MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಬ್ಯಾಚುಲರ್ಸ್‌ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!

ಬ್ಯಾಚುಲರ್ಸ್‌ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!

ಬ್ಯಾಚುಲರ್ಸ್‌ಗಾಗಿ ಕೇವಲ 15 ನಿಮಿಷದಲ್ಲಿ ತಯಾರಿಸಬಹುದಾದ ರುಚಿಕರವಾದ ಮೊಟ್ಟೆ ತೊಕ್ಕು ರೆಸಿಪಿ ಇಲ್ಲಿದೆ. ಚಪಾತಿ, ಅನ್ನ ಅಥವಾ ದೋಸೆಯೊಂದಿಗೆ ಸವಿಯಲು ಇದು ಅತ್ಯುತ್ತಮ ಕಾಂಬಿನೇಷನ್ ಆಗಿದೆ. ಸರಳ ಸಾಮಾಗ್ರಿಗಳೊಂದಿಗೆ ಇದನ್ನು ಸುಲಭವಾಗಿ ಮಾಡಬಹುದು.

2 Min read
Author : Mahmad Rafik
Published : Sep 30 2025, 09:09 AM IST
Share this Photo Gallery
  • FB
  • TW
  • Linkdin
  • Whatsapp
16
ಬ್ಯಾಚುಲರ್ಸ್ ಮಾಡಿಕೊಳ್ಳುವ ಅಡುಗೆ
Image Credit : Social Media

ಬ್ಯಾಚುಲರ್ಸ್ ಮಾಡಿಕೊಳ್ಳುವ ಅಡುಗೆ

ಬ್ಯಾಚುಲರ್ಸ್ ಮಾಡಿಕೊಳ್ಳುವ ಅಡುಗೆಗಳು ತುಂಬಾ ಸರಳ ಮತ್ತು ಸಖತ್ ಟೇಸ್ಟಿಯಾಗಿರುತ್ತದೆ. ಒಂದೇ ರೀತಿ ಅಡುಗೆ ತಿಂದು ಬೇಸರವಾಗಿದ್ರೆ, ನಾಲಿಗೆ ಹೊಸ ರುಚಿ ಕೇಳುತ್ತಿದ್ದರೆ 15 ನಿಮಿಷದಲ್ಲಿ ಈ ಮೊಟ್ಟೆ ತೊಕ್ಕು ಮಾಡಿಕೊಳ್ಳಿ. ಚಪಾತಿ, ರೈಸ್, ದೋಸೆಗೆ ಇದು ಒಳ್ಳೆಯ ಕಾಂಬಿನೇಷನ್ ಆಗುತ್ತದೆ.

26
ಬೇಕಾಗುವ ಸಾಮಾಗ್ರಿಗಳು
Image Credit : Social Media

ಬೇಕಾಗುವ ಸಾಮಾಗ್ರಿಗಳು

ಮೊಟ್ಟೆ: 5, ಈರುಳ್ಳಿ: ದೊಡ್ಡ ಗಾತ್ರದ್ದು ಒಂದು, ಟೊಮೆಟೋ: 2, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಚಿಕನ್ ಮಸಾಲೆ: 1/2 ಟೀ ಸ್ಪೂನ್, ಕೋತಂಬರಿ ಸೊಪ್ಪು, ಹಸಿಮೆಣಸಿನಕಾಯಿ: ಎರಡು, ಎಣ್ಣೆ: 2 ಟೀ ಸ್ಪೂನ್, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಅರಿಶಿನ ಪುಡಿ: 1/2 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು, ಜೀರಿಗೆ-ಸಾಸವೆ: ಅರ್ಧ ಟೀ ಸ್ಪೂನ್.

Related Articles

Related image1
Egg freshness test: ಮೊಟ್ಟೆ ಫ್ರೆಶ್​ ಆಗಿದೆಯೋ, ಹಾಳಾಗಿದೆಯೋ? ಹೀಗೆ ಪತ್ತೆ ಹಚ್ಚಿ
Related image2
ನಾಟಿ ಮೊಟ್ಟೆ ಬೆಸ್ಟ್​ ನಿಜನಾ? ಇದು ನಾನ್​ವೆಜ್ಜಾ? ಇಂಜೆಕ್ಷನ್​ ಹಾಕಿದ್ರೆ ತೊಂದ್ರೆನಾ? ಉತ್ತರ ಕೊಟ್ಟ ಖ್ಯಾತ ವೈದ್ಯ
36
ಮೊಟ್ಟೆ ತೊಕ್ಕು ಮಾಡುವ ವಿಧಾನ
Image Credit : Social Media

ಮೊಟ್ಟೆ ತೊಕ್ಕು ಮಾಡುವ ವಿಧಾನ

ಮೊದಲಿಗೆ ಐದು ಮೊಟ್ಟೆಗಳನ್ನು ಬೇಯಿಸಿಕೊಂಡು ನಂತರ ಹಳದಿ ಭಾಗವನ್ನು ಬೇರ್ಪಡಿಸಿಕೊಳ್ಳಿ. ನಂತರ ಬಿಳಿ ಭಾಗವನ್ನು ಚಿಕ್ಕ ಚಿಕ್ಕದಾಗಿ ನಿಮಗೆ ಬೇಕಾದ ಶೇಪ್‌ನಲ್ಲಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಈರುಳ್ಳಿ, ಟೊಮೆಟೋ, ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.

46
ಮೊಟ್ಟೆ ತೊಕ್ಕು
Image Credit : Social Media

ಮೊಟ್ಟೆ ತೊಕ್ಕು

ಈಗ ಒಲೆ ಆನ್ ಮಾಡ್ಕೊಂಡು ಪ್ಯಾನ್ ಇರಿಸಿಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ ಹಾಕಿಕೊಳ್ಳಿ. ನಂತರ ಜೀರಿಗೆ ಹಾಕಿಕೊಳ್ಳಬೇಕು. ಆ ಬಳಿಕ ಈರುಳ್ಳಿ ಸೇರಿಸಿಕೊಂಡು ಹಸಿ ವಾಸನೆ ಹೋಗುವರೆಗೂ ಬೇಯಿಸಿಕೊಂಡು ಟೊಮೆಟೋ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಸಿಮೆಣಸಿನಕಾಯಿ ಸೇರಿಸಿಕೊಳ್ಳಿ.

56
ಗರಂ ಮಸಾಲೆ
Image Credit : Social Media

ಗರಂ ಮಸಾಲೆ

ಟೊಮೆಟೋ-ಈರುಳ್ಳಿ ಸಾಫ್ಟ್ ಆಗ್ತಿದ್ದಂತೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಚಿಕನ್ ಅಥವಾ ಎಗ್ ಮಸಾಲೆ, ಗರಂ ಮಸಾಲೆ, ಅರಿಶಿನ, ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಂದು ಕಪ್ ನೀರು ಸೇರಿಸಿಕೊಂಡು ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಿ.

ಇದನ್ನೂ ಓದಿ: 15 ನಿಮಿಷದಲ್ಲಿ ತಯಾರಾಗುವ ಬ್ಯಾಚುಲರ್ ಮೊಟ್ಟೆ ಬಿರಿಯಾನಿ; ಫೈವ್‌ ಸ್ಟಾರ್ ಹೋಟೆಲ್‌ನಲ್ಲಿಯೂ ಸಿಗಲ್ಲ!

66
ಮೊಟ್ಟೆ ಹಳದಿ ಭಾಗ ಸೇರಿಸಿ ಬೇಯಿಸಿಕೊಳ್ಳಿ
Image Credit : Social Media

ಮೊಟ್ಟೆ ಹಳದಿ ಭಾಗ ಸೇರಿಸಿ ಬೇಯಿಸಿಕೊಳ್ಳಿ

ಇದೀಗ ಬೇಯಿಸಿ ಕತ್ತರಿಸಿಟ್ಟುಕೊಂಡಿರುವ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮತ್ತೆ ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಬೇಕು. ಈಗ ಕೋತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಮೊಟ್ಟೆ ಹಳದಿ ಭಾಗ ಸೇರಿಸಿ ಮುಚ್ಚಳ ಮುಚ್ಚಿ ಮೂರು ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ಮೊಟ್ಟೆ ತೊಕ್ಕು ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: Multi-Grain Adai Dosa Recipe: ರುಚಿಕರ, ಆರೋಗ್ಯಕರವಾದ ಹಳ್ಳಿ ಶೈಲಿಯ ಅಡೆ ದೋಸೆ ಮಾಡುವ ವಿಧಾನ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮೊಟ್ಟೆ
ಆಹಾರ
ರೆಸಿಪಿ

Latest Videos
Recommended Stories
Recommended image1
ದೋಸೆ ಮಾಡುವಾಗ ಪ್ಯಾನ್ ಮೇಲೆ ನೀರು ಸಿಂಪಡಿಸುವುದೇಕೆ? ಸುಮ್‌ಸುಮ್ನೆ ಅಲ್ಲ, ಇದರ ಹಿಂದಿದೆ ಪ್ರಮುಖ ಕಾರಣ
Recommended image2
ಇಡ್ಲಿ-ದೋಸೆಗೆ ಕಡಲೆಬೀಜ, ತೆಂಗಿನಕಾಯಿ ಚಟ್ನಿ ತಿಂದು ಬೇಸರವಾಗಿದ್ಯಾ? ಮಾಡ್ಕೊಳ್ಳಿ ಕುಡು ಚಟ್ನಿ
Recommended image3
ಕುಕ್ಕರ್ ಶಿಳ್ಳೆ ಹೊಡೆಯುತ್ತಿದ್ದಂತೆ ನೀರು ಆಚೆ ಬರ್ತಿದ್ರೆ ಈ 4 ಟ್ರಿಕ್ಸ್ ಫಾಲೋ ಮಾಡಿ ಸಾಕು, ಹೊಸದನ್ನ ಕೊಳ್ಳಲ್ಲ
Related Stories
Recommended image1
Egg freshness test: ಮೊಟ್ಟೆ ಫ್ರೆಶ್​ ಆಗಿದೆಯೋ, ಹಾಳಾಗಿದೆಯೋ? ಹೀಗೆ ಪತ್ತೆ ಹಚ್ಚಿ
Recommended image2
ನಾಟಿ ಮೊಟ್ಟೆ ಬೆಸ್ಟ್​ ನಿಜನಾ? ಇದು ನಾನ್​ವೆಜ್ಜಾ? ಇಂಜೆಕ್ಷನ್​ ಹಾಕಿದ್ರೆ ತೊಂದ್ರೆನಾ? ಉತ್ತರ ಕೊಟ್ಟ ಖ್ಯಾತ ವೈದ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved