Brahmagantu Serial: ಸೌಂದರ್ಯಳ ಖೇಲ್ ಖತಮ್? ಎದೆಗೆ ಪಿಸ್ತೂಲ್ನಿಂದ ಗುರಿಯಿಟ್ಟ ದೀಪಾ!
ಬ್ರಹ್ಮಗಂಟು ಸೀರಿಯಲ್ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸೌಂದರ್ಯಳ ಎದೆಗೆ ಪಿಸ್ತೂಲ್ನಿಂದ ಗುರಿ ಇಟ್ಟಿದ್ದಾಳೆ ದೀಪಾ. ಮುಂದೇನು?

ಬ್ರಹ್ಮಗಂಟು ಸೀರಿಯಲ್ ರೋಚಕ ತಿರುವು
ಬ್ರಹ್ಮಗಂಟು ಸೀರಿಯಲ್ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಅರ್ಚನಾ ಮತ್ತು ರಾಹುಲ್ ಒಂದಾಗಬಾರದು ಎನ್ನುವ ಕಾರಣಕ್ಕೆ ರಾಹುಲ್ನನ್ನು ರೌಡಿಗಳನ್ನು ಕಳುಹಿಸಿ ಕೊ*ಲೆಗೆ ಪ್ರಯತ್ನಿಸಿದ್ದಳು ಸೌಂದರ್ಯ. ಆದರೆ ಆತ ಬದುಕಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಹುಲ್ ಮತ್ತು ಅರ್ಚನಾರನ್ನು ಒಂದು ಮಾಡಬೇಕು ಎನ್ನುವ ಕಾರಣಕ್ಕೆ ಚಿರುನೇ ಆತನನ್ನು ಮನೆಗೆ ಕರೆದಿದ್ದ. ಇದು ತಿಳಿಯುತ್ತಲೇ ಸೌಂದರ್ಯ ಹೀಗೆ ಮಾಡಿದ್ದಳು.
ರಾಹುಲ್ಗೆ ಅಪಘಾತ
ಚಿರುವಿನ ಮನವಿ ಮೇರೆಗೆ ಬೈಕ್ನಲ್ಲಿ ರಾಹುಲ್ ಮನೆಗೆ ಬರುತ್ತಿರುವಾಗ ಹಿಂದಿನಿಂದ ರೌಡಿಗಳು ಗಾಡಿಯಲ್ಲಿ ಆತನಿಗೆ ಆ್ಯಕ್ಸಿಡೆಂಟ್ ಮಾಡಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿ ಇದ್ದು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ಕೇಳಿ ಸೌಂದರ್ಯಳ ತಲೆ ಕೆಟ್ಟು ಹೋಗಿದೆ. ಆದ್ದರಿಂದ ರೌಡಿಗಳನ್ನು ಕರೆಸಿ ಅವರನ್ನು ಕೊಲ್ಲಲು ಮುಂದಾಗಿದ್ದಳು.
ದೀಪಾಳ ಕೈಯಲ್ಲಿ ಪಿಸ್ತೂಲ್
ಆಗ ದೀಪಾ ಅದನ್ನು ತಡೆದಿದ್ದಾಳೆ. ಪಿಸ್ತೂಲ್ನಿಂದ ರೌಡಿಗಳನ್ನು ಕೊಲ್ಲಲು ಹೋದಾಗ, ಆ ಪಿಸ್ತೂಲ್ ಅನ್ನು ತಾನೇ ತೆಗೆದುಕೊಂಡ ದೀಪಾ, ಸೌಂದರ್ಯದ ಎದೆಗೆ ಗುರಿಯಿಟ್ಟಿದ್ದಾಳೆ. ಆಕೆ ಕೊಲ್ಲುವುದು ಅಸಾಧ್ಯ ಎಂದಿರೋ ಸೌಂದರ್ಯ ನೀನೇನು ನನ್ನನ್ನು ಕೊಲ್ತಿಯಾ ಎಂದು ಕೇಳಿದ್ದಾಳೆ. ಅದಕ್ಕೆ ದೀಪಾ ಹೌದು ಎಂದಾಗ ಆ ಕ್ಷಣದಲ್ಲಿ ಸೌಂದರ್ಯ ಎದೆ ಝಲ್ ಎಂದಿದೆ.
ಸೀರಿಯಲ್ ಮುಂದೇನಾಗುತ್ತೆ
ಮುಂದೇನಾಗುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ದೀಪಾಳ ಕೈಯಲ್ಲಿ ಪಿಸ್ತೂಲ್ ನೋಡಿ ಮನೆಯವರು ಅವಳ ಮೇಲೆ ಸಂದೇಹ ಪಟ್ಟುಕೊಳ್ತಾರಾ ಎನ್ನುವುದು ಕೂಡ ಸದ್ಯ ವೀಕ್ಷಕರಿಗೆ ಆತಂಕ ತರುತ್ತಿದೆ. ಆದರೂ ದೀಪಾಳ ಈ ಇನ್ನೊಂದು ಮುಖ ನೋಡಿ ಖುಷಿಯೂ ಆಗುತ್ತಿದೆ.
ಅರ್ಚನಾ ಮದುವೆಯ ಬಗ್ಗೆ ಚಿಂತೆ
ಅತ್ತ ಅರ್ಚನಾ ಮತ್ತು ಬೇರೊಬ್ಬ ಹುಡುಗನ ಎಂಗೇಜ್ಮೆಂಟ್ ಆಗಿದೆ. ಅರ್ಚನಾ ಮನಸ್ಸಿಲ್ಲದೇ ಇದನ್ನು ಒಪ್ಪಿಕೊಂಡಿದ್ದಾಳೆ. ರಾಹುಲ್ ವಿಷಯ ಅವಳಿಗೆ ಗೊತ್ತಾಗತ್ತಾ? ಈ ಮದುವೆ ಆಗ್ತಾಳಾ? ಸೌಂದರ್ಯಳ ಬಣ್ಣ ಬಯಲಾಗುತ್ತಾ ಎನ್ನುವುದು ಕಾದು ನೋಡಬೇಕಿದೆ.
ನೆಟ್ಟಿಗರ ಆತಂಕ
ಆದರೆ ಇಷ್ಟು ಬೇಗ ಇವೆಲ್ಲಾ ತಿಳಿದು ಸೀರಿಯಲ್ ಮುಗಿಯುವ ಹಾಗೆ ಕಾಣಿಸುವುದಿಲ್ಲ. ಈ ಕ್ಷಣದಲ್ಲಿ ದೀಪಾಳೇ ಆರೋಪಿಯಾದರೂ ಆಗಬಹುದು. ತನ್ನನ್ನು ಕೊಲ್ಲಲು ದೀಪಾ ಮುಂದಾಗಿದ್ದಾಳೆ ಎಂದು ಸೌಂದರ್ಯ ರಂಪಾಟ ಮಾಡುವ ಎಲ್ಲಾ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸದ್ಯ ಪಿಸ್ತೂಲ್ ದೀಪಾಳ ಕೈಯಲ್ಲಿ ಇರುವುದು ವೀಕ್ಷಕರಿಗೆ ಆತಂಕ ತರಿಸುತ್ತಿದೆ.
ನೆಟ್ಟಿಗರ ಆತಂಕ
ಬೇಗ ಅದನ್ನು ಸೌಂದರ್ಯಳ ಕೈಗೆ ಕೊಡು ಎನ್ನುತ್ತಿದ್ದಾರೆ ನೆಟ್ಟಿಗರು. ಅತ್ತ ರೌಡಿಗಳಾದರೂ ಇದ್ದರೆ, ಅವರಾದರೂ ವಿಷಯ ಹೇಳುತ್ತಿದ್ದರು. ಆದರೆ ಅವರು ಕೂಡ ಓಡಿ ಹೋದದ್ದು ಇನ್ನಷ್ಟು ಆತಂಕ ತರಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

