ಅನ್ನ ಹೂವಿನ ಹಾಗೆ ಸಾಫ್ಟ್ ಆಗಿ ಬರಬೇಕೆಂದ್ರೆ ಇದೊಂದು ಪದಾರ್ಥ ಸೇರಿಸಿ
Rice Cooking Hack: ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಬಹುಶಃ ಸರಿಯಾದ ಅಡುಗೆ ಹಂತ ಅನುಸರಿಸದಿರುವುದೇ ಕಾರಣವಾಗಿರಬಹುದು. ಅಂದಹಾಗೆ ನಿಮ್ಮ ಅನ್ನವು ಪರ್‌ಫೆಕ್ಟ್ ಆಗಿ ಬರಬೇಕೆಂದು ನೀವು ಬಯಸಿದರೆ ಈ ಟಿಪ್ಸ್ ಟ್ರೈ ಮಾಡಿ ನೋಡಿ..

ಈ ಟಿಪ್ಸ್ ಟ್ರೈ ಮಾಡಿ
ಬಹುತೇಕರ ಮನೆಯಲ್ಲಿ ಅದರಲ್ಲೂ ದಕ್ಷಿಣ ಭಾರತೀಯರು ಪ್ರತಿದಿನ ಅನ್ನ ಮಾಡ್ತಾರೆ. ಅನ್ನ ಮಾಡಲು ಯಾವುದೇ ಎಕ್ಸ್ಟ್ರಾ ಪದಾರ್ಥಗಳು ಬೇಕಾಗಿಲ್ಲ. ಆದರೆ ಜನರು ಸಾಮಾನ್ಯವಾಗಿ ಅನ್ನ ಸಾಫ್ಟ್ ಆಗಿಲ್ಲ ಅಥವಾ ಸರಿಯಾಗಿ ಬೆಂದಿಲ್ಲ ಎಂದು ಬೇಸರಪಟ್ಟಿಕೊಳ್ತಾರೆ. ಕೆಲವೊಮ್ಮೆ, ಅನ್ನವು ತುಂಬಾ ಮೆತ್ತಗಾದರೆ, ಮತ್ತೆ ಕೆಲವೊಮ್ಮೆ ಸರಿಯಾಗಿ ಬೆಂದೇ ಇರುವುದಿಲ್ಲ. ಅಕ್ಕಿ ಹಾಗೇ ಇರುತ್ತದೆ. ಸಿಕ್ಕಾಪಟ್ಟೆ ಬೆಂದರೆ ಅದು ಅನ್ನದ ರುಚಿಯನ್ನು ಹಾಳುಮಾಡಬಹುದು. ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಬಹುಶಃ ಸರಿಯಾದ ಅಡುಗೆ ಹಂತ ಅನುಸರಿಸದಿರುವುದೇ ಕಾರಣವಾಗಿರಬಹುದು. ಅಂದಹಾಗೆ ನಿಮ್ಮ ಅನ್ನವು ಪರ್‌ಫೆಕ್ಟ್ ಆಗಿ ಬರಬೇಕೆಂದು ನೀವು ಬಯಸಿದರೆ ಈ ಟಿಪ್ಸ್ ಟ್ರೈ ಮಾಡಿ ನೋಡಿ..
ಚೆನ್ನಾಗಿ ತೊಳೆಯಿರಿ
ಅಕ್ಕಿ ಬೇಯಿಸುವಾಗ ಅದನ್ನು ಚೆನ್ನಾಗಿ ತೊಳೆಯುವುದು ಮುಖ್ಯ. ಅಂದರೆ ಅಕ್ಕಿಯನ್ನು ಕನಿಷ್ಠ 3 ರಿಂದ 4 ಬಾರಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಇದನ್ನು ನೆನಪಿನಲ್ಲಿಡಿ
ನೀವು ಅನ್ನ ಮಾಡುವ ಮೊದಲು ಅಕ್ಕಿಯನ್ನು ಕನಿಷ್ಠ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಅಕ್ಕಿಯನ್ನು ಆ ನೀರಿನಿಂದ ಬಸಿದು ಅನ್ನಕ್ಕಿಡಿ.
ತುಪ್ಪ ಬಳಸಿ
ಅನ್ನ ಸಾಫ್ಟ್ ಆಗಿ ಬರಲು ನೀವು ತುಪ್ಪ ಅಥವಾ ಎಣ್ಣೆಯನ್ನು ಸಹ ಬಳಸಬಹುದು. ಅಕ್ಕಿ ಬೇಯುವಾಗ ನೀರಿಗೆ ಎಣ್ಣೆ ಅಥವಾ ತುಪ್ಪವನ್ನು ಸೇರಿಸಬಹುದು. ಇದರಿಂದ ಅನ್ನ ಹೂವಿನ ಹಾಗೆ ಅರಳುತ್ತದೆ.
ಅನ್ನ ಬೇಯಿಸುವಾಗ
ಕೆಲವರು ನೀರು ಬತ್ತಿಸಿ ಅನ್ನ ಮಾಡ್ತಾರೆ. ಮತ್ತೆ ಕೆಲವರು ಅಕ್ಕಿಗೆ ಹೆಚ್ಚು ನೀರು ಸೇರಿಸಿ ಅಕ್ಕಿ ಮುಕ್ಕಾಲು ಭಾಗ ಬೆಂದ ನಂತರ ನೀರನ್ನು ಬಸಿದು, ಮತ್ತೆ ಸಣ್ಣ ಉರಿಯಲ್ಲಿಟ್ಟು ಅನ್ನ ಮಾಡಿಕೊಳ್ಳುತ್ತಾರೆ. ನೀವು ಯಾವುದೇ ಅನ್ನ ಮಾಡುವಾಗಲೂ ನೀರಿನ ಪ್ರಮಾಣ ಬಹಳ ಮುಖ್ಯ. ಇದು ಕೆಲವೊಮ್ಮೆ ಅಕ್ಕಿಯ ಜಾತಿಯ ಮೇಲೆ ಡಿಪೆಂಡ್ ಆಗುತ್ತದೆ. ಆದ್ದರಿಂದ ಅಕ್ಕಿ ಬೆಂದಿದೆಯಾ ಚೆಕ್ ಮಾಡಿಕೊಂಡು ನಂತರ ಇಳಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

