ಸೊಸೆಗೆ ಅತ್ತೆ ಹೇಳಿಕೊಟ್ಟ ಹಳ್ಳಿ ಶೈಲಿಯ ಉಪ್ಪಿಟ್ಟು ರೆಸಿಪಿ; ತಿಂದವ್ರು ಅಂತಾರೆ ವಾವ್!
Uppitu Making: ಕಡಿಮೆ ಪದಾರ್ಥಗಳಿಂದ ರುಚಿಕರವಾದ ಹಳ್ಳಿ ಶೈಲಿಯ ಉಪ್ಪಿಟ್ಟು ತಯಾರಿಸುವ ವಿಧಾನ. ಈ ರುಚಿಯಾದ ಉಪ್ಪಿಟ್ಟು ಮಾಡುವ ವಿಧಾನ ಇಲ್ಲಿದೆ ನೋಡಿ

ಇಂದು ಯಾವುದೇ ಅಡುಗೆ ಮಾಡಿದ್ರೂ ಅದಕ್ಕೆ ಎಲ್ಲವನ್ನು ಹಾಕಿ, ಅದರ ರುಚಿಯನ್ನು ಹಾಳು ಮಾಡುತ್ತಾರೆ. ಅಂತಹ ಅಡುಗೆಯಲ್ಲೊಂದು ಬೆಳಗಿನ ಎವರ್ ಗ್ರೀನ್ ತಿಂಡಿ ಉಪ್ಪಿಟ್ಟು, ಇಂದು ಉಪ್ಪಿಟ್ಟು ಅಂದ್ರೆ ಮನೆಯಲ್ಲಿರೋ ಎಲ್ಲಾ ತರಕಾರಿ ಸೇರಿಸುತ್ತಾರೆ. ನಂತರ ಉಪ್ಪಿಟ್ಟು ಬದಲಾಗಿ ಪುಲಾವ್ ಅಥವಾ ರವೆ ವೆಜ್ ಬಾತ್ ಆಗುತ್ತದೆ.
ಇಂದು ನಾವು ಹಳ್ಳಿ ಶೈಲಿಯಲ್ಲಿ ಉಪ್ಪಿಟ್ಟು ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಕಡಿಮೆ ಪದಾರ್ಥ ಬಳಸಿ ರುಚಿಕರವಾದ ಉಪ್ಪಿಟ್ಟು ತಯಾರಿಸಬಹುದು. ಒಂದು ಕಾಲದಲ್ಲಿ ಉಪ್ಪಿಟ್ಟು ಲಕ್ಷುರಿ ತಿಂಡಿಗಳಲ್ಲಿ ಒಂದಾಗಿತ್ತು.
ಹಳ್ಳಿ ಶೈಲಿ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು
ದಪ್ಪ ರವೆ: 1 ಕಪ್, ಈರುಳ್ಳಿ: 1 (ದೊಡ್ಡ ಗಾತ್ರದ್ದು), ಹಸಿ ಮೆಣಸಿನಕಾಯಿ: 2, ಟೊಮೆಟೋ: 1, ಸಾಸವೆ-ಜೀರಿಗೆ: 1 ಟೀ ಸ್ಪೂನ್, ಕರೀಬೇವು: 5 ರಿಂದ 6 ಎಲೆ, ಶೇಂಗಾ: 10 ರಿಂದ 15 , ಎಣ್ಣೆ: 3 ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ
ಹಳ್ಳಿ ಶೈಲಿ ಉಪ್ಪಿಟ್ಟು ಮಾಡುವ ವಿಧಾನ
*ಮೊದಲಿಗೆ ರವೆಗೆ 1 ಟೀ ಸ್ಪೂನ್ ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಪರಿಮಳ ಬರೋಬವರೆಗೂ ಹುರಿದುಕೊಂಡು ಎತ್ತಿಟ್ಟುಕೊಳ್ಳಿ. ನಂತರ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪು ಕತ್ತರಿಸಿಕೊಳ್ಳಿ.
ಆನಂತರ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಳಿ. ಇದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ, ಜೀರಿಗೆ, ಶೇಂಗಾ ಹಾಕಿಕೊಳ್ಳಬೇಕು. ಆನಂತರ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೋ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಕರೀಬೇವು, ಅರಿಶಿನ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಒಂದೂವರೆ ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಕುದಿಯಲು ಶುರು ಮಾಡುತ್ತಿದ್ದಂತೆ ಹುರಿದಿಟ್ಟುಕೊಂಡಿರುವ ರವೆ ಸೇರಿಸಿ ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ನೀರಿನಂಶ ಕಡಿಮೆ ಆಗುತ್ತಿದ್ದಂತೆ ಒಲೆ ಆಫ್ ಮಾಡಿ ಕೋತಂಬರಿ ಸೊಪ್ಪು ಸೇರಿಸಿ ಮುಚ್ಚಳ ಮುಚ್ಚಿ. 10 ನಿಮಿಷದ ನಂತರ ಮುಚ್ಚಳ ತೆಗೆದ್ರೆ ರುಚಿಯಾಗಿರೀ ಮೃದು ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.