- Home
- Astrology
- Festivals
- ಶನಿದೇವನ ಕೃಪೆಗೆ ಪಾತ್ರರಾಗಲು ಈ ಕೆಲಸವೊಂದನ್ನು ಮಾಡಿ; ಸಾಡೇಸಾತಿಗೂ, ಧೈಯಾಗೂ ಇದುವೇ ಸರಳ ಪರಿಹಾರ
ಶನಿದೇವನ ಕೃಪೆಗೆ ಪಾತ್ರರಾಗಲು ಈ ಕೆಲಸವೊಂದನ್ನು ಮಾಡಿ; ಸಾಡೇಸಾತಿಗೂ, ಧೈಯಾಗೂ ಇದುವೇ ಸರಳ ಪರಿಹಾರ
ವೈದಿಕ ಜ್ಯೋತಿಷ್ಯದ ಪ್ರಕಾರ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಶನಿದೇವನ ಕೃಪೆ ಪಡೆಯುವುದು ಮುಖ್ಯ. ಇದನ್ನು ಧರಿಸುವುದರಿಂದ ಶನಿಯ ನಕಾರಾತ್ಮಕ ಪ್ರಭಾವ ಕಡಿಮೆಯಾಗಿ, ಜೀವನದಲ್ಲಿ ಸಮತೋಲನ ಮತ್ತು ಸಕಾರಾತ್ಮಕತೆ ಬರುತ್ತದೆ. 4 ರಾಶಿಯವರಿಗೆ ಈ ರತ್ನ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಆರ್ಥಿಕ ಸಮಸ್ಯೆಗಳಿಗೆ ಪರಿಹಾರ
ನೀವು ಜೀವನದಲ್ಲಿ ಪದೇ ಪದೇ ಆರ್ಥಿಕ ಸಮಸ್ಯೆ ಸೇರಿದಂತೆ ಕುಟುಂಬದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ರೆ, ಇದಕ್ಕೆ ವೈದಿಕ ಜ್ಯೋತಿಷ್ಯದಲ್ಲಿ ಸರಳ ಪರಿಹಾರಗಳಿವೆ. ಶನಿದೇವನ ಕೃಪೆಗೆ ಪಾತ್ರವಾಗಲು ಕೆಲವೊಂದು ಸರಳ ಪರಿಹಾರ ಮಾಡಿಕೊಳ್ಳಬಹುದು. ಆ ಪರಿಹಾರ ಏನು ಎಂಬುದನ್ನು ನೋಡೋಣ ಬನ್ನಿ.
ನೀಲಿಮಣಿ
ಶನಿದೇವನಿಗೆ ನೀಲಿಯ ನೀಲಿಮಣಿ ಧರಿಸುವಂತೆ ಪಂಡಿತರು ಸಲಹೆ ನೀಡುತ್ತಾರೆ. ಈ ನೀಲಿಮಣಿ ಶನಿಯ ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಜೀವನದಲ್ಲಿ ಸಮತೋಲವನ್ನುಂಟು ಮಾಡುತ್ತದೆ. ನೀಲಿಮಣಿ ಧರಿಸೋದರಿಂದ ಶಾಂತಿ ನೆಲೆಸುತ್ತದೆ. ಇದೊಂದು ಅಮೂಲ್ಯ ರತ್ನವಾಗಿದ್ದು, ಆಕಾಶ ನೀಲಿ ಬಣ್ಣದಿಂದ ಆಳವಾದ ನೀಲಿ ಬಣ್ಣಕ್ಕೆ ಹೋಗುತ್ತದೆ.
ಯಾರು ಈ ನೀಲಿಮಣಿ ಧರಿಸಬೇಕು?
ನವೆಂಬರ್ನಲ್ಲಿ ಜನಿಸಿದವರಿಗೆ ನೀಲಿಮಣಿಯನ್ನು ಜನ್ಮರತ್ನವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಜ್ಯೋತಿಷ್ಯದ ಪ್ರಕಾರ, ವೃಷಭ, ತುಲಾ , ಮಕರ ಮತ್ತು ಕುಂಭ ರಾಶಿಚಕ್ರದವರು ನೀಲಿಮಣಿ ಧರಿಸಬಹುದಾಗಿದೆ. ಮಕರ ಮತ್ತು ಕುಂಭ ರಾಶಿಯನ್ನು ಶನಿಯು ಆಳುತ್ತಾನೆ, ಆದರೆ ವೃಷಭ ರಾಶಿಯನ್ನು ಶುಕ್ರ ಆಳುತ್ತಾನೆ. ಶುಕ್ರ ರಾಶಿಯನ್ನು ಶನಿಯ ಸ್ನೇಹಿತ ಎಂದು ಪರಿಗಣಿಸುವ ಕಾರಣದಿಂದ ವೃಷಭ ರಾಶಿಯವರು ಧರಿಸಬಹುದು ಎಂದು ಸಲಹೆ ನೀಡಲಾಗುತ್ತದೆ.
ಸ್ಕೈ ಬ್ಲೂ, ಸ್ವಿಸ್ ಬ್ಲೂ ಮತ್ತು ಲಂಡನ್ ಬ್ಲೂ ಟೋಪಾಜ್
ಶನಿ ಶುಭಸ್ಥಾನದಲ್ಲಿದ್ರೂ ನೀಲಿಮಣಿ ಧರಿಸಬೇಕು. ಆದ್ರೆ ನೀಲಿಮಣಿ ಜೊತೆಯಲ್ಲಿ ಮಾಣಿಕ್ಯ, ಮುತ್ತು ಮತ್ತು ಹವಳ ಧರಿಸಬಾರದು. ಇವುಗಳ ಪರಿಣಾಮ ಪರಸ್ಪರ ವಿರುದ್ಧವಾಗಿದ್ದು, ನಕಾರಾತ್ಮಕ ಪರಿಣಾಮ ಬೀರುವ ಅಪಾಯವಿರುತ್ತದೆ.
ಸ್ಕೈ ಬ್ಲೂ, ಸ್ವಿಸ್ ಬ್ಲೂ ಮತ್ತು ಲಂಡನ್ ಬ್ಲೂ ಟೋಪಾಜ್ ಎಂಬ ಮೂರು ಬಣ್ಣಗಳಲ್ಲಿನ ನೀಲಿಮಣಿ ಲಭ್ಯವಿದೆ. ಇತ್ತೀಚಿಗೆ ಆಭರಣಗಳಲ್ಲಿಯೂ ನೀಲಿಮಣಿ ಬಳಕೆ ಮಾಡಲಾಗುತ್ತಿದ್ದು, ಇದನ್ನು ಧರಿಸೋದರಿಂದ ಜೀವನದಲ್ಲಿ ಸಕಾರಾತ್ಮಕ ಭಾವನೆಯನ್ನುಂಟು ಮಾಡುತ್ತದೆ.
ಇದನ್ನೂ ಓದಿ: ಮೇ 2026ರ ಭವಿಷ್ಯ: ಮೇಷದಿಂದ ಮೀನದವರೆಗೆ 12 ರಾಶಿಗಳ ಸಂಪೂರ್ಣ ಫಲಾಫಲ, ಪರಿಹಾರಗಳು!
ನೀಲಿಮಣಿ ಧರಿಸುವ ಇತರೆ ಲಾಭಗಳು
ಮಾನಸಿಕ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತೆ ಎಂದು ಶಾಸ್ತ್ರ ಹೇಳುತ್ತದೆ.
ರೋಗನಿರೋಧಕ ವ್ಯವಸ್ಥೆ, ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಸಹ ಪ್ರಯೋಜನಕಾರಿ ಎಂದು ನಂಬಲಾಗುತ್ತದೆ.
ಆರ್ಥಿಕ ಬೆಳವಣಿಗೆ, ಸಂಪತ್ತು ಮತ್ತು ಯಶಸ್ಸಿಗೆ ಈ ನೀಲಿಮಣಿ ಸಹಾಯ ಮಾಡುತ್ತೆ ಎಂದು ನಂಬಲಾಗಿದೆ.
ವ್ಯವಹಾರ ಅಥವಾ ವೃತ್ತಿಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಲು ನೀಲಿಮಣಿ ಧರಿಸಲು ಸಲಹೆ ನೀಡಲಾಗುತ್ತದೆ.
ನೀಲಿಮಣಿ ಧರಿಸುವಿಕೆಯಿಂದ ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸ ಮತ್ತು ನಿಷ್ಠೆ ಇರುತ್ತೆ.
ಇದನ್ನೂ ಓದಿ: ದೀರ್ಘ ಸಾಲದಿಂದ ಮುಕ್ತಿ, ಉದ್ಯೋಗದಲ್ಲಿ ಬಡ್ತಿ ಸಿಗುವುದು: ಯಾವ ರಾಶಿಗೆಲ್ಲಾ ರಾಜಯೋಗ?

