Fridge storage guide: ಮರೆತೂ ಕೂಡ ಈ 5 ಆಹಾರವನ್ನ ಫ್ರಿಡ್ಜ್‌ನಲ್ಲಿ ಇಡ್ಬೇಡಿ
Common fridge mistakes: "ತಿಳಿದೋ, ತಿಳಿಯದೋ ಕೆಲವು ಆಹಾರ ಪದಾರ್ಥಗಳನ್ನ ಫ್ರಿಜ್‌ನಲ್ಲಿ ಇಡುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು" ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಂಗ್ರಹಿಸಬಾರದ 5 ಪ್ರಮುಖ ಪದಾರ್ಥ
ಬಡವ, ಶ್ರೀಮಂತ ಎನ್ನದೆ ಇಂದು ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್‌ಗಳಿವೆ. ಹಾಗಾಗಿಯೇ ಆಹಾರ ಸ್ವಲ್ಪ ಉಳಿದರೂ ಎಲ್ಲವನ್ನೂ ಫ್ರಿಜ್‌ನಲ್ಲೇ ತುಂಬಲಾಗುತ್ತೆ. ಆಹಾರವನ್ನ ದೀರ್ಘಕಾಲದವರೆಗೆ ಕೆಡದಂತೆ ಫ್ರೆಶ್ ಆಗಿಡಲು ಫ್ರಿಜ್ ಬಳಸುವುದು ಸಾಮಾನ್ಯ. "ಆದರೆ ತಿಳಿದೋ, ತಿಳಿಯದೋ ಕೆಲವು ಆಹಾರ ಪದಾರ್ಥಗಳನ್ನ ಫ್ರಿಜ್‌ನಲ್ಲಿ ಇಡುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು" ಎಂದು ತಜ್ಞರು ಎಚ್ಚರಿಸಿದ್ದಾರೆ. ಪೌಷ್ಟಿಕತಜ್ಞೆ ಸಿಮ್ರತ್ ಕಥುರಿಯಾ (Nutritionist Simrat Kathuria) ಪ್ರಕಾರ, ಫ್ರಿಜ್‌ನಲ್ಲಿ ಸಂಗ್ರಹಿಸಬಾರದ 5 ಪ್ರಮುಖ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಟೊಮೆಟೊ
ಶೇ. 99 ರಷ್ಟು ಜನರು ಟೊಮೆಟೊವನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಫ್ರಿಡ್ಜ್ ಅವುಗಳ ಪ್ರಮುಖ ಉತ್ಕರ್ಷಣ ನಿರೋಧಕ ಲೈಕೋಪೀನ್ ಮತ್ತು ಪರಿಮಳವನ್ನು ತೆಗೆದುಹಾಕುತ್ತದೆ. ಲೈಕೋಪೀನ್ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸೂರ್ಯನ ಬೆಳಕಿನಿಂದ ದೂರದಲ್ಲಿ ಹಾಗೂ ಕೋಣೆಯ ಉಷ್ಣಾಂಶದಲ್ಲಿ ಟೊಮೆಟೊಗಳನ್ನು ಸಂಗ್ರಹಿಸುವುದು ಉತ್ತಮ.
ಉಳಿದ ಫ್ರೂಟ್ ಜ್ಯೂಸ್
ಉಳಿದ ಫ್ರೂಟ್ ಜ್ಯೂಸ್ ಫ್ರಿಡ್ಜ್‌ನಲ್ಲಿ ದೀರ್ಘಕಾಲ ಇಡುವುದು ಆರೋಗ್ಯಕ್ಕೆ ಹಾನಿಕಾರಕ. ಅದರ ತಾಜಾತನ ಮತ್ತು ಪೋಷಕಾಂಶಗಳು ಕಡಿಮೆಯಾಗುತ್ತವೆ. ಜ್ಯೂಸ್ ಅನ್ನು ಯಾವಾಗಲೂ ಫ್ರೆಶ್ ಆಗಿ ಕುಡಿಯಬೇಕು. ಅದನ್ನು ಸಂಗ್ರಹಿಸಬೇಕಾದರೆ ತಜ್ಞರು ಅದನ್ನು ಫ್ರಿಡ್ಜ್‌ಗಿಂತ ಫ್ರೀಜರ್‌ನಲ್ಲಿ ಇಡಲು ಸಲಹೆ ನೀಡುತ್ತಾರೆ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಈ ಪೇಸ್ಟ್ ಅನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚಾಗುತ್ತದೆ. ಫುಡ್ ಪಾಯಿಸನ್ ಅಪಾಯ ಹೆಚ್ಚಾಗುತ್ತದೆ. ಇದನ್ನು ಸಣ್ಣ ಪ್ರಮಾಣದಲ್ಲಿ ತಯಾರಿಸಿ ಬಳಸುವುದು ಅಥವಾ ಫ್ರೀಜರ್ ನಲ್ಲಿ ಸರಿಯಾಗಿ ಸಂಗ್ರಹಿಸುವುದು ಉತ್ತಮ.
ಉಳಿದ ಹಿಟ್ಟು
ಅನೇಕ ಜನರು ಮಾಡುವ ದೊಡ್ಡ ತಪ್ಪು ಎಂದರೆ ಚಪಾತಿ ಮಾಡಿದ ನಂತರ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವುದು. ಈ ರೀತಿ ಸಂಗ್ರಹಿಸಿದ ಹಿಟ್ಟು ಬೇಗನೆ ಹುದುಗಲು ಪ್ರಾರಂಭಿಸುತ್ತದೆ. ಈ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ತಿನ್ನುವುದರಿಂದ ಗ್ಯಾಸ್ ಮತ್ತು ಅಸ್ತಮಾ ಸಮಸ್ಯೆಗಳು ಹೆಚ್ಚಾಗಬಹುದು. ಹಿಟ್ಟನ್ನು ತಕ್ಷಣ ಬಳಸಬೇಕು ಅಥವಾ ತಾಜಾ ಹಿಟ್ಟಿನಿಂದ ತಯಾರಿಸಬೇಕು.
ನಿಂಬೆ ಹೋಳುಗಳು
ಫ್ರಿಡ್ಜ್‌ನಲ್ಲಿ ಇಟ್ಟಾಗ ನಿಂಬೆ ಹೋಳುಗಳು ಬೇಗನೆ ಆಕ್ಸಿಡೀಕರಣಗೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮಲ್ಲಿ ಬಹಳಷ್ಟು ಹೋಳುಗಳಿದ್ದರೆ ಅವುಗಳಿಂದ ರಸವನ್ನು ಹಿಂಡಿ ಐಸ್ ಟ್ರೇನಲ್ಲಿ ಸಂಗ್ರಹಿಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

