MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Tea: ಟೀ ಹೀಗೆ ಮಾಡಿ.. ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಬೇಕಿದ್ರೆ ಚಾಲೆಂಜ್!

Tea: ಟೀ ಹೀಗೆ ಮಾಡಿ.. ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಬೇಕಿದ್ರೆ ಚಾಲೆಂಜ್!

ಮನೆಗಳಲ್ಲಿ ಹಾಗೂ ಹೊಟೆಲ್‌ಗಳಲ್ಲಿ ಟೀ ಮಾಡೋದು ಕಾಮನ್. ಆದರೆ, ರುಚಿರುಚಿಯಾಗಿ ಟೀ ಮಾಡೋದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಹೀಗೆ ಟೀ ಮಾಡಿದರೆ ತುಂಬಾ ರುಚಿಕರ ಎನ್ನಿಸುತ್ತದೆ. ನೀವು ಹೀಗೆ ಟೀ ಮಾಡುವ ಕಲೆ ಸಿದ್ಧಿಸಿಕೊಂಡರೆ ನಿಮ್ಮ ಗಂಡ/ ಹೆಂಡತಿ ನಿಮಗಾಗಿ ಕಾಯೋದು ಗ್ಯಾರಂಟಿ!

2 Min read
Author : Shriram Bhat
Published : Feb 18 2026, 05:28 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಟೀ ಮಾಡೋದು ಎಲ್ರಿಗೂ ಗೊತ್ತು. ಅಥವಾ ಹಾಗಂತ ಎಲ್ಲರೂ ಅಂದ್ಕೊಂಡಿದಾರೆ. ಆದ್ರೆ ರುಚಿಕಟ್ಟಾದ ಟೀ (Special Tea) ಮಾಡೋದು ಒಂದು ಕಲೆ. ಅದು ಎಲ್ಲರಿಗೂ ಬರೋದಿಲ್ಲ ಎನ್ನಬಹುದು. ಭಾರತಕ್ಕೆ ಬ್ರಿಟೀಷರು ಬಂದು ಹೋದ ಮೇಲೆ ನಮ್ಮ ಭಾರತೀಯರ ಮನೆಯಲ್ಲಿ ಟೀ ಕುಡಿಯೋ ಪದ್ಧತಿ ಹಾಸುಹೊಕ್ಕಾಗಿದೆ. ಇದು ಒಂಥರಾ ಅತಿಥಿ ಸತ್ಕಾರದ ಮುಖ್ಯ ಅಂಶಗಳಲ್ಲಿ ಸೇರಿಕೊಂಡಿದೆ. ಟೀ ಅಥವಾ ಕಾಫೀ ಕೊಡುವುದು ಎಲ್ಲರ ಮನೆಯಲ್ಲಿ ಪದ್ಧತಿ ಎನ್ನುವಂತಾಗಿದೆ.

26
Image Credit : Getty

ಟೀ ಮಾಡೋದು ಮನೆಗಳಲ್ಲಿ ಹಾಗೂ ಹೊಟೆಲ್‌ಗಳಲ್ಲಿ ಕಾಮನ್. ಆದರೆ, ರುಚಿರುಚಿಯಾಗಿ ಟೀ ಮಾಡೋದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಸರಿಯಾಗಿ ಮಾಹಿತಿ ಪಡೆದುಕೊಂಡರೆ, ಅದನ್ನು ಅಳವಡಿಸಿಕೊಂಡು ಟೀ ಮಾಡಿದರೆ ತುಂಬಾ ರುಚಿಕರವಾಗಿ ಮಾಡಬಹುದು. ಅದರಲ್ಲೂ ಕೆಲವರಿಗೆ ಮಾತ್ರ ರುಚಿಕಟ್ಟಾದ ಟೀ ಮಾಡುವಿಕೆ ಸಿದ್ಧಿಸುತ್ತದೆ ಎನ್ನಬಹುದು. ಅವರಲ್ಲಿ ನೀವೂ ಒಬ್ಬರಾಗಬಹುದು.

Related Articles

Related image1
ಈ ಗಿಡಗಳು ಹಾವಿಗೆ 5 ಸ್ಟಾರ್‌ ಹೋಟೆಲ್‌ ಇದ್ದಂತೆ! ಕಂಡ್ರೆ ಸಾಕು ಓಡೋಡಿ ಬರುತ್ತವೆ
Related image2
ಭೂಮಿ ಮೇಲಿನ ಬಂಗಾರ ಶುಂಠಿ.. ಹೀಗೆ ಸೇವಿಸಿ ನೋಡಿ, ನಿಮ್ಮ ದೇಹದ ವಯಸ್ಸು ಇಪ್ಪತು ವರ್ಷ ಕಡಿಮೆ ಆಗುತ್ತೆ!
36
Image Credit : Asianet News

ಹಾಗಿದ್ದರೆ ಏನು ಮಾಡಬೇಕು? ಟೀ ಮಾಡುವ ಕಲೆ ಸಿದ್ಧಿಸಿಕೊಳ್ಳುವುದು ಹೇಗೆ?

ಹೌದು, ರುಚಿಕರವಾದ ಟೀಮಾಡಲು ಸ್ವಲ್ಪ ಹೆಚ್ಚಿನ ವಿಭಿನ್ನ ಮಾಹಿತಿಯ ಅಗತ್ಯವಿದೆ. ಅದು ಕೆಲವು ಅಡುಗೆ ಮಾಡುವವರಿಂದ ಸಿಕ್ಕರೆ ಇನ್ನೂ ಕೆಲವು ಸೋಷಿಯಲ್ ಮೀಡಿಯಾಗಳ ಮೂಲಕ ದೊರಕುತ್ತದೆ. ಇಲ್ಲಿದೆ ನೋಡಿ ನೀವು ಜನ್ಮದಲ್ಲೇ ಕುಡಿದಿರಲಾರದ ರುಚಿಕಟ್ಟಾದ ಟೀ ಮಾಡುವ ವಿಧಾನ. ಈ ಸೀಕ್ರೆಟ್ ಗೊತ್ತಿದ್ದರೆ ಸಾಕು ನಿಮಗೆ ಸನ್ಮಾನ, ಬಹುಮಾನ ಗ್ಯಾರಂಟಿ!

46
Image Credit : Instagram

ಈ ವಿಭಿನ್ನ ಟೀ ಹೇಗೆ ಮಾಡೋದು ?

ಎಂದಿನಂತೆ ನೀರು ಅಥವಾ ಹಾಲನ್ನು ಕುದಿಸಿಕೊಳ್ಳಿ.. ಅಥವಾ ಹಾಲು ಹಾಗೂ ನೀರಿನ ನಿಮಗೆ ಬೇಕಾದ ಪ್ರಮಾಣದಲ್ಲಿ ಸೇರಿಸಿಕೊಂಡು ಕುದಿಸಿಕೊಳ್ಳಿ.. ಸ್ವಲ್ಪ ಏಲಕ್ಕಿ ಬೇಕಿದ್ದರೆ ಸೇರಿಸಿಕೊಳ್ಳಿ. ಆದರೆ, ಅತಿಯಾಗಿ ಏಲಕ್ಕಿ ಹಾಕಬೇಡಿ, ಸ್ವಲ್ಪವೇ ಹಾಕಿ. ಏಕೆಂದರೆ ಜಾಸ್ತಿ ಏಲಕ್ಕಿ ಹಾಕಿದರೆ ಅದು ಏಲಕ್ಕಿ ಟೀ ಎಂಬಷ್ಟು ಸುವಾಸನೆ ಬರುತ್ತದೆ.

56
Image Credit : Getty

ಕುದಿಯುತ್ತಿರುವ ಹಾಲು ಅಥವಾ ನೀರಿಗೆ, ಹಾಲು+ನೀರಿಗೆ ಸಕ್ಕರೆ ಬೇಕಾದರೆ ಸೇರಿಸಿಕೊಳ್ಳಿ. ಆದರೆ, ಅತಿಯಾಗಿ ಸಕ್ಕರೆ ಹಾಕಿ ಪಾಯಸದ ಹಾಗೆ ಮಾಡಿಕೊಳ್ಳಬೇಡಿ. ಸಕ್ಕರೆ ಜಾಸ್ತಿ ಹಾಕಿದರೆ ಮಾಡಲಿರುವ ನಿಮ್ಮ ಟೀಯ ವಿಭಿನ್ನ ರುಚಿ ಕೆಟ್ಟುಹೋಗುತ್ತದೆ. ಈಗ ಟೀ ಪುಡಿ ಹಾಕುವ ಸಮಯ.. ಇಲ್ಲೇ ಮ್ಯಾಜಿಕ್ ಇರೋದು ನೋಡಿ..!

66
Image Credit : Getty

ಟೀ ಪುಡಿಯನ್ನು ಟೀಗೆ ಹಾಕೋದು ಕಾಮನ್. ಆದರೆ, ಟೀ ಪುಡಿಯನ್ನು ಮೊದಲೇ ಬೇರೆ ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ ಮಂದ ಉರಿಯಲ್ಲಿ ಸ್ವಲ್ಪವೇ ಹುರಿದಿಟ್ಟುಕೊಳ್ಳಿ.. ಎಷ್ಟು ಹುರಿಯಬೇಕು ಎಂಬ ಪ್ರಶ್ನೆಗೆ ಉತ್ತರ, ಸುಮಾರು ಒಂದು ನಿಮಿಷ ಅಥವಾ ಟೀ ಪುಡಿ ಹುರಿದ ಸುವಾಸನೆ (ಅರೋಮ) ಬರುವ ತನಕ ಹುರಿದಿರಬೇಕು. ಹೀಗೆ ಹುರಿದ ಟೀ ಪುಡಿಯನ್ನು ಸೇರಿಸಿದರೆ ಟೀ ರುಚಿ ಅದ್ಭುತವಾಗಿರುತ್ತದೆ. ನೀವು ನಿಮ್ಮ ಜನ್ಮದಲ್ಲಿ ಇಂತಹ ಕುಡಿದಿಲ್ಲ ಅಂತ ಹೇಳೋದು ಗ್ಯಾರಂಟಿ. ಅಷ್ಟು ಅದ್ಭುತವಾದ ರುಚಿ ಹೀಗೆ ಮಾಡಿದ ಟೀಗೆ ಬರುತ್ತದೆ.

ಸೋ, ಮತ್ಯಾಕೆ ತಡ? ಹುರಿದ ಟೀ ಪುಡಿಯಿಂದ ಈಗಲೇ ಮಾಡಿ ಅದ್ಭುತ ರುಚಿಕರವಾದ ಟೀ..!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಆಹಾರ
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
Fat Burning Foods: ರಾತ್ರಿ ಈ ಆಹಾರಗಳನ್ನು ತಿಂದರೆ ಹೊಟ್ಟೆಯ ಕೊಬ್ಬು ಕರಗುತ್ತೆ, ನಿದ್ದೆಯೂ ಚೆನ್ನಾಗಿ ಬರುತ್ತೆ
Recommended image2
Cooking Tips: ಕೇವಲ 1 ಗಂಟೆಯಲ್ಲಿ ದೋಸೆ ಹಿಟ್ಟು ಹುದುಗುವಂತೆ ಮಾಡುವುದು ಹೇಗೆ?
Recommended image3
Ramadan 2026: ಇಡೀ ದಿನ ಹಸಿವು ಆಗದಿರಲು ಸೆಹ್ರಿಗೆ ಇದನ್ನೆಲ್ಲಾ ತನ್ನಿ; ಇವುಗಳನ್ನು ಮುಟ್ಟಲೂಬೇಡಿ
Related Stories
Recommended image1
ಈ ಗಿಡಗಳು ಹಾವಿಗೆ 5 ಸ್ಟಾರ್‌ ಹೋಟೆಲ್‌ ಇದ್ದಂತೆ! ಕಂಡ್ರೆ ಸಾಕು ಓಡೋಡಿ ಬರುತ್ತವೆ
Recommended image2
ಭೂಮಿ ಮೇಲಿನ ಬಂಗಾರ ಶುಂಠಿ.. ಹೀಗೆ ಸೇವಿಸಿ ನೋಡಿ, ನಿಮ್ಮ ದೇಹದ ವಯಸ್ಸು ಇಪ್ಪತು ವರ್ಷ ಕಡಿಮೆ ಆಗುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved