂಡವ್ ಎದುರೇ ಹೇಳುತ್ತಿದ್ದಾನೆ.
ಆದಿ ಜೊತೆ ಮದ್ವೆಯಾಗತ್ತಾ?
ಅದೇ ಇನ್ನೊಂದೆಡೆ, ಭಾಗ್ಯ ಮತ್ತು ಆದಿಯ ಮದುವೆಗೆ ಕ್ಷಣ ಗಣನೆಗೆ ಶುರುವಾಗಿದೆ. ಭಾಗ್ಯಳನ್ನು ಮದುವೆ ಮಾಡಿಸಲು ಕುಸುಮಾ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಆಕೆಗೆ ಆದಿಯ ಜೊತೆ ಮದುವೆ ಮಾಡಿಸುವುದು ಎಂದು ಸದ್ಯ ತಲೆಗೆ ಹೊಳೆದಿಲ್ಲ. ಆದರೆ ವೀಕ್ಷಕರು ಇದಾಗಲೇ ಭಾಗ್ಯ ಮತ್ತು ಆದಿ ಜೋಡಿ ಫಿಕ್ಸ್ ಮಾಡಿಯಾಗಿದೆ. ಇವರಿಬ್ಬರೂ ಒಂದಾಗಿ ತಾಂಡವ್ನ ಹೊಟ್ಟೆ ಉರಿಸಬೇಕು ಎನ್ನುವುದು ಎಲ್ಲರ ಆಸೆ.
ಬಿಡುವಿನ ವೇಳೆ ರೀಲ್ಸ್
ಇವೆಲ್ಲವುಗಳ ನಡುವೆಯೇ, ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ಸ್ಕೇಟಿಂಗ್ ಮಾಡಿದ್ದಾರೆ. ಸ್ಕೇಟಿಂಗ್ ಹಾಕಿಕೊಂಡು ಕ್ಯಾಟ್ವಾಕ್ ಮಾಡಿದ್ದಾರೆ. ಅದನ್ನು ನೋಡಿ ಫ್ಯಾನ್ಸ್ ನಟಿಯ ಕಾಲೆಳೆದಿದ್ದಾರೆ. ಆದಿ ಬಂದಿರೋ ಖುಷಿಗೆ ಹೀಗೆ ರೀಲ್ಸ್ ಮಾಡ್ತಿದ್ದೀರಾ ಎಂದು ತಮಾಷೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪದವರು...
ಇನ್ನು ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.
ಆರ್ಯಭಟ ಪ್ರಶಸ್ತಿ ವಿಜೇತೆ
2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

