Bigg Boss Kannada 12 ನಿರೂಪಣೆ ಮಾಡ್ತೀರಾ? ಕೊನೆಗೂ ಉತ್ತರ ಕೊಟ್ಟ ನಟ ಕಿಚ್ಚ ಸುದೀಪ್!
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಇರಲಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಿರುವಾಗ ಸುದ್ದಿ ವಾಹಿನಿಯು ಈ ಬಗ್ಗೆ ಪ್ರಶ್ನೆ ಮಾಡಿದಾಗ ಸುದೀಪ್ ಅವರು ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಪ್ರಸಾರ ಆಗುವಾಗಲೇ ಕಿಚ್ಚ ಸುದೀಪ್ ಅವರು, “ನಾನು ಇನ್ಮುಂದೆ ಈ ಶೋನಲ್ಲಿ ನಿರೂಪಣೆ ಮಾಡೋದಿಲ್ಲ” ಎಂದು ಹೇಳಿದ್ದರು.
“ನಾನು ಸರಿಯಾದ ವೇದಿಕೆಯಲ್ಲಿ ಸರಿಯಾದ ಟೈಮ್‌ನಲ್ಲಿ ಈ ಬಗ್ಗೆ ಮಾತನಾಡ್ತೀನಿ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
“ನಾನು ಈಗ ಏನೇ ಮಾತನಾಡಿದರೂ ಕೂಡ ಅದು ಅರ್ಧ ಆಗುತ್ತದೆ, ಹೀಗಾಗಿ ಈಗ ಈ ಪ್ರಶ್ನೆಗೆ ಉತ್ತರ ಕೊಡೋದಿಲ್ಲ” ಎಂದು ಹೇಳಿದ್ದಾರೆ.
“ನಾನು ಯಾವ ವೇದಿಕೆಯಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿದರೆ ಆ ಶೋಗೆ ಗೌರವ ಕೊಟ್ಟ ಹಾಗೆ ಆಗುತ್ತದೆ” ಎಂದಿದ್ದಾರೆ.
“ನಾನು ಎಲ್ಲಿ ಮಾತನಾಡಿದ್ನೋ ಅಲ್ಲಿ ಮಾತನಾಡಿದರೆ, ನನ್ನ ಟ್ವೀಟ್‌ಗೆ ಒಂದು ಅರ್ಥ ಇರುತ್ತದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

