ಸಾಹಸಕ್ಕೆ ಹೊಸ ಅರ್ಥ ಕೊಟ್ಟ ಯಶ್: ‘ಟಾಕ್ಸಿಕ್’ನಲ್ಲಿ ಗನ್‌ಫೂ ಆ್ಯಕ್ಷನ್ ಹೈಲೈಟ್
ಆ್ಯಕ್ಷನ್ ಅದ್ಭುತವಾಗಿ ಬರಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಜೆ.ಜೆ ಪೆರ್ರಿ ಎಂಬ ಅದ್ಭುತ ಆ್ಯಕ್ಷನ್ ಡೈರೆಕ್ಟರ್ ಅನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.

ಜೂ.4ಕ್ಕೆ ಸಿನಿಮಾ ಬಿಡುಗಡೆ
ಸಾಹಸ ಪ್ರಧಾನ ‘ಟಾಕ್ಸಿಕ್’ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಯಶ್ ಮಾತನಾಡಿದ್ದಾರೆ. ಜೆ.ಜೆ ಪೆರ್ರಿ ಅವರಿಂದ ಸಾಹಸ ನಿರ್ದೇಶನ ಮಾಡಿಸಿರುವುದಕ್ಕೂ ಕಾರಣ ತಿಳಿಸಿದ್ದಾರೆ. ಜೂ.4ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ಈ ಸಿನಿಮಾ ಆ್ಯಕ್ಷನ್ ಬಗ್ಗೆ ಯಶ್ ಮಾತು ಹೀಗಿದೆ:
ಕುಂಗ್‌ಫೂ ಆ್ಯಕ್ಷನ್
1. ಇದರಲ್ಲಿ ನಾವು ಗನ್‌ಫೂ ಅನ್ನುವ ಹೊಸ ಸಾಹಸವನ್ನು ಪರಿಚಯಿಸಿದ್ದೇವೆ. ನೀವು ಕುಂಗ್‌ಫೂ ಫೈಟ್ ಬಗ್ಗೆ ಕೇಳಿರಬಹುದು. ಇದು ಗನ್ ಮೂಲಕ ಕುಂಗ್‌ಫೂ ರೀತಿ ಮಾಡುವ ಆ್ಯಕ್ಷನ್. ಇದು ಆ್ಯಕ್ಷನ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯುವ ಪ್ರಯತ್ನ.
ಅವರೊಂದಿಗೆ ಸಮಯ ಕಳೆದೆ
2. ಆ್ಯಕ್ಷನ್ ಅದ್ಭುತವಾಗಿ ಬರಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಜೆ.ಜೆ ಪೆರ್ರಿ ಎಂಬ ಅದ್ಭುತ ಆ್ಯಕ್ಷನ್ ಡೈರೆಕ್ಟರ್ ಅನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದೆ. ಆ ಹೊತ್ತಿನಲ್ಲಿ ಅವರು ನನ್ನ ಬಾಡಿ ಲ್ಯಾಂಗ್ವೇಜ್ ಅನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಆಕ್ಷನ್ ಸೀಕ್ವೆನ್ಸ್‌ಗಳನ್ನು ಕಟ್ಟತೊಡಗಿದರು. ಅದು ಸಿನಿಮಾಕ್ಕೆ ಬೇರೆಯದೇ ಆಯಾಮ ನೀಡಿದೆ. ಆದರೆ ಎಲ್ಲಾ ಆ್ಯಕ್ಷನ್ ಕಥೆಯ ಹೊರಗೆ ನಿಲ್ಲದೇ ಕಥೆಗೆ ಪೂರಕವಾಗಿ ಚಲಿಸುತ್ತದೆ.
ಹೊಸ ಆಯಾಮ
3. ಜೊತೆಗೆ ಗ್ಯಾಂಗ್‌ಸ್ಟರ್ ಸಿನಿಮಾಕ್ಕೆ ಈ ಸಿನಿಮಾ ಮೂಲಕ ನಿರ್ದೇಶಕಿ ಗೀತು ಮೋಹನ್‌ದಾಸ್ ಹೊಸ ಆಯಾಮ ನೀಡಿದ್ದಾರೆ. ಮನುಷ್ಯನ ಕ್ರೌರ್ಯವನ್ನು ಅನೇಕ ಲೇಯರ್‌ಗಳಲ್ಲಿ ಎಮೋಶನಲ್ ಲೆವೆಲ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

