- Home
- Life
- Fashion
- ರೇಷ್ಮೆ ಸೀರೆ ಖರೀದಿಸಿದಾಗ ಹೇಗಿತ್ತೋ ಹಲವು ವರ್ಷಗಳ ನಂತರವೂ ಹೊಸದರಂತೆ ಕಾಣಲು ಏನು ಮಾಡಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್!
ರೇಷ್ಮೆ ಸೀರೆ ಖರೀದಿಸಿದಾಗ ಹೇಗಿತ್ತೋ ಹಲವು ವರ್ಷಗಳ ನಂತರವೂ ಹೊಸದರಂತೆ ಕಾಣಲು ಏನು ಮಾಡಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್!
ರೇಷ್ಮೆ ಸೀರೆ ಯಾವಾಗಲೂ ಹೊಸತರಹ ಕಾಣಬೇಕೆಂದರೆ ಯಾವ ರೀತಿಯ ಜಾಗ್ರತೆಗಳನ್ನು ತೆಗೆದುಕೊಳ್ಳಬೇಕೆಂದು ಈಗ ತಿಳಿಯೋಣ...

ಸೀರೆ ಇಷ್ಟವಿಲ್ಲದ ಹೆಂಗಸರು ಯಾರಾದರೂ ಇರ್ತಾರಾ? ಅದ್ರಲ್ಲೂ ರೇಷ್ಮೆ ಸೀರೆ ಅಥವಾ ಜರಿ ಸೀರೆ ಅಂದ್ರೆ ಅತಿಯಾದ ಪ್ರೀತಿ ಇರುತ್ತೆ. ಯಾಕಂದ್ರೆ ಈ ಸೀರೆಗಳಲ್ಲಿ ತಾವು ಇನ್ನಷ್ಟು ಸುಂದರವಾಗಿ ಕಾಣ್ತೀವಿ ಅಂತ ಅವರು ನಂಬ್ತಾರೆ. ಆದರೆ ರೇಷ್ಮೆ ಸೀರೆಗಳನ್ನು ಭದ್ರವಾಗಿ ಇಡೋದು, ಹೊಸದಾಗಿ ಇಡೋದು ದೊಡ್ಡ ಟಾಸ್ಕ್. ಸರಿಯಾಗಿ ನೋಡಿಕೊಂಡ್ರೆ ಎಷ್ಟೋ ವರ್ಷ ಆದ್ರೂ ಹೊಸದಾಗೇ ಇರುತ್ತೆ. ಈ ಆರ್ಟಿಕಲ್‌ನಲ್ಲಿ ರೇಷ್ಮೆ ಸೀರೆಗಳನ್ನು ಹೊಸದಾಗಿ ಹೇಗೆ ನೋಡಿಕೊಳ್ಳಬೇಕೆಂದು ಟಿಪ್ಸ್ ನೋಡೋಣ
ರೇಷ್ಮೆ ಸೀರೆಗಳನ್ನು ಭದ್ರಪಡಿಸುವ ಟೆಕ್ನಿಕ್: ನೀವು ರೇಷ್ಮೆ ಸೀರೆಗಳನ್ನು ಪ್ರತಿದಿನ ಧರಿಸುವುದಿಲ್ಲ. ಕೇವಲ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸುತ್ತೀರಿ.. ಅದಕ್ಕೋಸ್ಕರ ಅವುಗಳನ್ನು ಬೀರುಗಳಲ್ಲಿ ಭದ್ರಪಡಿಸುತ್ತಾ ಇರ್ತೀರಿ. ಆದ್ರೆ ಅವು ಯಾವಾಗ್ಲೂ ಹೊಸದಾಗಿ ಇರಬೇಕಂದ್ರೆ, ಅವುಗಳನ್ನು ತಿಂಗಳುಗಟ್ಟಲೆ ಒಂದೇ ಕಡೆ ಹಾಗೆ ಇಡಬಾರದು. ಸುಮಾರು 3 ರಿಂದ 6 ತಿಂಗಳಿಗೊಮ್ಮೆ ಅದನ್ನು ಬೀರುವಿನಿಂದ ತೆಗೆದು ಗಾಳಿ ತಾಗೋ ಹಾಗೆ ಮಾಡೋದು ಅವಶ್ಯಕ. ಮನೆಯಲ್ಲಿ ನೆರಳಲ್ಲಿ ಒಣಗಿಸೋದ್ರಿಂದ ಅವು ತೇವವಾಗಿ ಇರೋದಿಲ್ಲ. ವಿಶೇಷವಾಗಿ ಅವುಗಳನ್ನು ಮತ್ತೆ ಮಡಚಿ ಹಳೆಯ ಮಡಿಕೆಗಳನ್ನು ಬದಲಿಸಿ ಇಡಬೇಕು.
ಕಾಟನ್ ಬ್ಯಾಗ್:ನೀವು ಸೀರೆಯನ್ನು ಮಡಚಿ ಹಾಗೇ ಬೀರುವಿನಲ್ಲಿ ಇಟ್ಟರೆ ಅದು ಬೇಗ ಹಾಳಾಗಬಹುದು. ಪ್ಲಾಸ್ಟಿಕ್ ಸ್ಟೋರೇಜ್ ಕವರ್‌ನಲ್ಲಿ ಇಟ್ಟರೂ ಅದು ಸೀರೆಯನ್ನು ಹಾಳು ಮಾಡುತ್ತದೆ. ಹೆಚ್ಚು ಕಾಲ ರೇಷ್ಮೆಸೀರೆಯನ್ನು ಹೊಸದಾಗಿ ಇಡಬೇಕಂದ್ರೆ ಕಾಟನ್ ಬ್ಯಾಗ್ ನಲ್ಲಿ ಹಾಕಿ ಇಡಿ.
ನ್ಯಾಫ್ತಲೀನ್ ಉಂಡೆಗಳು ಬೇಡ: ಬೀರುವಿನಲ್ಲಿ ಹುಳುಗಳು ಬರದೇ ಇರೋ ಹಾಗೆ ತಡೆಯೋಕೆ, ಸುವಾಸನೆಗೋಸ್ಕರ ನ್ಯಾಫ್ತಲೀನ್ ಬಾಲ್ಸ್ ತಂದು ಹಾಕ್ತಿವಿ. ಸಿಲ್ಕ್ ಸೀರೆ ಇಡುವಾಗ ಅದರಲ್ಲಿ ಸುವಾಸನೆಗೋಸ್ಕರ ಹಾಕುವ ನ್ಯಾಫ್ತಲೀನ್ ಬಾಲ್ಸ್, ಪರ್ಫ್ಯೂಮ್ ಕವರ್‌ಗಳನ್ನು ಅವಾಯ್ಡ್ ಮಾಡಬೇಕು. ಇವು ಸೀರೆಯನ್ನು ಹಾಳು ಮಾಡಬಹುದು.
'ನೋ' ಪರ್ಫ್ಯೂಮ್:ನಾವು ಹೊರಗಡೆ ಹೋಗುವಾಗ ಸುವಾಸನೆ ಇರಲಿ ಅಂತ ಪರ್ಫ್ಯೂಮ್ ಹಾಕೊಳ್ತೀವಿ. ತುಂಬಾ ಹೊತ್ತು ಆ ಸುವಾಸನೆ ಇರಲಿ ಅಂತ ಡ್ರೆಸ್ಸಿನ ಮೇಲೆ ವಿಪರೀತವಾಗಿ ಹೊಡೆದುಕೊಳ್ಳುವವರು ಕೂಡ ಇದ್ದಾರೆ. ಸಿಲ್ಕ್ ಸೀರೆಗಳನ್ನು ಕಟ್ಟಿಕೊಳ್ಳುವಾಗ ಈ ತಪ್ಪು ಮಾಡಬಾರದು. ಸೀರೆಗೆ ಹತ್ತಿರದಲ್ಲಿ ಸ್ಪ್ರೇ ಮಾಡದೇ ದೂರ ನಿಂತು ಸ್ಪ್ರೇ ಮಾಡೋದು ಒಳ್ಳೆಯದು. ನಿಮ್ಮ ಸೀರೆಯೊಳಗೆ ಸ್ಪ್ರೇ ಮಾಡದೇ ಮೊಣಕೈ ಮಡಚೋ ಭಾಗದಲ್ಲಿ, ಕುತ್ತಿಗೆಗೆ ಭಾಗದಲ್ಲಿ ಪೂಸಿಸಿದರೆ ತುಂಬಾ ಹೊತ್ತು ಸುವಾಸನೆ ಇರುತ್ತೆ. ಸೀರೆಯೊಳಗೆ ರಾಸಾಯನಿಕಗಳೊಂದಿಗೆ ಸೇರಿದ ಪರ್ಫ್ಯೂಮ್ ಬಿದ್ರೆ ಅದು ಹಾಳಾಗುತ್ತೆ.
ಹೇಗೆ ಇಡಬೇಕು?: ಮಿಕ್ಕ ಸೀರೆಗಳ ಜೊತೆ ರೇಷ್ಮೆ ಸೀರೆಗಳನ್ನು ಒಂದರ ಮೇಲೆ ಒಂದು ಸೇರಿಸಿ ಜೋಡಿಸಿ ಇಡಬೇಕು. ಸಿಲ್ಕ್ ಸೀರೆಗಳಿಗಾಗಿಯೇ ಒಂದು ಜಾಗವನ್ನು ಮೀಸಲಿಟ್ಟು ಅದರಲ್ಲಿ ಇಡಿ. ಸ್ವಲ್ಪ ಖಾಲಿ ಇರುವ ಹಾಗೆ ಇಡೋದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.