Kitchen Hacks: ಮೊಳಕೆ ಬರದ ಹಾಗೆ ಆಲೂಗಡ್ಡೆಯನ್ನು ತಾಜಾವಾಗಿ ಹೀಗೆ ಶೇಖರಿಸಿಡಿ!
ಆಲೂಗಡ್ಡೆ ಮೊಳಕೆಯೊಡೆಯದಂತೆ ತಾಜಾವಾಗಿಡಲು ಫ್ರಿಜ್ ಬಳಸಬೇಡಿ. ಬೆಳಕು, ಗಾಳಿ ಬರುವ ಜಾಗದಲ್ಲಿ ಕಾಗದದ ಚೀಲ ಅಥವಾ ಬುಟ್ಟಿಯಲ್ಲಿ ಶೇಖರಿಸಿ. ಈರುಳ್ಳಿ, ಬಾಳೆಹಣ್ಣಿನ ಜೊತೆ ಇಡಬೇಡಿ.

ಎಲ್ಲರ ಮನೆಯ ಅಡುಗೆಮನೆಯಲ್ಲೂ ಸ್ಥಾನ ಪಡೆಯುವ ತರಕಾರಿ ಒಂದಿದ್ದರೆ ಅದು ಆಲೂಗಡ್ಡೆ. ಏನೂ ಇಲ್ಲದೇ ಇದ್ದರೂ, ಕೊನೆಗೆ ರುಚಿಕರವಾಗಿ ಆಲೂಗಡ್ಡೆ ಪಲ್ಯ ಮಾಡಿದರೂ ಒಂದೊತ್ತಿನ ಊಟ ನೆಮ್ಮದಿಯಿಂದ ಆಗುತ್ತದೆ.
ಆದರೆ, ಆಲೂಗಡ್ಡೆ ಮೊಳಕೆ ಒಡೆದಾಗ ಎಂದಿನ ಟೇಸ್ಟ್ ಇರೋದಿಲ್ಲ. ಅದನ್ನು ಹಾಗೇ ಬಿಟ್ಟರೆ ಕೊಳೆತು ಹೋಗುತ್ತದೆ. ಆದರೆ, ಆಲೂಗಡ್ಡೆ ಮೊಳಕೆಯೊಡೆಯದೇ ತಾಜಾವಾಗಿ ಹಲವು ದಿನಗಳ ಕಾಲ ಶೇಖರಿಸಿಡುವ ವಿಧಾನ ಇಲ್ಲಿದೆ.
ಆಲೂಗಡ್ಡೆಯನ್ನು ತಂಪಾಗಿರುವ, ಗಾಳಿ ಹಾಗೂ ಬೆಳಕು ಬರುವ ಜಾಗದಲ್ಲಿ ಇಡಬೇಕು. ಸಾಧ್ಯವಾದಷ್ಟು ಫ್ರಿಜ್‌ನಲ್ಲಿ ಇಡುವುದಕ್ಕೆ ಹೋಗಬೇಡಿ. ತುಂಬಾ ತಂಪನೆಯ ವಾತಾವರಣ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ, ಇದರಿಂದ ಆಲೂಗಡ್ಡೆಯ ರುಚಿ ಬದಲಾಗುತ್ತದೆ.
ಆಲೂಗಡ್ಡೆಗಳನ್ನು ಸೂರ್ಯನ ಬೆಳಕಿನಿಂದ ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು. ಹೆಚ್ಚಿನ ಬೆಳಕು ಹಸಿರೀಕರಣವನ್ನು ಪ್ರಚೋದಿಸಿ ಕ್ಲೋರೊಫಿಲ್ ಅನ್ನು ಉತ್ಪಾದಿಸುತ್ತದೆ. ಹಸಿರುಗೊಳಿಸುವಿಕೆಯು ಆಲೂಗಡ್ಡೆಯನ್ನು ಕಹಿಯಾಗಿಸುತ್ತದೆ, ಇದರಿಂದ ರುಚಿಯು ಬದಲಾಗುತ್ತದೆ.
ಕಪ್ಪಾದ ಕಲೆ ಇರೋ ಹಾಳಾದ ಆಲೂಗಡ್ಡೆಯನ್ನು ಖರೀದಿಸಬೇಡಿ. ಮಾರುಕಟ್ಟೆಯಿಂದ ತಂದ ಈ ತರಕಾರಿಯನ್ನು ತಂಪಾದ, ಶುಷ್ಕ ಮತ್ತು ಗಾಢವಾದ ಸ್ಥಳದಲ್ಲಿ ಇಡಬೇಕು.
ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ರಾಶಿ ರಾಶಿ ತಂದಿಡೋದನ್ನು ತಪ್ಪಿಸುವುದು. ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸುವುದು ಉತ್ತಮ.
ಹೆಚ್ಚುವರಿ ತೇವಾಂಶವು ಮೊಳಕೆಯೊಡೆಯಲು ಕಾರಣವಾಗುತ್ತದೆ. ಹೀಗಾಗಿ ಮುಚ್ಚಿದ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದದ ಚೀಲ, ಗೋಣಿ ಚೀಲ ಹಾಗೂ ಬುಟ್ಟಿಯಂತಹ ಗಾಳಿಯಾಡುವ ಕಂಟೇನರ್‌ನಲ್ಲಿ ಆಲೂಗಡ್ಡೆ ಸಂಗ್ರಹಿಸಿಡುವುದು ಒಳ್ಳೆಯದು.
ಬರೀ ಮೂರು ಊಟದ ಸಹಾಯ, ನಾಲ್ಕು ತಿಂಗಳಲ್ಲೇ 27 ಕೆಜಿ ಕಡಿಮೆಯಾದ ವ್ಯಕ್ತಿ!
ಆಲೂಗಡ್ಡೆಯನ್ನು ಈರುಳ್ಳಿ ಅಥವಾ ಬಾಳೆಹಣ್ಣಿನೊಂದಿಗೆ ಶೇಖರಿಸಬೇಡಿ. ಇವುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಆಲೂಗಡ್ಡೆ ವೇಗವಾಗಿ ಮೊಳಕೆಯೊಡೆಯುತ್ತವೆ.
ಒಂದೇ ವಾರದಲ್ಲಿ ಬೋಳು ತಲೆ; 3 ಗ್ರಾಮದ ಜನರಲ್ಲಿ ಶುರುವಾಯ್ತು ಆತಂಕ, ತನಿಖೆ ಆರಂಭ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.