BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು
Bigg Boss Kannada Season 12: ಶಶಿ ಎಂಬುವವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು ನೀಡಿದ್ದು, ಮಹಿಳಾ ಆಯೋಗದ ಮೂಲಕ ಶೋ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಘಟನೆ ಸೀಕ್ರೆಟ್ ಟಾಸ್ಕ್‌ನ ಭಾಗವಾಗಿ ನಡೆದಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು
ಕನ್ನಡ ಬಿಗ್‌ಬಾಸ್ ಸೀಸನ್ 12 ಆರಂಭವಾಗಿ 11 ವಾರ ಪೂರೈಸಿದೆ. ಈಗಾಗಗಲೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಬಿಗ್‌ಬಾಸ್ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇದೀಗ ಶಶಿ ಎಂಬವರು ಎಕ್ಸ್ ಖಾತೆ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು ನೀಡಿದ್ದಾರೆ. ಇದೀಗ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ.
ಶಶಿ ಪೋಸ್ಟ್
ಆಕೆ (ಕಾವ್ಯಾ ಶೈವ) ಮೊದಲ ವಾರ ಜೋಡಿ ಟಾಸ್ಕ್ ಬಿಚ್ಚಿದಾಗಲೇ ಅರಿತುಕೊಳ್ಳಬೇಕಿತ್ತು. ಗಿಲ್ಲಿಯನ್ನು ಸ್ವಲ್ಪ ದೂರ ಇಡಬೇಕಿತ್ತು. ಅದು ಬಿಟ್ಟು ನಾಯಿ ಬಾಲ ನೇರ ಮಾಡುತ್ತೀನಿ ಅಂತ ಹಠಕ್ಕೆ ಬಿದ್ದಿದ್ದು ತಪ್ಪು. ಈಗ ಗಿಲ್ಲಿ ನಟನಿಂದ ಈ ರೀತಿಯ ಹಾಡು ಕೇಳಬೇಕಿದೆ. ಅವಳದು ದೊಡ್ಡ ತಪ್ಪಿದೆ. ಈಗಲೂ ಎಚ್ಚೆತ್ತುಕೊಂಡು ಗಿಲ್ಲಿನ ಉಗಿದು ಉಪ್ಪಿನಕಾಯಿ ಹಾಕದಿದ್ದರೆ ಅಷ್ಟೆ.
ಮತ್ತೊಮ್ಮೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಮನಿಸಬೇಕು. ಹೆಣ್ಣು ಮಕ್ಕಳನ್ನು ಹಾಸ್ಯಾಸ್ಪದ ರೀತಿಯಲ್ಲಿ, ಕೀಳು double meaning ಹಾಡು ಹೇಳಿ ಚೆಡಿಸುತ್ತಿದ್ದಾರೆ ಗಿಲ್ಲಿ ನಟರಾಜ್. ಮಹಿಳಾ ಆಯೋಗಕ್ಕೆ ದೂರು ದಾಖಲಿಸಿ, ಪೊಲೀಸ್ ಎಫ್ಐಆರ್ ಮಾಡಿ ಬಿಗ್ ಬಾಸ್ ಶೋ ನಿಲ್ಲಿಸಲು ಹೇಳಿ ಎಂದು ಶಶಿ ಮನವಿ ಮಾಡಿಕೊಂಡಿದ್ದಾರೆ.
ಮತ್ತೊಮ್ಮೆ @laxmi_hebbalkar ರವರು ಗಮನಿಸಬೇಕು. ಹೆಣ್ಣು ಮಕ್ಕಳನ್ನು ಹಾಸ್ಯಾಸ್ಪದ ರೀತಿಯಲ್ಲಿ, ಕೀಳು double meaning ಹಾಡು ಹೇಳಿ ಚೆಡಿಸುತ್ತಿದ್ದಾರೆ ಗಿಲ್ಲಿ ನಟರಾಜ್.
ಮಹಿಳಾ ಆಯೋಗಕ್ಕೆ ದೂರು ದಾಖಲಿಸಿ, ಪೊಲೀಸ್ ಎಫ್ಐಆರ್ ಮಾಡಿ ಬಿಗ್ ಬಾಸ್ ಶೋ ನಿಲ್ಲಿಸಲು ಹೇಳಿ.#BBK12— ಶಶಿ । ಅಶ್ವಮೇಧ (@Advaith09) December 9, 2025
ಯಾಕೆ ಈ ದೂರು?
ಲಕ್ಷುರಿ ಫುಡ್‌ಗಾಗಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ಬಿಗ್‌ಬಾಸ್ ಮನೆಯಲ್ಲಿರುವ ವಿಲನ್ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಪ್ರಕಾರ, ಇಬ್ಬರು ಜೊತೆಯಾಗಿ ಕಾವ್ಯಾ ಅವರನ್ನು ಅಳಿಸಬೇಕು. ಈ ಟಾಸ್ಕ್‌ಗೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಒಪ್ಪಿಕೊಂಡಿದ್ದಾರೆ. ಈ ಪ್ರಕಾರ, ಗಿಲ್ಲಿ ನಟ ಕೊಂಕು ಮಾತುಗಳಿಂದ ಕಾವ್ಯಾ ಕಣ್ಣೀರು ಹಾಕುವಂತೆ ಮಾಡಿದ್ದಾರೆ.
ಗಿಲ್ಲಿ ನಟ ಮತ್ತು ಕಾವ್ಯಾ ಶೈವ
ಮಂಗಳವಾರ ಸಂಚಿಕೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಪರಸ್ಪರ ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಂಡಿದ್ದರು. ಶನಿವಾರದ ಸಂಚಿಕೆಯಲ್ಲಿ ಕಾವ್ಯಾ ಅವರು ತಮ್ಮ ಆಟಕ್ಕೆ ಗಿಲ್ಲಿಯೇ ಏಣಿ ಮತ್ತು ಹಾವು ಅಂತ ಹೇಳಿದ್ದರು. ಗಿಲ್ಲಿ ಮಾತ್ರ ಕಾವ್ಯಾ ಅವರಿಗೆ ಏಣಿಯನ್ನು ನೀಡಿದ್ದರು.
ಇದನ್ನೂ ಓದಿ: BBK 12: ನೀನು ಫ್ರೀ ಪ್ರೊಡಕ್ಟ್, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
ಕಣ್ಣೀರು ಹಾಕಿದ ಕಾವ್ಯಾ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ, ರೇಗಿಸಿದಕ್ಕೆ ನನ್ನನ್ನು ನಾಮಿನೇಷನ್ ಮಾಡಲು ಕಾರಣವಂತೆ. ಬೆನ್ನಿಗೆ ಚೂರಿ ಹಾಕಿದರಲ್ಲಾ? ನೀನು ಮನೆಯಲ್ಲಿ ಏನು ಮಾಡ್ತಿಲ್ಲ. ಓಡಾಡ್ಕೊಂಡು ಇದ್ದೀಯಾ? ಸ್ಪಂದನಾ ಅಲ್ಲ ನೀನು ಲಕ್ಕಿ. ಫ್ರೀ ಪ್ರೊಡೆಕ್ಟ್ ಎಂದು ಗಿಲ್ಲಿ ಹೇಳುತ್ತಾರೆ. ಈ ಮಾತುಗಳಿಂದ ನೊಂದುಕೊಂಡ ಕಾವ್ಯಾ ಶೈವ ತನ್ನ ದುಃಖವನ್ನು ಸ್ಪಂದನಾ ಮುಂದೆ ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

