MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮಗಳು ಸುಹಾನಾ ಹೊಟ್ಟೆ ಕಾಣದಂತೆ ಕಾಪಾಡಿದ ಶಾರುಖ್ ಖಾನ್​​: ಎಂಥ ಸಂಸ್ಕಾರಿ ಅಪ್ಪ ಎಂದು ಹಾಡಿ ಹೊಗಳಿದ ಫ್ಯಾನ್ಸ್​

ಮಗಳು ಸುಹಾನಾ ಹೊಟ್ಟೆ ಕಾಣದಂತೆ ಕಾಪಾಡಿದ ಶಾರುಖ್ ಖಾನ್​​: ಎಂಥ ಸಂಸ್ಕಾರಿ ಅಪ್ಪ ಎಂದು ಹಾಡಿ ಹೊಗಳಿದ ಫ್ಯಾನ್ಸ್​

ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಗಸ್ತ್ಯ ನಂದಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಮಗಳ ಹೊಟ್ಟೆ ಕಾಣದಂತೆ ಶಾರುಖ್ ಬಟ್ಟೆ ಸರಿಪಡಿಸಿದ ವಿಡಿಯೋ ವೈರಲ್ ಆಗಿದ್ದು, ಇದು ಅಭಿಮಾನಿಗಳ ಮೆಚ್ಚುಗೆ ಹಾಗೂ ಟ್ರೋಲಿಗರ ಕುಹಕಕ್ಕೆ ಕಾರಣವಾಗಿದೆ.

2 Min read
Author : Suchethana D
Published : Apr 19 2026, 07:33 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಟಾರ್​ ಕಿಡ್​ ಸುಹಾನಾ
Image Credit : Social Media

ಸ್ಟಾರ್​ ಕಿಡ್​ ಸುಹಾನಾ

ನಟ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ಗೆ ಈಗ 25 ವರ್ಷ ವಯಸ್ಸು. ಸ್ಟಾರ್​ ಕಿಡ್​ ಆಗಿರುವ ಕಾರಣ ಸಹಜವಾಗಿ ಈಕೆಯ ಮೇಲೆ ಸಾರ್ವಜನಿಕರ ಕಣ್ಣು ನೆಟ್ಟಿರುತ್ತದೆ. ಇದಾಗಲೇ ಸಿನಿಮಾಗಿಂತಲೂ ಹೆಚ್ಚಾಗಿ ಸುಹಾನಾ ಡೇಟಿಂಗ್​, ರೊಮಾನ್ಸ್​ ವಿಷ್ಯದಲ್ಲಿಯೇ ಭಾರಿ ಸದ್ದು ಮಾಡುತ್ತಿದ್ದಾರೆ.

26
ಅಮಿತಾಭ್​ ಮೊಮ್ಮಗನ ಜೊತೆ...
Image Credit : Getty

ಅಮಿತಾಭ್​ ಮೊಮ್ಮಗನ ಜೊತೆ...

ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ಮತ್ತು ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಸುದ್ದಿ ಹಳೆಯದ್ದಾಗಿದೆ. ಅಗಸ್ತ್ಯ ಕೂಡ ಸುಹಾನಾ ವಯಸ್ಸಿನವರೇ. ಹಾಗೆ ನೋಡಿದರೆ ಸುಹಾನಾ ಅಗಸ್ತ್ಯನಿಂದ ಆರು ತಿಂಗಳು ದೊಡ್ಡವರು. ಸುಹಾನಾ 2000ನೇ ಸಾಲಿನ ಮೇ ತಿಂಗಳಿನಲ್ಲಿ ಹುಟ್ಟಿದ್ದರೆ, ಅಗಸ್ತ್ಯ ಹುಟ್ಟಿರುವುದು ಅದೇ ಸಾಲಿನ ನವೆಂಬರ್​ನಲ್ಲಿ.

Related Articles

Related image1
'ದಂತದ ಬೊಂಬೆ' ಶಾರುಖ್​ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...
Related image2
Shah Rukh Khan ಪುತ್ರಿ ಸುಹಾನಾಗೆ ಕಾನೂನು ಸಂಕಷ್ಟ! ಅಕ್ರಮ ಕೇಸ್​ನಲ್ಲಿ ಸಿಲುಕಿದ ಸ್ಟಾರ್​ ಕಿಡ್​​?
36
ಮಗಳ ಮರ್ಯಾದೆ ಕಾಪಾಡಿದ ಕಿಂಗ್​ ಖಾನ್​
Image Credit : Getty

ಮಗಳ ಮರ್ಯಾದೆ ಕಾಪಾಡಿದ ಕಿಂಗ್​ ಖಾನ್​

ಆದರೆ ಇದೀಗ ವೈರಲ್​ ವಿಡಿಯೋ ಒಂದು ಶಾರುಖ್​ ಖಾನ್​ ಅಭಿಮಾನಿಗಳನ್ನು ಹೃದಯ ತುಂಬುವಂತೆ ಮಾಡಿದೆ. ಇದರಲ್ಲಿ ಶಾರುಖ್ ಖಾನ್​ ಪುತ್ರ ಮತ್ತು ಮಗಳು ಸುಹಾನಾ ಜೊತೆ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಪರೂಪಕ್ಕೆ ಸುಹಾನಾ ಖಾನ್​ ಮೈಮುಚ್ಚುವಂಥ ಬಟ್ಟೆ ಹಾಕಿಕೊಂಡಿದ್ದಾರೆ. ಆದರೆ ಅವರ ಹೊಟ್ಟೆ ಅರ್ಥಾತ್​ ಹೊಕ್ಕಳು ಕಾಣಿಸುತ್ತಿತ್ತು. ಆಗ ಕ್ಯಾಮೆರಾ ಕಣ್ಣು ತಮ್ಮ ಮೇಲೆ ಇದೆ ಎನ್ನುವ ಕಾರಣಕ್ಕೆ ಮಗಳ ಮಾನವನ್ನು ಮುಚ್ಚಲು ಅಪ್ಪ ಶಾರುಖ್​ ಹೊಟ್ಟೆಯ ಮೇಲೆ ಇದ್ದ ಬಟ್ಟೆಯನ್ನು ಸ್ವಲ್ಪ ಕೆಳಕ್ಕೆ ಸಿಕ್ಕಿಸಿ ಮಗಳ ಮಾನ ಕಾಪಾಡಿದ್ದಾರೆ.

46
ಶಾರುಖ್​ ಫ್ಯಾನ್ಸ್ ಜೈಜೈಕಾರ
Image Credit : Getty

ಶಾರುಖ್​ ಫ್ಯಾನ್ಸ್ ಜೈಜೈಕಾರ

ಇದು ಶಾರುಖ್​ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಇದ್ದರೆ ಇಂಥ ಅಪ್ಪ ಇರಬೇಕು, ಅದಕ್ಕಾಗಿಯೇ ಇವರನ್ನು ಕಿಂಗ್​ ಖಾನ್​ ಎನ್ನುವುದು, ಉಳಿದ ಸೆಲೆಬ್ರಿಟಿಗಳು ಇವರನ್ನು ನೋಡಿ ಕಲಿಯಬೇಕು, ಎಲ್ಲ ಅಪ್ಪಂದಿರಿಗೂ ಇವರು ಮಾದರಿಯಾಗಬೇಕು ಎಂದೆಲ್ಲಾ ಕಮೆಂಟ್ಸ್​​ಗಳಿಂದ ತುಂಬಿಸಿದ್ದಾರೆ.

56
ಟ್ರೋಲಿಗರೂ ಸುಮ್ಮನಿಲ್ಲ
Image Credit : Instagram

ಟ್ರೋಲಿಗರೂ ಸುಮ್ಮನಿಲ್ಲ

ಆದರೆ ಟ್ರೋಲಿಗರು ಬಿಡ್ತಾರೆಯೆ, ಅವರು ಕೂಡ ಕಮೆಂಟ್ಸ್​ನಲ್ಲಿ ಹಿಂದೆ ಬಿದ್ದಿಲ್ಲ. ಸುಹಾನಾ ಖಾನ್​ ಅವರ ಬಿಕಿನಿ ಫೋಟೋಗಳನ್ನೆಲ್ಲಾ ಹೆಕ್ಕಿ ಹೆಕ್ಕಿ ಕಮೆಂಟ್​ ಬಾಕ್ಸ್​ ತುಂಬಿಸಿದ್ದಾರೆ. ಹೌದಪ್ಪಾ ಹೌದು ಇಂಥ ಅಪ್ಪ ಇರಬೇಕು, ಖಾನ್​ ಸಾಹೇಬ್ರು ಅಂದ್ರೆ ಸುಮ್ಮನೇನಾ, ಮಗಳ ಮರ್ಯಾದೆ ಕಾಪಾಡುವಲ್ಲಿ ನಂಬರ್​ 1 ಎಂದು ಕುಹಕ ಆಡಿದ್ದಾರೆ.

66
ದೇಹದ ಭಾಗಗಳಿಗೆ ಕತ್ತರಿ
Image Credit : instagram

ದೇಹದ ಭಾಗಗಳಿಗೆ ಕತ್ತರಿ

ಅಂದಹಾಗೆ, ಸುಹಾನಾ ಖಾನ್​ ದೇಹಕ್ಕೆ ಸಿಕ್ಕಾಪಟ್ಟೆ ಕತ್ತರಿ ಬಿದ್ದಿವೆ. ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ತ್ವಚೆಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೈಬಣ್ಣ ಅಂದಗೊಳಿಸಿಕೊಳ್ಳಲು ಕೆಲವೊಂದು ಚಿಕಿತ್ಸೆ ಮೊರೆ ಹೋಗಿದ್ದಾರೆ. ಬೋಟೊಕ್ಸ್​ ಮತ್ತು ಫಿಲ್ಲರ್ಸ್​ ಇಂಜೆಕ್ಷನ್​ ಚುಚ್ಚಿಸಿಕೊಂಡಿದ್ದಾರೆ. ಬಳಕುವ ಬಳ್ಳಿಯಂತಿರುವ ಸುಹಾನಾ ದೇಹದ ಮೇಲೂ ಹಲವರ ಕಣ್ಣು ಹೋಗಿದ್ದು ಇದೆ. ಆ ಭಾಗಕ್ಕೂ ಈಕೆ ಚಿಕಿತ್ಸೆ ಮಾಡಿಸಿಕೊಂಡಿರಲು ಸಾಕು ಎಂದು ಹೇಳುವುದು ಉಂಟು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಿನಲ್ಲಿ ಈ ದಂತದ ಬೊಂಬೆಯ ಹಿಂದಿರುವುದು ಪ್ಲಾಸ್ಟಿಕ್​ ಸರ್ಜರಿ ಕಮಾಲ್​ ಎನ್ನುವುದು ಅಂತೂ ದಿಟ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶಾರುಖ್ ಖಾನ್
ಮನರಂಜನಾ ಸುದ್ದಿ
ಬಾಲಿವುಡ್
ಫ್ಯಾಷನ್
ಮಹಿಳೆಯರು
ಸಂಬಂಧಗಳು

Latest Videos
Recommended Stories
Recommended image1
Amruthadhaare Serial:‌ ಚೆನ್ನಾಗಿ ತಿರುಗಿಸಿ ಕೊಟ್ಟ ಕರ್ಮ; ಎಲ್ಲಿ ಬಿದ್ನೋ ಅಲ್ಲೇ ಎದ್ದ ಗೌತಮ್‌ ದಿವಾನ್!
Recommended image2
ಫೇಸ್ ಯೋಗಾ ವಿಡಿಯೋಗೆ ಟ್ರೋಲ್ ಆದ ಪಾರ್ವತಿ ಕೃಷ್ಣ ಯಾರು? ಇಲ್ಲಿದೆ ಉತ್ತರ
Recommended image3
ಯಶ್‌ TO ದೀಪಿಕಾ ಪಡುಕೋಣೆ; 2 ವರ್ಷದೊಳಗೆ 'ಬ್ಯಾಕ್ ಟು ಬ್ಯಾಕ್' ಮಗು; ಸೆಲೆಬ್ರಿಟಿಗಳ ಅವಸರದ ಹಿಂದಿದೆ ಬಲವಾದ ಕಾರಣ
Related Stories
Recommended image1
'ದಂತದ ಬೊಂಬೆ' ಶಾರುಖ್​ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...
Recommended image2
Shah Rukh Khan ಪುತ್ರಿ ಸುಹಾನಾಗೆ ಕಾನೂನು ಸಂಕಷ್ಟ! ಅಕ್ರಮ ಕೇಸ್​ನಲ್ಲಿ ಸಿಲುಕಿದ ಸ್ಟಾರ್​ ಕಿಡ್​​?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved