- Home
- Astrology
- Festivals
- Akshaya Tritiya 2026: ಅಕ್ಷಯ ತೃತೀಯ ಯಾವಾಗ? ದಿನಾಂಕ, ಪೂಜಾ ಮುಹೂರ್ತ, ವಿಧಾನದ ಸಂಪೂರ್ಣ ಮಾಹಿತಿ
Akshaya Tritiya 2026: ಅಕ್ಷಯ ತೃತೀಯ ಯಾವಾಗ? ದಿನಾಂಕ, ಪೂಜಾ ಮುಹೂರ್ತ, ವಿಧಾನದ ಸಂಪೂರ್ಣ ಮಾಹಿತಿ
ಬೆಂಗಳೂರು: ಧರ್ಮಗ್ರಂಥಗಳಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಜನರು ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ಯಾವುದೇ ಮುಹೂರ್ತ ನೋಡದೆ ಈ ದಿನ ಮಾಡುತ್ತಾರೆ. ಈ ದಿನ ಚಿನ್ನ ಖರೀದಿಸುವುದಕ್ಕೂ ವಿಶೇಷ ಮಹತ್ವವಿದೆ.

ಅಕ್ಷಯ ತೃತೀಯ ಹಬ್ಬವನ್ನು ಸ್ವಯಂಸಿದ್ದ ಮುಹೂರ್ತ ಎಂದು ಕರೆಯಲಾಗುತ್ತದೆ
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಧರ್ಮಗ್ರಂಥಗಳು ಇದನ್ನು 'ಸ್ವಯಂಸಿದ್ಧ' ಮುಹೂರ್ತ ಎಂದು ಹೇಳುತ್ತವೆ. ಈ ಬಾರಿ ಅಕ್ಷಯ ತೃತೀಯ ದಿನಾಂಕದ ಬಗ್ಗೆ ಜ್ಯೋತಿಷಿಗಳಲ್ಲಿ ಗೊಂದಲವಿದ್ದು, ಈ ಹಬ್ಬವನ್ನು 2 ದಿನಗಳ ಕಾಲ ಆಚರಿಸುವ ಸಾಧ್ಯತೆ ಇದೆ.
ಅಕ್ಷಯ ತೃತೀಯದ ನಂಬಿಕೆ
ಇದೇ ದಿನ ಲಕ್ಷ್ಮಿ ದೇವಿಯು ಕುಬೇರನಿಗೆ ಸಂಪತ್ತಿನ ಒಡೆಯನಾಗುವ ವರ ನೀಡಿದ್ದಳು ಎಂಬ ನಂಬಿಕೆ ಇದೆ. ಹೀಗಾಗಿ ಈ ದಿನ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವ. ಅಕ್ಷಯ ತೃತೀಯ ಯಾವಾಗ, ಲಕ್ಷ್ಮಿ ಪೂಜೆ ಮಾಡುವುದು ಹೇಗೆ, ಶುಭ ಮುಹೂರ್ತ, ಮಂತ್ರದ ಬಗ್ಗೆ ತಿಳಿಯೋಣ ಬನ್ನಿ
ಅಕ್ಷಯ ತೃತೀಯ ಎಷ್ಟು ಗಂಟೆಯಿಂದ ಆರಂಭ
ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯು ಏಪ್ರಿಲ್ 19, ಭಾನುವಾರದಂದು ಬೆಳಿಗ್ಗೆ 10:49ಕ್ಕೆ ಪ್ರಾರಂಭವಾಗಿ, ಏಪ್ರಿಲ್ 20, ಸೋಮವಾರದಂದು ಬೆಳಿಗ್ಗೆ 07:27ಕ್ಕೆ ಕೊನೆಗೊಳ್ಳಲಿದೆ. ಅಕ್ಷಯ ತೃತೀಯದ ಹೆಚ್ಚಿನ ಆಚರಣೆಗಳನ್ನು ಮಧ್ಯಾಹ್ನ ಮಾಡುವುದರಿಂದ, ಈ ಹಬ್ಬವನ್ನು ಏಪ್ರಿಲ್ 19, ಭಾನುವಾರದಂದು ಆಚರಿಸಲಾಗುತ್ತದೆ. ಆದರೆ, ಸೂರ್ಯೋದಯದ ತಿಥಿಯನ್ನು ಪರಿಗಣಿಸುವವರು ಈ ಹಬ್ಬವನ್ನು ಏಪ್ರಿಲ್ 20ರಂದು ಆಚರಿಸುತ್ತಾರೆ.
ಶುಭ & ಶ್ರೇಷ್ಠ ಮುಹೂರ್ತ ಯಾವಾಗ?
ಬೆಳಗ್ಗೆ 07:41 ರಿಂದ 09:16 ರವರೆಗೆ
ಬೆಳಗ್ಗೆ 09:16 ರಿಂದ 10:51 ರವರೆಗೆ
ಬೆಳಗ್ಗೆ 10:49 ರಿಂದ ಮಧ್ಯಾಹ್ನ 12:20 ರವರೆಗೆ (ಶ್ರೇಷ್ಠ ಮುಹೂರ್ತ)
ಮಧ್ಯಾಹ್ನ 12:00 ರಿಂದ 12:51 ರವರೆಗೆ (ಅಭಿಜಿತ್ ಮುಹೂರ್ತ)
ಮಧ್ಯಾಹ್ನ 02:00 ರಿಂದ 03:35 ರವರೆಗೆ
ಅಕ್ಷಯ ತೃತೀಯ ಪೂಜಾ ವಿಧಿವಿಧಾನ
- ಅಕ್ಷಯ ತೃತೀಯ ದಿನ ಅಂದರೆ ಏಪ್ರಿಲ್ 19ರಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ವ್ರತ ಮತ್ತು ಪೂಜೆಯ ಸಂಕಲ್ಪ ಮಾಡಿ. ಶುಭ ಮುಹೂರ್ತಕ್ಕೂ ಮುನ್ನ ಪೂಜೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ.
- ಶುಭ ಮುಹೂರ್ತ ಆರಂಭವಾದಾಗ, ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪೂಜೆ ಮಾಡಿ. ಇದಕ್ಕಾಗಿ, ಒಂದು ಮಣೆಯ ಮೇಲೆ ಅವರ ಫೋಟೋ ಅಥವಾ ಮೂರ್ತಿಯನ್ನು ಇರಿಸಿ. ಮೊದಲು ದೀಪವನ್ನು ಹಚ್ಚಿ.
ಅಕ್ಷಯ ತೃತೀಯ ಪೂಜಾ ವಿಧಿವಿಧಾನ
- ಹಸುವಿನ ಹಾಲಿನಿಂದ ವಿಷ್ಣು-ಲಕ್ಷ್ಮಿ ಮೂರ್ತಿಗೆ ಅಭಿಷೇಕ ಮಾಡಿ. ಹೂವಿನ ಹಾರ ಹಾಕಿ. ಅಬೀರ, ಗುಲಾಲ್, ಅಕ್ಕಿ, ಹೂವು, ವೀಳ್ಯದೆಲೆ, ಹಣ್ಣು, ವಸ್ತ್ರ, ತೆಂಗಿನಕಾಯಿ ಇತ್ಯಾದಿಗಳನ್ನು ಒಂದೊಂದಾಗಿ ಅರ್ಪಿಸಿ.ಪಾಯಸದ ನೈವೇದ್ಯ ಅರ್ಪಿಸಿ. ಆರತಿ ಮಾಡಿ ಭಕ್ತರಿಗೆ ಪ್ರಸಾದ ಹಂಚಿ.
- ಪೂಜೆಯ ನಂತರ, ಸುಖ-ಸಮೃದ್ಧಿಗಾಗಿ ಪ್ರಾರ್ಥಿಸಿ. ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ.
Disclaimer:
ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ನಾವು ಈ ಮಾಹಿತಿಯನ್ನು ನಿಮಗೆ ಸುದ್ದಿ ತಲುಪಿಸುವ ಮಾಧ್ಯಮ ಮಾತ್ರ. ಓದುಗರು ಈ ಮಾಹಿತಿಯನ್ನು ಕೇವಲ ಸೂಚನೆ ಎಂದು ಪರಿಗಣಿಸಬೇಕು.

