ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿದೆ 21 ರಿಡ್ಜ್, ಇದರ ಹಿಂದಿರುವ ಇಂಟ್ರೆಸ್ಟಿಂಗ್ ಕಹಾನಿ ಏನು?
ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿದೆ 21 ರಿಡ್ಜ್, ಬಿಯಲ್ ಬಾಟಲಿ ಮುಚ್ಚಳದಲ್ಲಿನ ಹಲ್ಲುಗಳ ಸಂಖ್ಯೆ ಹಿಂದೆ ರೋಚಕ ಕಹಾನಿ ಇದೆ. ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿನ ಹಲ್ಲುಗಳ ಸಂಖ್ಯೆ 21.

ಬಿಯರ್ ಬಾಟಲಿ ಮುಚ್ಚಳ ರಹಸ್ಯ
ಚಿಲ್ಡ್ ಬಿಯರ್ ಓಪನ್ ಮಾಡುವಾಗ, ಕುಡಿಯುವಾಗ ಅದರ ಮುಚ್ಚಳದ ಕುರಿತು ಯೋಚನೆ ಮಾಡುವವರ ಸಂಖ್ಯೆ ಕಡಿಮೆ. ಬಹುಷ ಬಹುತೇಕರು ಮುಚ್ಚಳವನ್ನು ಅಥವಾ ಬಾಟಲಿಯನ್ನು ಸೂಕ್ಷ್ಮವಾಗಿ ಗಮನಿಸುವುದೇ ಇಲ್ಲ. ಒಂದೊಂದು ಗುಟುಕು ಏರುತ್ತಿದ್ದಂತೆ ವಿಚಾರಗಳು, ವಿಷಯಗಳು ಓಝೋನ್ ವರೆಗೂ ತಲುಪುವ ಕಾರಣ ಮುಚ್ಚಳದ ಬಗ್ಗೆ ಗಮನ ಹರಿಸುವ ಸಾಧ್ಯತೆ ಕಡಿಮೆ. ಆದರೆ ಬಿಯರ್ ಫುಲ್ ಬಾಟಲಿಯ ಮುಚ್ಚಳದಲ್ಲಿನ ರಿಡ್ಜ್ (ಹಲ್ಲುಗಳು) 21.
1892ರ ಬಿಯರ್ ಮುಚ್ಚಳದಲ್ಲಿದೆ 21 ಹಲ್ಲು
ಎಲ್ಲಾ ಬಿಯರ್ ಬಾಟಲಿಯ ಮುಚ್ಚಳ ಸೇಮ್. ಪ್ರತಿ ಬಿಯರ್ ಬಾಟಲಿ ಮುಚ್ಚಳ 21 ರಿಡ್ಜ್ ಹೊಂದಿದೆ. ಇದೇ 21 ಹಲ್ಲುಗಳಿಂದ ಈಗಲೂ ಬಿಯರ್ ಸಂಪೂರ್ಣ ಫ್ರೆಶ್ ಆಗಿ ಲಭ್ಯವಾಗುತ್ತಿದೆ. ಈ ಬಿಯರ್ ಬಾಟಲಿಯಲ್ಲಿನ ಮುಚ್ಚಳದ 21 ಹಲ್ಲುಗಳ ಕತೆ ಇಂದು ನಿನ್ನೆಯದಲ್ಲ. 1892ರಿಂದ ಈ ಬಿಯರ್ ಬಾಟಲಿ ಮುಚ್ಚಳದ ಹಲ್ಲು 21.
ವಿಲಿಯಂ ಪೈಂಟರ್ ಆವಿಷ್ಕಾರ
1892ರಲ್ಲಿ ಅಮೆರಿಕದ ವಿಲಿಯಂ ಪೈಂಟರ್ ಆವಿಷ್ಕಾರವೇ ಮಚ್ಚಳದಲ್ಲಿರುವ 21 ಹಲ್ಲು. ಕ್ರೌನ್ ಕಾರ್ಕ್ ಪೇಟೆಂಟ್ ಪಡೆದಿದ್ದ ವಿಲಿಯಂ ಬಿಯರ್ನ್ನು ಬಾಟಲಿಯಲ್ಲಿ ತುಂಬಿಸಿ ಹಾಳಾಗದಂತೆ, ಬಿಯರ್ ಬಾಟಲಿಯೊಳೆಗಿರುವ ಕಾರ್ಬೋನೇಶನ್ ಹೊರಹೋಗದಂತೆ ತಡೆಯುವುದು ದೊಡ್ಡ ಸವಾಲಾಗಿತ್ತು. ಮುಚ್ಚಳದಲ್ಲಿನ ಹಲ್ಲುಗಳು ಕಡಿಮೆಯಾದರೆ ಅನಿಲ ಹೊರಹೋಗುತ್ತದೆ, ಹೆಚ್ಚಾದರೆ ಮುಚ್ಚಳ ತೆಗೆಯುವುದು ಕಷ್ಟವಾಗುತ್ತಿತ್ತು.
ಪರೀಕ್ಷೆಯಲ್ಲಿ ಕಂಡ ಸತ್ಯ
ಬಾಟಲಿ ಮುಚ್ಚಳದ ಕುರಿತು ಸಂಶೋಧನೆ ನಡೆಸಿದ ವಿಲಿಯಂ ಮುಚ್ಚಳದ ಒಂದೊಂದೆ ಹಲ್ಲು ಹೆಚ್ಚಿಸುತ್ತಾ ಪರೀಕ್ಷಿಸಿದ್ದಾರೆ. ಈ ವೇಳೆ 21 ಹಲ್ಲಿನ ಮುಚ್ಚಳದಲ್ಲಿ ಬಿಯರ್ ಒಳಗಿರುವ ಕಾರ್ಬೋನೇಶನ್ ಸೋರಿಕೆಯಾಗಿಲ್ಲ. ಇಷ್ಟೇ ಅಲ್ಲ ಈ ಮಚ್ಚಳವನ್ನು ತೆಗೆಯುವುದು ಪ್ರಯಾಸದ ಕೆಲಸವಾಗಲಿಲ್ಲ. ಹೀಗಾಗಿ ವಿಲಿಯಂ ಪೈಂಟರ್ 21 ಮಚ್ಚಳದ ಬಿಯರ್ ಬಾಟಲಿಯಲ್ಲಿ ಬಿಯರ್ ಶೇಖರಿಸಿ ಮಾರಾಟ ಆರಂಭಿಸಿದ್ದರು.
ಫ್ರೆಶ್ ಬಿಯರ್ ತಂತ್ರಜ್ಞಾನ
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಈ 21 ಹಲ್ಲಿನ (ಏಣುಗಳ) ಮುಚ್ಚಳದಲ್ಲಿ ಈಗಲೂ ಬದಲಾವಣೆ ಇಲ್ಲ. ಕೆಲ ಬಿಯರ್ ಬಾಟಲಿ ಮುಚ್ಚಳದಲ್ಲಿ ಹಲ್ಲುಗಳಿಲ್ಲದೆ ಇರುವ ಬಾಟಲಿಗಳು ಸದ್ಯ ಮಾರುಕಟ್ಟೆಯಲ್ಲಿದೆ. ಈ ಮುಚ್ಚಳದಿಂದ ಬಿಯರ್ ಒಳಗಿನ ಅನಿಲದ ಒತ್ತಡ ಸಮಾನವಾಗಿರುತ್ತದೆ. ಇದರಿಂದ ಬಿಯರ್ ಫ್ರೆಶ್ ಆಗಿರುತ್ತದೆ.
ಮುಂದಿನ ಬಾರಿ ಬಿಯರ್ ಕುಡಿಯುವಾಗ ಲೆಕ್ಕ ಹಾಕಿ
ಮುಂದಿನ ಬಾರಿ ಬಿಯರ್ ಕುಡಿಯುವಾಗ ಬಿಯರ್ ಮುಚ್ಚಳ ಕುರಿತು ಲೆಕ್ಕ ಹಾಕಿ. ಈ ಬಿಯರ್ ಮಚ್ಚಳದಲ್ಲಿ 21 ಹಲ್ಲುಗಳಿರುತ್ತದೆ. ಆವಿಷ್ಕಾರ, ಸಂಶೋಧನೆ ಮೂಲಕ ಮುಚ್ಚಳದ ಏಣುಗಳನ್ನು ನಿರ್ಧರಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

